ಕ್ರಿಕೆಟ್

ಏಷ್ಯಾಕಪ್ 2018: ಬ್ಯಾಟಿಂಗ್ ನಲ್ಲಿ ಅಲ್ಲ, ಫೀಲ್ಡಿಂಗ್ ನಲ್ಲಿ ಅಪರೂಪದ ದಾಖಲೆ ಬರೆದ ಶಿಖರ್ ಧವನ್!

ದುಬೈನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಬ್ಯಾಟಿಂಗ್ ನಿಂದ ಅಷ್ಟೇ ಅಲ್ಲ, ಫೀಲ್ಡಿಂಗ್ ನಲ್ಲೂ ಅವರು ಅಪರೂಪದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.

ಏಷ್ಯಾಕಪ್ 2018: ಬ್ಯಾಟಿಂಗ್ ನಲ್ಲಿ ಅಲ್ಲ, ಫೀಲ್ಡಿಂಗ್ ನಲ್ಲಿ ಅಪರೂಪದ ದಾಖಲೆ ಬರೆದ ಶಿಖರ್ ಧವನ್!
ಸಂಗ್ರಹ ಚಿತ್ರ
Published On :
ದುಬೈ: ದುಬೈನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಬ್ಯಾಟಿಂಗ್ ನಿಂದ ಅಷ್ಟೇ ಅಲ್ಲ, ಫೀಲ್ಡಿಂಗ್ ನಲ್ಲೂ ಅವರು ಅಪರೂಪದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.
ನಿನ್ನೆ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಶಿಖರ್ ಧವನ್ ಫೀಲ್ಡಿಂಗ್ ವೇಳೆ ಅಪರೂಪದ ದಾಖಲೆ ಬರೆದಿದ್ದು, ಏಕದಿನ ಇನಿಂಗ್ಸ್‌ವೊಂದರಲ್ಲಿ ನಾಲ್ಕು ಕ್ಯಾಚ್ ಗಳನ್ನು ಪಡೆದು ಖ್ಯಾತನಾಮರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಧವನ್ ಶುಕ್ರವಾರ ನಡೆದ ಏಶ್ಯಕಪ್ ನ ಸೂಪರ್-4 ಪಂದ್ಯದಲ್ಲಿ ಬಾಂಗ್ಲಾದೇಶದ ನಝ್ಮುಲ್ ಹುಸೇನ್, ಶಕೀಬ್ ಅಲ್ ಹಸನ್, ಮೆಹಿದಿ ಹಸನ್ ಹಾಗೂ ಮುಸ್ತಫಿಜುರ್ ರೆಹಮಾನ್ ನೀಡಿದ ಕ್ಯಾಚ್ ಗಳನ್ನು ಪಡೆದಿದ್ದಾರೆ. ಆ ಮೂಲಕ ಏಕದಿನದ ಇನಿಂಗ್ಸ್ ವೊಂದರಲ್ಲಿ ನಾಲ್ಕು ಕ್ಯಾಚ್ ಗಳನ್ನು ಪಡೆದ ಭಾರತದ ಏಳನೇ ಆಟಗಾರ ಎಂಬ ಕೀರ್ತಿಗೆ ಧವನ್ ಪಾತ್ರರಾದರು.
ಈ ಹಿಂದೆ ಇಂತಹ ಸಾಧನೆಯನ್ನು ಸುನಿಲ್ ಗವಾಸ್ಕರ್(1985ರಲ್ಲಿ ಶಾರ್ಜಾದಲ್ಲಿ ಪಾಕಿಸ್ತಾನದ ವಿರುದ್ಧ), ಮುಹಮದ್ ಅಜರುದ್ದೀನ್(1997ರಲ್ಲಿ ಪಾಕಿಸ್ತಾನ ವಿರುದ್ಧ ಟೊರಾಂಟೊದಲ್ಲಿ),ಸಚಿನ್ ತೆಂಡೂಲ್ಕರ್(1998ರಲ್ಲಿ ಢಾಕಾದಲ್ಲಿ ಪಾಕಿಸ್ತಾನ ವಿರುದ್ಧ), ರಾಹುಲ್ ದ್ರಾವಿಡ್(1999ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಟೊರಾಂಟೊದಲ್ಲಿ), ಮಹಮ್ಮದ್ ಕೈಫ್(2003ರಲ್ಲಿ ಜೋಹಾನ್ಸ್ ಬರ್ಗ್‌ನಲ್ಲಿ ಶ್ರೀಲಂಕಾ ವಿರುದ್ಧ) ಹಾಗೂ 2004ರಲ್ಲಿ ಪರ್ತ್ ನಲ್ಲಿ ಜಿಂಬಾಬ್ವೆ ವಿರುದ್ಧ ವಿವಿಎಸ್ ಲಕ್ಷ್ಮಣ್ ಈ ಸಾಧನೆ ಮಾಡಿದ್ದರು.
ಇನ್ನು ಪಟ್ಟಿಯಲ್ಲಿ ದಕ್ಷಿಣ ಆಫ್ರಿಕದ ಜಾಂಟಿ ರೋಡ್ಸ್ ಏಕದಿನ ಇನಿಂಗ್ಸ್ ವೊಂದರಲ್ಲಿ ಗರಿಷ್ಠ ಕ್ಯಾಚ್ ಪಡೆದ ವಿಶ್ವದ ಮೊದಲ ಆಟಗಾರರಾಗಿದ್ದಾರೆ. ರೋಡ್ಸ್ 1993ರಲ್ಲಿ ಮುಂಬೈನಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಪಂದ್ಯದಲ್ಲಿ 5 ಕ್ಯಾಚ್ ಗಳನ್ನು ಪಡೆದಿದ್ದರು.
ಏಷ್ಯಾಕಪ್‌ನಲ್ಲಿ 96.38ರ ಸರಾಸರಿಯಲ್ಲಿ 3 ಪಂದ್ಯಗಳಲ್ಲಿ 213 ರನ್ ಗಳಿಸಿರುವ ಧವನ್ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಧವನ್ ಬಾಂಗ್ಲಾದೇಶ ವಿರುದ್ದ ಸೂಪರ್-4 ಪಂದ್ಯದಲ್ಲಿ 47 ಎಸೆತಗಳಲ್ಲಿ 40 ರನ್ ಗಳಿಸಿ ಭಾರತ 36.2 ಓವರ್‌ಗಳಲ್ಲಿ ಗೆಲುವಿನ ದಡ ಸೇರಲು ನೆರವಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.