ಭಾರತ ವಿರುದ್ಧ ಪಾಕ್ ಸೋತರು, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಗೆದ್ದ ಪಾಕ್ ಬೆಡಗಿ!
ಟಿ20 ವಿಶ್ವಕಪ್ ಸೋಲಿನ ಪ್ರತಿಕಾರವಾಗಿ ಏಷ್ಯಾಕಪ್ ಟೂರ್ನಿಯ ಪಂದ್ಯದಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು ಇದೇ ಪಂದ್ಯದಲ್ಲಿ ಪಾಕ್ ಸೋಲಿನ...

Published On :
ದುಬೈ: ಟಿ20 ವಿಶ್ವಕಪ್ ಸೋಲಿನ ಪ್ರತಿಕಾರವಾಗಿ ಏಷ್ಯಾಕಪ್ ಟೂರ್ನಿಯ ಪಂದ್ಯದಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು ಇದೇ ಪಂದ್ಯದಲ್ಲಿ ಪಾಕ್ ಸೋಲಿನ ನಡುವೆ ಪಾಕ್ ಬೆಡಗಿಯೊಬ್ಬಳು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಾಳೆ.
ಪಾಕ್ ಮತ್ತು ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಪಾಕ್ ಸೋಲು ಖಚಿತವಾಗುತ್ತಿದಂತೆ ಕ್ಯಾಮೆರಾಮನ್ ಪ್ರೇಕ್ಷಕರ ಸಂಭ್ರಮಾಚರಣೆ ಸೆರೆಹಿಡಿಯಲು ಮುಂದಾಗಿದ್ದು ಈ ವೇಳೆ ಯುವತಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾಳೆ. ಇದನ್ನು ಕಂಡ ಹಲವು ಅಭಿಮಾನಿಗಳು ಮತ್ತೆ ಯುವತಿಯನ್ನು ಕಾಣಲು ಇಂಡೋ ಪಾಕ್ ನಡುವೆ ಮತ್ತಷ್ಟು ಪಂದ್ಯಗಳನ್ನು ಆಯೋಚಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.
ಪಾಕ್ ಯುವತಿಯ ಫೋಟೋಗಳನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳು ಭರ್ಜರಿ ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ಕೆಲವರು ಪಂದ್ಯದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು ಎಂದು ಶೀರ್ಷಿಕೆ ನೀಡಿ ಫೋಟೋ ಶೇರ್ ಮಾಡಿದ್ದಾರೆ.
ಟೀಂ ಇಂಡಿಯಾ ವಿರುದ್ಧ ಪಾಕ್ ಸೋಲು ಖಚಿತವಾಗಿದ್ದರೂ ತಂಡದ ಜರ್ಸಿ ತೊಟ್ಟಿದ್ದ ಯುವತಿ ಮಾತ್ರ ಆಟಗಾರರಿಗೆ ಬೆಂಬಲವಾಗಿ ನಿಂತಿದ್ದಳು. ಕೆಲವೇ ಸೆಕೆಂಡ್ ಗಳು ಮಾತ್ರ ಯುವತಿ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡರೂ ಭಾರತೀಯ ಅಭಿಮಾನಿಗಳ ಮನಗೆದ್ದಿದ್ದಾಳೆ.
This sum up today's match
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಟೀಂ ಇಂಡಿಯಾTeam IndiaPakistanಪಾಕಿಸ್ತಾನRohit Sharmaರೋಹಿತ್ ಶರ್ಮಾPak Girlಭಾರತೀಯ ಅಭಿಮಾನಿAsia Cup Cricketಏಷ್ಯಾಕಪ್ ಕ್ರಿಕೆಟ್Indian Fansಪಾಕ್ ಬೆಡಗಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


