ಕ್ರಿಕೆಟ್

ಹೈವೋಲ್ಟೇಜ್ ಕದನದಲ್ಲಿ ಭಾರತಕ್ಕೆ ದಕ್ಕಿದ್ದು ಸಾಮಾನ್ಯ ಗೆಲುವಲ್ಲ, ದಾಖಲೆಯ ಜಯ!

ಏಷ್ಯಾ ಕಪ್ 2018 ಟೂರ್ನಿಯ ಕೇಂದ್ರ ಬಿಂದುವಾಗಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಆದರೆ ಇದು ಸಾಮಾನ್ಯ ಗೆಲುವಲ್ಲ.. ಐತಿಹಾಸಿಕ ದಾಖಲೆಯ ಜಯ..

ಹೈವೋಲ್ಟೇಜ್ ಕದನದಲ್ಲಿ ಭಾರತಕ್ಕೆ ದಕ್ಕಿದ್ದು ಸಾಮಾನ್ಯ ಗೆಲುವಲ್ಲ, ದಾಖಲೆಯ ಜಯ!
ಸಂಗ್ರಹ ಚಿತ್ರ
Published On :
ದುಬೈ: ಏಷ್ಯಾ ಕಪ್ 2018 ಟೂರ್ನಿಯ ಕೇಂದ್ರ ಬಿಂದುವಾಗಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಆದರೆ ಇದು ಸಾಮಾನ್ಯ ಗೆಲುವಲ್ಲ.. ಐತಿಹಾಸಿಕ ದಾಖಲೆಯ ಜಯ..
ಹೌದು.. ಭಾರತ ಮತ್ತು ಪಾಕಿಸ್ತಾನ ತಂಡಗಳು ನಡುವಿನ ಪಂದ್ಯಗಳ ಅಂಕಿ ಅಂಶಗಳನ್ನು ಗಮನಿಸಿದರೆ ಇದು ಪಾಕಿಸ್ತಾನದ ವಿರುದ್ಧ ಸಿಕ್ಕ ಅತೀ ದೊಡ್ಡ ಗೆಲುವು ಎಂಬುದು ತಿಳಿಯುತ್ತದೆ. ನಿನ್ನೆಯ ಪಂದ್ಯದಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ  ಪಾಕಿಸ್ತಾನದ ವಿರುದ್ಧ ಎಂಟು ವಿಕೆಟ್ ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಅಷ್ಟು ಮಾತ್ರವಲ್ಲದೇ ಟೀಮ್ ಇಂಡಿಯಾ ಗೆದ್ದಾಗ ಇನ್ನು 126 ಎಸೆತಗಳು ಬಾಕಿ ಉಳಿದಿತ್ತು. 
ಚೇಸಿಂಗ್ ವೇಳೆ ಇಷ್ಟು ಪ್ರಮಾಣದ ಎಸೆತಗಳ ಬಾಕಿ ಇರುವಂತೆ ಭಾರತ ಜಯಿಸಿರುವುದು ಇದೇ ಮೊದಲು. 2006ರಲ್ಲಿ ಮುಲ್ತಾನ್ ನಲ್ಲಿ 105 ಎಸೆತಗಳು ಬಾಕಿ ಉಳಿದಿರುವುದು ಈ ಹಿಂದಿನ ಶ್ರೇಷ್ಠ ಸಾಧನೆಯಾಗಿತ್ತು. ಅಂದು ಭಾರತ 162 ರನ್ ಗುರಿ ಬೆನ್ನಟ್ಟಿತ್ತು. ಇನ್ನು 1997ರಲ್ಲಿ ಟೊರಾಂಟೊದಲ್ಲಿ 117 ರನ್ ಗುರಿ ಬೆನ್ನಟ್ಟಿದ ಭಾರತ 105 ಎಸೆತಗಳು ಬಾಕಿ ಉಳಿದಿರುವಂತೆಯೇ ಗುರಿ ಮುಟ್ಟಿತ್ತು. 
162 ರನ್ ಗಳ ಗುರಿ ಹಿಂಬಾಲಿಸಿದ್ದ ಟೀಮ್ ಇಂಡಿಯಾ 29 ಓವರ್ ಗಳಲ್ಲೇ ಎರಡು ವಿಕೆಟ್ ನಷ್ಟಕ್ಕೆ ಗೆಲುವು ದಾಖಲಿಸಿತ್ತು. ಇದೀಗ ಭಾನುವಾರ ನಡೆಯಲಿರುವ ಸೂಪರ್ ಫೋರ್ ಹಂತದ ಪಂದ್ಯದಲ್ಲೂ ಭಾರತ ಮತ್ತದೇ ಪಾಕಿಸ್ತಾನದ ವಿರುದ್ಧ ಸೆಣಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.