ಇಂಡೋ-ಪಾಕ್ ಹೈ ವೋಲ್ಟೇಜ್ ಪಂದ್ಯದ ಗೆಲುವಿನ ಶ್ರೇಯ ಬೌಲರ್ ಗಳಿಗೆ ಸಲ್ಲಬೇಕು: ನಾಯಕ ರೋಹಿತ್ ಶರ್ಮಾ
ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ 2018 ಟೂರ್ನಿಯ ಪಂದ್ಯದ ಗೆಲುವಿನ ಸಂಪೂರ್ಣ ಶ್ರೇಯ ತಂಡದ ಬೌಲರ್ ಗಳಿಗೆ ಸಲ್ಲಬೇಕು ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

Published On :
ದುಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ 2018 ಟೂರ್ನಿಯ ಪಂದ್ಯದ ಗೆಲುವಿನ ಸಂಪೂರ್ಣ ಶ್ರೇಯ ತಂಡದ ಬೌಲರ್ ಗಳಿಗೆ ಸಲ್ಲಬೇಕು ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ ನಿಜಕ್ಕೂ ಇಂದಿನ ಗೆಲುವಿನ ಶ್ರೇಯ ಬೌಲರ್ ಗಳಿಗೆ ಸಲ್ಲಬೇಕು. ಕಠಿಣ ಪರಿಸ್ಥಿಯಲ್ಲೂ ಬೌಲರ್ ಗಳು ವಿಕೆಟ್ ಪಡೆಯುವ ಮೂಲಕ ಪಾಕಿಸ್ತಾನದ ಮೇಲೆ ಒತ್ತಡ ಹೇರಿದರು. ಪ್ರಮುಖವಾಗಿ ಭುವನೇಶ್ವರ್ ಕುಮಾರ್ ಮತ್ತು ಕೇದಾರ್ ಜಾದವ್ ಪಾಕಿಸ್ತಾನದ ಬ್ಯಾಟಿಂಗ್ ಯೋಜನೆಗಳನ್ನು ತಲೆಕೆಳಗೆ ಮಾಡಿದರು. ಹೀಗಾಗಿ ಪಾಕಿಸ್ತಾನವನ್ನು ನಾನು ಕೇವಲ 162 ರನ್ ಗಳಿಗೆ ನಿಯಂತ್ರಿಸಲು ಶಕ್ತವಾಯಿತು ಎಂದು ಹೇಳಿದರು.
'ಪಂದ್ಯದ ಆರಂಭದಿಂದಲೂ ನಾವು ಪಾಕಿಸ್ತಾನಿ ಬ್ಯಾಟ್ಸಮನ್ ಗಳ ಮೇಲೆ ಒತ್ತಡ ಹೇರಿದೆವು, ಭುವಿ ಉತ್ತಮ ಲೈನ್ ಅಂಡ್ ಲೆಂತ್ ಕಾಯ್ದುಕೊಂಡು ಬೌಲಿಂಗ್ ಮಾಡಿದರು. ಇದರಿಂದಾಗಿ ಎದುರಾಳಿಗಳಿಗೆ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆ ಬಳಿಕ ಬುಮ್ರಾ ಕೂಡ ಉತ್ತಮ ಬೌಲಿಂಗ್ ಮಾಡಿ 2 ವಿಕೆಟ್ ಕಬಳಿಸಿದರು. ನಿನ್ನೆ ಹಾಂಕಾಂಗ್ ವಿರುದ್ಧ ನಾವು ಮಾಡಿದ್ದ ತಪ್ಪುಗಳನ್ನು ಇಲ್ಲಿ ನಾವು ತಿದ್ದಿಕೊೃಳ್ಳಲೇ ಬೇಕಿತ್ತು. ಅದರಲ್ಲಿ ನಾವು ಯಶಸ್ವಿ ಕೂಡ ಆಗಿದ್ದೇವೆ. ನಿನ್ನೆ ಮಾಡಿದ ತಪ್ಪುಗಳು ಇಲ್ಲಿ ಪುನರಾವರ್ತನೆಯಾಗಲಿಲ್ಲ. ಪರಿಸ್ಥಿತಿ ಏನೇ ಇದ್ದರೂ ನಾವು ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಹೀಗಾಗಿ ಗೆಲುವು ಸಾಕಾರವಾಯಿತು ಎಂದು ಶರ್ಮಾ ಹೇಳಿದ್ದಾರೆ.
ಶೊಯೆಬ್ ಮಲ್ಲಿಕ್ ಮತ್ತು ಬಾಬರ್ ಅಜಂ ನಡುವಿನ 82 ರನ್ ಗಳ ಜೊತೆಯಾಟ ನಿಜಕ್ಕೂ ನಮಲ್ಲಿ ಒತ್ತಡ ಹೆಚ್ಚಾಗುವಂತೆ ಮಾಡಿತ್ತು. ಆರಂಭಿಕ ಆಘಾತದ ಹೊರತಾಗಿಯೂ ಪಾಕಿಸ್ತಾನ ಇವರಿಬ್ಬರ ಜೊತೆಯಾಟದಲ್ಲಿ ಚೇತರಿಸಿಕೊಂಡಿತ್ತು. ಆರಂಭಿಕ ಹತ್ತು ಓವರ್ ಗಳನ್ನು ಸಂಪೂರ್ಣ ನಮ್ಮ ಪರವಾಗಿತ್ತು. ಆದರೆ ಆ ಬಳಿಕ ಮಲ್ಲಿಕ್ ಹಾಗೂ ಬಾಬರ್ ಒತ್ತಡವನ್ನು ಉತ್ತಮವಾಗಿ ನಿಭಾಯಿಸಿದರು. ಆದರೂ ನಮ್ಮ ಬೌಲರ್ ಗಳು ದೃತಿಗೆಡದೇ ಉತ್ತಮವಾಗಿ ಬೌಲಿಂಗ್ ಮಾಡಿ ಈ ಜೋಡಿಯನ್ನು ಬೇರ್ಪಡಿಸಿತು. ಕೇದಾರ್ ಜಾದವ್ ತಮ್ಮ ಬೌಲಿಂಗ್ ಕುರಿತು ಗಂಭೀರವಾಗಿದ್ದು, ಅದನ್ನು ಉತ್ತಮ ಪಡಿಸಿಕೊಳ್ಳುವತ್ತ ಗಂಭೀರ ಚಿಂತನೆಯಲ್ಲಿದ್ದಾರೆ. ಅದಕ್ಕೆ ತಕ್ಕಂತೆ ಅಭ್ಯಾಸ ಕೂಡ ಮಾಡುತ್ತಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ಜಾದವ್ ವಿಕೆಟ್ ಪಡೆದಿದ್ದು, ತಂಡಕ್ಕೆ ನೆರವಾಯಿತು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಭಾರತDubaiದುಬೈಪಾಕಿಸ್ತಾನRohit Sharmaರೋಹಿತ್ ಶರ್ಮಾIndia vs PakistanAsia Cup 2018ಏಷ್ಯಾಕಪ್ 2018
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


