ಗೆಲುವಿನ ಟ್ರ್ಯಾಕ್ ನಲ್ಲಿದ್ದ ಹಾಂಕಾಂಗ್ ಗೆ ಮುಳುವಾದ ವೇಗಿ ಖಲೀಲ್ ಅಹ್ಮದ್ ಯಾರು ಗೊತ್ತಾ?
ಏಷ್ಯಾ ಕಪ್ 2018 ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲೇ ಭಾರತ ತಂಡ ಪ್ರಯಾಸದ ಗೆಲುವು ಸಾಧಿಸಿದೆ. ಅದೂ ಕೂಡ ಹಾಂಕಾಂಗ್ ನಂತಹ ಕ್ರಿಕೆಟ್ ಶಿಶು ಎದುರು ಭಾರತ ತಿಣುಕಾಡಿದ ರೀತಿ ಎಂತಹವರಿಗೂ ಅಚ್ಚರಿ ಮೂಡಿಸುತ್ತದೆ.

Published On :
ದುಬೈ: ಏಷ್ಯಾ ಕಪ್ 2018 ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲೇ ಭಾರತ ತಂಡ ಪ್ರಯಾಸದ ಗೆಲುವು ಸಾಧಿಸಿದೆ. ಅದೂ ಕೂಡ ಹಾಂಕಾಂಗ್ ನಂತಹ ಕ್ರಿಕೆಟ್ ಶಿಶು ಎದುರು ಭಾರತ ತಿಣುಕಾಡಿದ ರೀತಿ ಎಂತಹವರಿಗೂ ಅಚ್ಚರಿ ಮೂಡಿಸುತ್ತದೆ.
ಆದರೆ ಈ ಹಂತದಲ್ಲಿ ಭಾರತ ತಂಡದ ನೆರವಿಗೆ ಬಂದಿದ್ದು ಮಾತ್ರ ಎಡಗೈ ವೇಗಿ ಖಲೀಲ್ ಅಹ್ಮದ್. ಖಲೀಲ್ ಗೆ ಇದು ಪದಾರ್ಪಣೆ ಪಂದ್ಯವಾಗಿದ್ದು, ಪದಾರ್ಪಣೆ ಪಂದ್ಯದಲ್ಲೇ ಖಲೀಲ್ ತಮ್ಮ ತಾಕತ್ತು ಪ್ರದರ್ಶನ ಮಾಡಿದ್ದಾರೆ. ಆ ಮೂಲಕ ಭಾರತಕ್ಕಿದ್ದ ದೀರ್ಘಕಾಲದ ಎಡಗೈ ವೇಗಿಯ ಕೊರತೆಯನ್ನು ನೀಗಿಸುವ ಭರವಸೆ ಮೂಡಿಸಿದ್ದಾರೆ. ಈ ಮೂಲಕ 20 ವರ್ಷದ ಯುವ ಕ್ರಿಕೆಟಿಗ ಭಾರತದ ಪರ ಏಕದಿನ ಪಂದ್ಯವಾಡಿದ 222ನೇ ಆಟಗಾರ ಎನಿಸಿಕೊಂಡರು.
ಖಲೀಲ್ ಅಹ್ಮದ್ ಅವರನ್ನು ಏಷ್ಯಾಕಪ್ ಗೆ ಆಯ್ಕೆ ಮಾಡಿದಾಗ ಹಲವರು ಅಚ್ಚರಿ ವ್ಯಕ್ತಪಡಿಸಿದ್ದರು. ಈಗ ಅವರು ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ 11ರ ಬಳಗದಲ್ಲಿ ಸ್ಥಾನ ಪಡೆದು, ಪದಾರ್ಪಣೆ ಪಂದ್ಯದಲ್ಲೇ 3 ವಿಕೆಟ್ ಪಡೆಯುವ ಮೂಲಕ ಭರವಸೆ ಮೂಡಿಸಿದ್ದಾರೆ. ಅಂಡರ್-19 ತಂಡದ ಕೋಚ್ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಖಲೀಲ್ ಪಳಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಬೌಲರ್ ಆಗಿ ರೂಪುಗೊಳ್ಳುವ ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ.
ಇವರ ಬಗ್ಗೆ ತಿಳಿಯಬೇಕಾದ ಪ್ರಮುಖಾಂಶಗಳು ಇಲ್ಲಿವೆ.
1. ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ಹುಟ್ಟಿದ ಖಲೀಲ್ ಅಹ್ಮದ್ 2017ರ ಅಕ್ಟೋಬರ್ನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. 2017ರ ಫೆಬ್ರವರಿಯಲ್ಲಿ ದೇಶೀಯ ಟಿ20 ಪಂದ್ಯಗಳಿಗೆ ಹಾಗೂ 2018ರ ಫೆಬ್ರವರಿಯಲ್ಲಿ ಲಿಸ್ಟ್ ಎ ಪಂದ್ಯಗಳಿಗೆ ಪದಾರ್ಪಣೆ ಮಾಡಿದ್ದರು.
2. ಖಲೀಲ್ ಅಹ್ಮದ್ 2015-16ರ ಅಂಡರ್-19 ವಿಶ್ವಕಪ್ನಲ್ಲಿ ಪಾಲ್ಗೊಂಡಿದ್ದ ಭಾರತ ತಂಡದಲ್ಲಿ ಪಾಲ್ಗೊಂಡಿದ್ದರು, ಟೂರ್ನಿಯಲ್ಲಿ 6 ಪಂದ್ಯಗಳಿಂದ ಒಟ್ಟು 3 ವಿಕೆಟ್ ಪಡೆದಿದ್ದರು.
3. ನಂತರ ಖಲೀಲ್ ಅವರನ್ನು ಡೆಲ್ಲಿ ಡೇರ್ಡೆವಿಲ್ಸ್ ತಂಡ 10 ಲಕ್ಷ ಮೂಲ ಬೆಲೆಗೆ ಖರೀದಿಸಿತ್ತು. ಆದರೆ ಅವರು ಐಪಿಎಲ್ನಲ್ಲಿ ಒಂದೂ ಪಂದ್ಯವನ್ನಾಡಿರಲಿಲ್ಲ.
4. 2018ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಖಲೀಲ್ ತೀವ್ರ ಕುತೂಹಲ ಹುಟ್ಟು ಹಾಕಿದ್ದರು. ಇವರನ್ನು ಖರೀದಿಸಲು ಕಿಂಗ್ಸ್ ಇಲವೆನ್ ಪಂಜಾಬ್, ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಪೈಪೋಟಿ ನಡೆಸಿದ್ದವು. ಅಂತಿಮವಾಗಿ 3 ಕೋಟಿ ರೂ. ನೀಡಿ ಸನ್ರೈಸರ್ಸ್ ಹೈದರಾಬಾದ್ ತಂಡ ಖಲೀಲ್ ರನ್ನು ಖರೀದಿಸಿತ್ತು. ಖಲೀಲ್ ಕೇವಲ ಒಂದು ಪಂದ್ಯದಲ್ಲಿ ಹೈದರಾಬಾದ್ ತಂಡದ ಪರ ಆಡಿದ್ದರು.
5. ಈ ವರ್ಷ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ಭಾರತ ಎ ತಂಡದಲ್ಲಿ ಖಲೀಲ್ ಸ್ಥಾನ ಪಡೆದಿದ್ದರು. ಇಂಗ್ಲೆಂಡ್ನಲ್ಲಿ ಒಟ್ಟು 3 ಪಂದ್ಯವನ್ನಾಡಿದ್ದ ಖಲೀಲ್ 6 ವಿಕೆಟ್ ಪಡೆದಿದ್ದರು. 2017-18ರ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಒಟ್ಟು 6 ಲಿಸ್ಟ್ ಎ ಪಂದ್ಯಗಳಲ್ಲಿ 10 ವಿಕೆಟ್ ಪಡೆದು ಮಿಂಚಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಟೀಂ ಇಂಡಿಯಾTeam IndiaDubaiದುಬೈಹಾಂಕಾಂಗ್Cricket Offbeatಕ್ರಿಕೆಟ್ ಸ್ವಾರಸ್ಯAsia Cup 2018ಏಷ್ಯಾ ಕಪ್ 2018HonkongKhaleel Ahmedಖಲೀಲ್ ಅಹ್ಮದ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


