ಸೀರೆ ಉಟ್ಟು, ಬಿಂದಿ ಧರಿಸಿದ ಕ್ರಿಕೆಟಿಗ ಗೌತಮ್ ಗಂಭೀರ್, ಕಾರಣ ಏನು?
ಕ್ರಿಕೆಟಿಗ ಗೌತಮ್ ಗಂಭೀರ್ ಸೀರೆ ಉಟ್ಟು, ಬಿಂದಿ ಧರಿಸಿ ಸುದ್ದಿಗೆ ಗ್ರಾಸವಾಗಿದ್ದಾರೆ. ಅದರೆ ಅವರ ಈ ಕಾರ್ಯದ ಹಿಂದೆ ಒಂದು ಉದಾತ್ತ ಧ್ಯೇಯವಡಗಿದೆ.

Published On :
ನವದೆಹಲಿ: ಕ್ರಿಕೆಟಿಗ ಗೌತಮ್ ಗಂಭೀರ್ ಸೀರೆ ಉಟ್ಟು, ಬಿಂದಿ ಧರಿಸಿ ಸುದ್ದಿಗೆ ಗ್ರಾಸವಾಗಿದ್ದಾರೆ. ಅದರೆ ಅವರ ಈ ಕಾರ್ಯದ ಹಿಂದೆ ಒಂದು ಉದಾತ್ತ ಧ್ಯೇಯವಡಗಿದೆ.
ಹೌದು.. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗೆ ಗೌತಮ್ ಗಂಭೀರ್ ಇತ್ತೀಚೆಗೆ ನಡೆದ ಏಳನೇ ವರ್ಷದ ತೃತೀಯ ಲಿಂಗಿಗಳ ಹಬ್ಬದಲ್ಲಿ ಭಾಗವಹಿಸಿದ್ದರು. ಅದರಲ್ಲೇನು ವಿಶೇಷ ಎಂದು ಹುಬ್ಬೇರಿಸಬೇಡಿ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೇ ಗಂಭೀರ್ ಸ್ವತಃ ಸೀರೆ ಉಟ್ಟು, ಹಣೆಗೆ ಬಿಂದಿ ಇಟ್ಟುಕೊಂಡು ತೃತೀಯ ಲಿಂಗಿಗಳ ರೀತಿಯಲ್ಲಿ ತಯಾರಾಗಿದ್ದರು.
ಇಲ್ಲಿನ ಮಾಲ್ ಒಂದರಲ್ಲಿ ನಡೆದ ಈ ತೃತೀಯಲಿಂಗಿಗಳ ಹಬ್ಬದಲ್ಲಿ ನೂರಾರು ಮಂದಿ ಪಾಲ್ಗೊಂಡು ಸಂಭ್ರಮಿಸಿದರು. ಎಚ್‍ಐವಿ/ಏಡ್ಸ್ ಅಲೈನ್ಸ್ ಇಂಡಿಯಾ ಇದನ್ನು ಆಯೋಜಿಸಿತ್ತು. ಈ ವರ್ಷದ ಧ್ಯೇಯವಾಕ್ಯ "ಬಾರ್ನ್ ದಿಸ್ ವೇ" ಎಂದಾಗಿತ್ತು.
ತೃತೀಯಲಿಂಗಿಗಳು ಒಂದೆಡೆ ಸೇರಿ, ಸಮುದಾಯದ ಸಬಲೀಕರಣ ಬಗ್ಗೆ ಚರ್ಚಿಸಿದರು. ಜತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ಆಯಾ ಕ್ಷೇತ್ರದಲ್ಲಿ ದೇಶಕ್ಕಾಗಿ ಕೊಡುಗೆ ನೀಡುವಂತೆ ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಂಭೀರ್ ಸೀರೆ ಧರಿಸಿ ಗಮನಸೆಳೆದರು. ಆ ಮೂಲಕ ಗಂಭೀರ್ ಮಂಗಳಮುಖಿ ಸಮುದಾಯದ ಸದಸ್ಯರನ್ನು ಎಲ್ಲರಂತೆ ಗೌರವಿಸಬೇಕು ಎಂಬ ಸಂದೇಶ ಸಾರಿದರು. ಗೌತಮ್ ಗಂಭೀರ್ ಅವರ ಈ ಗಂಭೀರ ನಡೆಯಿಂದ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾಮಾಜಿಕವಾಗಿ ದೂರವಾಗಿದ್ದ ಸಮುದಾಯದ ಬೆಂಬಲವಾಗಿ ನಿಂತ ಗೌತಮ್ ಅವರ ದುಪ್ಪಟ ಮತ್ತು ಬಿಂದಿ ಧರಿಸಿದ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.
ಸಲಿಂಗಕಾಮವನ್ನು ಅಪರಾಧವಲ್ಲ ಎಂದು ಪರಿಗಣಿಸಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 377ರ ಬಗ್ಗೆ ಇತ್ತೀಚೆಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್supreme courtನವದೆಹಲಿNew Delhiಸುಪ್ರೀಂ ಕೋರ್ಟ್transgendersತೃತೀಯ ಲಿಂಗಿಗಳುGautam Gambhirಗೌತಮ್ ಗಂಭೀರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


