ಕ್ರಿಕೆಟ್

ಕೊಹ್ಲಿ, ರೋಹಿತ್‌ರಿಂದ 'ಭಾರತ ಕ್ರಿಕೆಟ್ ದೇವರು' ಸಚಿನ್‌ ದಾಖಲೆಗಳಿಗೆ ಗಂಡಾಂತರ!

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಆರಂಭಿಕ ಆಟಗಾರ ರೋಹಿತ್ ಶರ್ಮಾರಿಂದ ಭಾರತ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಗೂ ಗಂಡಾಂತರ ಎದುರಾಗಿದೆ...

ಕೊಹ್ಲಿ, ರೋಹಿತ್‌ರಿಂದ 'ಭಾರತ ಕ್ರಿಕೆಟ್ ದೇವರು' ಸಚಿನ್‌ ದಾಖಲೆಗಳಿಗೆ ಗಂಡಾಂತರ!
ಸಚಿನ್ ತೆಂಡೂಲ್ಕರ್-ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ
Published On :
ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಆರಂಭಿಕ ಆಟಗಾರ ರೋಹಿತ್ ಶರ್ಮಾರಿಂದ ಭಾರತ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಗೂ ಗಂಡಾಂತರ ಎದುರಾಗಿದೆ. 
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 140 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ ಇದೇ ಅಬ್ಬರ ಮುಂದುವರಿಸಿದರೆ ಏಕದಿನದಲ್ಲಿ 10 ಸಾವಿರ ರನ್ ಪೂರೈಸಿದ ಸಾಧಕನಾಗಿ ಹೊರಹೊಮ್ಮಲಿದ್ದಾರೆ. 
ವಿರಾಟ್ ಕೊಹ್ಲಿ 10 ಸಾವಿರ ರನ್ ಪೂರೈಸಲು ಇನ್ನು 81 ರನ್ ಸಿಡಿಸಬೇಕಿದೆ. ಇನ್ನು ವಿರಾಟ್ ಈ ದಾಖಲೆ ಮಾಡಿದರೆ ಅತೀ ಕಡಿಮೆ ಇನ್ನಿಂಗ್ಸ್ ಗಳಲ್ಲಿ 10 ಸಾವಿರ ರನ್ ಪೂರೈಸಿದ ಸಚಿನ್ ತೆಂಡೂಲ್ಕರ್ ವಿಶ್ವದಾಖಲೆಯನ್ನೂ ಕೊಹ್ಲಿ ಮುರಿಯಲಿದ್ದಾರೆ. ಸಚಿನ್ ಇದಕ್ಕಾಗಿ 259 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಕೊಹ್ಲಿಗೆ ಈವರೆಗೆ ಆಡಿರುವುದು 204 ಇನ್ನಿಂಗ್ಸ್ ಮಾತ್ರ. 
ಇನ್ನು ರೋಹಿತ್ ಶರ್ಮಾ ಇನ್ನೆರಡು ಸಿಕ್ಸರ್ ಬಾರಿಸಿದರೆ ಸಾಕು ಆಗ ಏಕದಿನದಲ್ಲಿ 195 ಸಿಕ್ಸರ್ ಹೊಡೆದ ಭಾರತೀಯ ಸಾಧಕರ ಪಟ್ಟಿಯಲ್ಲಿರುವ 2ನೇ ಸ್ಥಾನದಲ್ಲಿರುವ ಸಚಿನ್ ಅವರನ್ನು ರೋಹಿತ್ ಮೀರಿಸಲಿದ್ದಾರೆ. ಕಳೆದ ಪಂದ್ಯದಲ್ಲಿ ಸೌವರ್ ಗಂಗೂಲಿ ಅವರ ಸಿಕ್ಸರ್ ದಾಖಲೆ(190) ಮುರಿದಿದ್ದ ರೋಹಿತ್, 194 ಸಿಕ್ಸರ್ ಗಳೊಂದಿಗೆ ತೃತೀಯ ಸ್ಥಾನದಲ್ಲಿದ್ದಾರೆ. ಗರಿಷ್ಠ ಸಿಕ್ಸರ್ ಬಾರಿಸಿದ ಭಾರತೀಯ ದಾಖಲೆ ಎಂಎಸ್ ಧೋನಿ(217 ಸಿಕ್ಸರ್) ಹೆಸರಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.