ಕ್ರಿಕೆಟ್

ಶಾಕಿಂಗ್! ಭಾರತ ಕಪ್ ಗೆದ್ದಿದ್ದ 2011ರ ವಿಶ್ವಕಪ್ ಟೂರ್ನಿಯ 5 ಪಂದ್ಯಗಳು ಫಿಕ್ಸ್ ಆಗಿದ್ದವು!

ಇಡೀ ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸುವ ಕ್ರಿಕೆಟ್ ಇತಿಹಾಸದಲ್ಲೇ ಅತೀ ದೊಡ್ಡದಾದ ಫಿಕ್ಸಿಂಗ್ ಹಗರಣವೊಂದು ಬಯಲಿಗೆ ಬಂದಿದ್ದು, 2011ರಲ್ಲಿ ಭಾರತ ಕಪ್ ಗೆದ್ದಿ ವಿಶ್ವಕಪ್ ಟೂರ್ನಿಯ ಐದು ಪಂದ್ಯಗಳು ಸೇರಿದಂತೆ ಒಟ್ಟಾರೆ 15 ಪಂದ್ಯಗಳು ಫಿಕ್ಸ್ ಆಗಿದ್ದವು ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಶಾಕಿಂಗ್! ಭಾರತ ಕಪ್ ಗೆದ್ದಿದ್ದ 2011ರ ವಿಶ್ವಕಪ್ ಟೂರ್ನಿಯ 5 ಪಂದ್ಯಗಳು ಫಿಕ್ಸ್ ಆಗಿದ್ದವು!
ಕ್ರಿಕೆಟ್ ಸ್ಪಾಟ್ ಫಿಕ್ಸಿಂಗ್
Published On :
ದುಬೈ: ಇಡೀ ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸುವ ಕ್ರಿಕೆಟ್ ಇತಿಹಾಸದಲ್ಲೇ ಅತೀ ದೊಡ್ಡದಾದ ಫಿಕ್ಸಿಂಗ್ ಹಗರಣವೊಂದು ಬಯಲಿಗೆ ಬಂದಿದ್ದು, 2011ರಲ್ಲಿ ಭಾರತ ಕಪ್ ಗೆದ್ದಿ ವಿಶ್ವಕಪ್ ಟೂರ್ನಿಯ ಐದು ಪಂದ್ಯಗಳು ಸೇರಿದಂತೆ ಒಟ್ಟಾರೆ 15 ಪಂದ್ಯಗಳು ಫಿಕ್ಸ್ ಆಗಿದ್ದವು ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಪಾಕಿಸ್ತಾನದ ಸುದ್ದಿ ಸಂಸ್ಥೆ ಅಲ್ ಜಜೀರಾ ದಾಖಲೆ ಸಹಿತ ವರದಿ ಪ್ರಸಾರ ಮಾಡಿದ್ದು, ಕ್ರಿಕೆಟ್ ಫಿಕ್ಸಿಂಗ್ ಬಗ್ಗೆ ಸುಧೀರ್ಘ ತನಿಖಾ ವರದಿಯನ್ನು ಪ್ರಕಟಿಸಿದೆ. 'ದಿ ಮುನಾವರ್ ಫೈಲ್ಸ್' ಎಂಬ ಶೀರ್ಷಿಕೆಯಡಿಯಲ್ಲಿ 2011-2012ರಲ್ಲಿ ನಡೆದಿದ್ದ ಟಿ20, ಏಕದಿನ ಮತ್ತು ಟೆಸ್ಟ್ ಸರಣಿಗಳಲ್ಲಿ ಹಲವಾರ ಸರಣಿಗಳು ಫಿಕ್ಸ್ ಆಗಿದ್ದವು ಎಂದು ವರದಿ ಬಿತ್ತರಿಸಿದೆ. ಅಂತೆಯೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2010ರಿಂದೀಚೆಗೆ ಫಿಕ್ಸಿಂಗ್ ನಂತಹ ಪ್ರಕರಣಗಳು ಹೆಚ್ಚಾಗ ತೊಡಗಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ಅಲ್ ಜಜೀರಾ ವರದಿ ಮಾಡಿರುವಂತೆ 2010, 2011 ಮತ್ತು 2012ರಲ್ಲಿ ಭಾರತ, ಪಾಕಿಸ್ತಾನ, ಆಸ್ಚ್ರೇಲಿಯಾ, ಇಂಗ್ಲೆಂಡ್, ಜಿಂಬಾಬ್ವೆ, ನೆದರ್ಲೆಂಡ್, ಕೀನ್ಯಾ, ಬಾಂಗ್ಲಾದೇಶ, ನ್ಯೂಜಿಲೆಂಡ್, ಬಾಂಗ್ಲಾದೇಶ, ಆಫ್ಘಾನಿಸ್ತಾನ ಮತ್ತು  ದಕ್ಷಿಣ ಆಫ್ರಿಕಾ ತಂಡಗಳು ಪಾಲ್ಗೊಂಡಿದ್ದ ಪಂದ್ಯಗಳು ಫಿಕ್ಸ್ ಆಗಿತ್ತು ಎಂದು ಅಲ್ ಜಜೀರಾ ವರದಿ ಮಾಡಿದೆ.
ಅಲ್ ಜಜೀರಾ ವರದಿ ಮಾಡಿರುವಂತೆ 2011 ಮತ್ತು 2012ರ ಅವಧಿಯಲ್ಲಿ ನಡೆದಿದ್ದ ಒಟ್ಟು 15 ಪಂದ್ಯಗಳು ಫಿಕ್ಸ್ ಆಗಿತ್ತು ಎನ್ನಲಾಗಿದೆ.
ಮುಂಬೈ ಮೂಲದ ದುಬೈ ವಾಸಿ ಪೋಟೋಗ್ರಾಫರ್  ಮ್ಯಾಚ್ ಫಿಕ್ಸರ್ ಅನೀಲ್ ಮುನಾವಾರ್ ಹಾಗೂ ಆತನ ಆಪ್ತರು ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮತ್ತು ಉಮರ್ ಅಕ್ಮಲ್  ಬಳಿ ಆಗಾಗ್ಗೆ ಬಂದು ಮಾತನಾಡುತ್ತಿದ್ದರು ಎಂದು ದಿ ಮುನಾವರ್ ಫೈಲ್ಸ್ ವರದಿಯಲ್ಲಿ ಹೇಳಲಾಗಿದೆ.
2011ರ ಏಕದಿನ ವಿಶ್ವಕಪ್ ಒಟ್ಟು ಐದು ಪಂದ್ಯಗಳು, 2012ರ ಟಿ20 ವಿಶ್ವಕಪ್ ನ 2 ಪಂದ್ಯ, ಇಂಗ್ಲೆಂಡ್-ಪಾಕಿಸ್ತಾನ ನಡುವಿನ 3 ಟೆಸ್ಟ್ ಪಂದ್ಯಗಳು ಸೇರಿದಂತೆ ಒಟ್ಟು 15 ಪಂದ್ಯಗಳು ಫಿಕ್ಸ್ ಆಗಿತ್ತು ಎಂದು ಆರೋಪಿಸಲಾಗಿದೆ.
ಇನ್ನು ಅಲ್ ಜಜೀರಾ ವರದಿಯನ್ನು ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ವೆಲ್ಸ್ ಕ್ರಿಕೆಟ್ ಬೋರ್ಡ್ ತಿರಸ್ಕರಿಸಿದ್ದು, ವರದಿಯಲ್ಲಿ ಹುರುಳಿಲ್ಲ ಎಂದು ತಳ್ಳಿ ಹಾಕಿವೆ.
'ದಿ ಮುನಾವರ್ ಫೈಲ್ಸ್' ವರದಿಯಲ್ಲಿರುವಂತೆ ಫಿಕ್ಸ್ ಆಗಿದ್ದ ಪಂದ್ಯಗಳ ವರದಿ ಇಲ್ಲಿದೆ
1. Australia vs England, ODI, 21 Jan 2011
2. Australia vs Zimbabwe, ODI World Cup, 21 Feb 2011
3. England vs Netherlands, ODI World Cup, 22 Feb 2011
4. Australia vs Kenya, ODI World Cup, 13 Mar 2011
5. England vs South Africa, ODI World Cup, 6 Mar 2011
6. England vs Bangladesh, ODI World Cup, 11 Mar 2011
7. England vs India, Test, 21-25 Jul 2011
8. South Africa vs Australia, Test, 09-11 Nov 2011
9. Australia vs New Zealand, Test, 09-12 Dec 2011
10. England vs Pakistan, Test, 17-19 Jan 2012
11. England vs Pakistan, Test, 25-28 Jan 2012
13. England vs Pakistan, Test, 03-06 Feb 2012
14. England vs Afghanistan, T20 World Cup, 21 Sep 2012
15. South Africa vs Pakistan, T20 World Cup, 28 Sep 2012

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.