ಕ್ರಿಕೆಟ್

'ಕೆಲವೇ ವರ್ಷ ಆಟ ಬಾಕಿ ಇದೆ, ಶೇ.100 ಬದ್ಧತೆಯಿಂದ ಆಡ ಬಯಸುವೆ'; ಕೊಹ್ಲಿ ಮಾತಿನ ಮರ್ಮವೇನು?

ನನ್ನ ಪಾಲಿಗೆ ಇನ್ನು ಕೆಲವೇ ವರ್ಷಗಳ ಆಟ ಬಾಕಿ ಇದ್ದು, ಹೀಗಾಗಿ ಶೇ.100ರಷ್ಟು ಬದ್ಧತೆಯಿಂದ ಆಡ ಬಯಸುತ್ತೇನೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

'ಕೆಲವೇ ವರ್ಷ ಆಟ ಬಾಕಿ ಇದೆ, ಶೇ.100 ಬದ್ಧತೆಯಿಂದ ಆಡ ಬಯಸುವೆ'; ಕೊಹ್ಲಿ ಮಾತಿನ ಮರ್ಮವೇನು?
ಸಂಗ್ರಹ ಚಿತ್ರ
Published On :
ನವದೆಹಲಿ: ನನ್ನ ಪಾಲಿಗೆ ಇನ್ನು ಕೆಲವೇ ವರ್ಷಗಳ ಆಟ ಬಾಕಿ ಇದ್ದು, ಹೀಗಾಗಿ ಶೇ.100ರಷ್ಟು ಬದ್ಧತೆಯಿಂದ ಆಡ ಬಯಸುತ್ತೇನೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ನಿನ್ನೆ ಗುವಾಹತಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದರು. ಬಳಿಕ ಮಾತನಾಡಿದ ಕೊಹ್ಲಿ ತಮ್ಮ ಕ್ರಿಕೆಟ್ ಜೀವನದ ಕುರಿತು ಕೆಲ ಸ್ವಾರಸ್ಯಕರ ಅಂಶಗಳನ್ನು ಹಂಚಿಕೊಂಡರು.
ಈ ವೇಳೆ ಕೊಹ್ಲಿ, 'ತಮ್ಮಲ್ಲಿ ಕೆಲ ವರ್ಷಗಳ ಆಟ ಮಾತ್ರ ಬಾಕಿ ಇದ್ದು, ಇದೇ ಕಾರಣಕ್ಕೆ ಶೇ.100ರಷ್ಟು ಬದ್ಧತೆಯಿಂದ ಆಡಬಯಸುತ್ತೇನೆ. ದೇಶಕ್ಕಾಗಿ ಆಡುವುದು ದೊಡ್ಡ ಹೆಮ್ಮೆಯ ವಿಚಾರವಾಗಿದೆ.ಯಾವುದೇ ಆಟವನ್ನು ಹಗುರವಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ಆಟವು ನಿಮಗೆ ಅಷ್ಟೆಲ್ಲಾ ನೀಡುತ್ತಿರುವಾಗ ನೀವು ಪ್ರಾಮಾಣಿಕ ಯತ್ನ ಮಾಡುತ್ತಿರಬೇಕು. ನಾನು ಅದನ್ನು ಮಾಡಲು ಯತ್ನಿಸುತ್ತಿದ್ದೇನೆ. ಅದು ನನ್ನ ಮೂಲ ಚಿಂತನೆ ಕೂಡ ಆಗಿದೆ, ಏಕೆಂದರೆ ಪ್ರತಿಯೊಬ್ಬರಿಗೂ ಭಾರತಕ್ಕೆ ಆಡಲು ಅವಕಾಶ ಸಿಗುವುದಿಲ್ಲ' ಎಂದು ಹೇಳಿದ್ದಾರೆ. 
ಇನ್ನು ನಿನ್ನೆ ನಡೆದ ವೆಸ್ಟ್ ಇಂಡೀಸ್‌ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ ಕೊಹ್ಲಿ, ತಮ್ಮ ಶತಕಗಳ ಸಂಖ್ಯೆಯನ್ನು ಏಕದಿನ ಕ್ರಿಕೆಟ್‌ ನಲ್ಲಿ 36ಕ್ಕೆ ಏರಿಸಿಕೊಂಡಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 24 ಶತಕ ಗಳಿಸಿರುವ ಕೊಹ್ಲಿ ತಮ್ಮ ಒಟ್ಟಾರೆ ಶತಕದ ಗಳಿಕೆಯನ್ನು 60ಕ್ಕೆ ಏರಿಸಿಕೊಂಡಿದ್ದಾರೆ. ಆ ಮೂಲಕ ಒಟ್ಟಾರೆ ಕ್ರಿಕೆಟ್ ನಲ್ಲಿ (ಟೆಸ್ಟ್ ಮತ್ತು ಏಕದಿನ) ಅತೀ ಹೆಚ್ಚು ಶತಕ ಗಳಿಸಿದ ಕ್ರಿಕೆಟಿಗರ ಪಟ್ಟಿಯಲ್ಲಿ ಕೊಹ್ಲಿ 5ನೇ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.