ಪಾಕಿಸ್ತಾನದಲ್ಲಿದ್ದಾನೆ ಜೂನಿಯರ್ ಬುಮ್ರಾ ವಿಡಿಯೋ ನೋಡಿ ಬೇಸ್ತು ಬಿದ್ದ ರಿಯಲ್ ಬುಮ್ರಾ!
ಇತ್ತೀಚೆಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಂತೆ ಕಾಣವ ವ್ಯಕ್ತಿ ಕುರಿತು ಟ್ವೀಟ್ ಮಾಡಿ ಸುದ್ದಿಗೆ ಗ್ರಾಸವಾಗಿದ್ದರು. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಕ್ರಿಕೆಟಿಗೆ ಜಸ್ ಪ್ರೀತ್ ಬುಮ್ರಾ..

Published On :
ಇಸ್ಲಾಮಾಬಾದ್: ಗಣ್ಯರ ತದ್ರೂಪುಗಳ ಕುರಿತು ಸಾಕಷ್ಟು ಓದಿರುತ್ತೀರಿ. ಇತ್ತೀಚೆಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಂತೆ ಕಾಣವ ವ್ಯಕ್ತಿ ಕುರಿತು ಟ್ವೀಟ್ ಮಾಡಿ ಸುದ್ದಿಗೆ ಗ್ರಾಸವಾಗಿದ್ದರು. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಕ್ರಿಕೆಟಿಗೆ ಜಸ್ ಪ್ರೀತ್ ಬುಮ್ರಾ..
ಹೌದು.. ಬುಮ್ರಾ ತಮ್ಮ ತದ್ರೂಪು ವ್ಯಕ್ತಿಯ ಕುರಿತು ಟ್ವೀಟ್ ಮಾಡಿಲ್ಲ. ಆದರೆ ತಮ್ಮದೇ ಬೌಲಿಂಗ್ ಶೈಲಿಯನ್ನು ಯಥಾವತ್ತಾಗಿ ಅನುಕರಿಸುವ 5 ವರ್ಷದ ಬಾಲಕ ವಿಡಿಯೋ ನೋಡಿ ಪುಳಕಗೊಂಡಿದ್ದಾರೆ. ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರ ಜನ್ಮದಿನದ ಅಂಗವಾಗಿ ಟ್ವೀಟ್ ಮಾಡಿರುವ ಬುಮ್ರಾ, ನಾವು ಸಾಕಷ್ಟು ಬಾರಿ ನಿಮ್ಮಂತಹ ಲೆಜೆಂಡ್ ಆಟಗಾರರ ಆಟದ ಶೈಲಿಯನ್ನು ಅನುಕರಿಸುತ್ತೇವೆ. ಆದರೆ ನಮ್ಮದೇ ಶೈಲಿಯನ್ನು ಮತ್ತಿನ್ಯಾರೋ ಅನುಕರಿಸಿದಾಗ ಅದರ ಖುಷಿಯೇ ಬೇರೆ.. ನೋಡಲು ಸಂತೋಷವಾಗುತ್ತದೆ ಎಂದು ಬುಮ್ರಾ ಹೇಳಿದ್ದಾರೆ.
ಇನ್ನು ಬುಮ್ರಾ ಶೈಲಿಯನ್ನು ಅನುಕರಿಸಿರುವುದು ಪಾಕಿಸ್ತಾನದ 5 ವರ್ಷದ ಪುಟ್ಟಪೋರ.. ಪಾಕಿಸ್ತಾನದ ಗಲ್ಲಿ ಕ್ರಿಕೆಟ್ ನಲ್ಲಿ ಈತ ಯಥಾವತ್ತಾಗಿ ಜಸ್ ಪ್ರೀತ್ ಬುಮ್ರಾ ಅವರನ್ನು ಅನುಕರಣೆ ಮಾಡಿ ಇದೀಗ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಇಸ್ಲಾಮಾಬಾದ್IslamabadJasprit BumrahCricket Offbeatಕ್ರಿಕೆಟ್ ಸ್ವಾರಸ್ಯಜಸ್ ಪ್ರೀತ್ ಬುಮ್ರಾBowling Imitationಬೌಲಿಂಗ್ ಅನುಕರಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


