ಎಂಎಸ್ ಧೋನಿ ಮಾಡಿದ ತಪ್ಪೇನು? ಧೋನಿ ಮತ್ತೆ ನಾಯಕತ್ವ ವಹಿಸಿದ್ದಕ್ಕೆ ಆಯ್ಕೆ ಸಮಿತಿ ಗರಂ ಆಗಿದ್ದೇಕೆ?
2018ರ ಏಷ್ಯಾ ಕಪ್ ಚಾಂಪಿಯನ್ ಆಗಿ ಟೀಂ ಇಂಡಿಯಾ ಹೊರಹೊಮ್ಮಿದ್ದು ಇದೀಗ ಎಂಎಸ್ ಧೋನಿ ತಮ್ಮ 200ನೇ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದಕ್ಕೆ ಆಯ್ಕೆ ಸಮಿತಿ ಅಸಮಾಧಾನಗೊಂಡಿದೆ...

Published On :
ಮುಂಬೈ: 2018ರ ಏಷ್ಯಾ ಕಪ್ ಚಾಂಪಿಯನ್ ಆಗಿ ಟೀಂ ಇಂಡಿಯಾ ಹೊರಹೊಮ್ಮಿದ್ದು ಇದೀಗ ಎಂಎಸ್ ಧೋನಿ ತಮ್ಮ 200ನೇ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದಕ್ಕೆ ಆಯ್ಕೆ ಸಮಿತಿ ಅಸಮಾಧಾನಗೊಂಡಿದೆ.
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯವನ್ನು ರೋಹಿತ್ ಶರ್ಮಾ ಬದಲಿಗೆ ಎಂಎಸ್ ಧೋನಿ ನಾಯಕತ್ವ ವಹಿಸಿದ್ದರು. ಈ ಪಂದ್ಯ ರೋಚಕ ಡ್ರಾ ಆಗಿತ್ತು.
ಇದೀಗ ಎಂಎಸ್ ಧೋನಿ ನಾಯಕತ್ವಕ್ಕೆ ಭಾರತೀಯ ಕ್ರಿಕೆಟ್ ಮಂಡಳಿ ಆಯ್ಕೆ ಸಮಿತಿ ಅಸಮಾಧಾನ ಹೊರಹಾಕಿರುವುದು ತಿಳಿದುಬಂದಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ನೇತೃತ್ವದ ಸಮಿತಿ ಧೋನಿ ನಾಯಕತ್ವಕ್ಕೆ ಬೇಸರಗೊಂಡಿದೆ ಎಂದು ತಿಳಿದುಬಂದಿದೆ.
ರೋಹಿತ್ ಶರ್ಮಾ ನೇತೃತ್ವದಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ತಂಡ ಗೆಲುವು ಸಾಧಿಸಿದ್ದರಿಂದ ಆಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಈ ವೇಳೆ ಉಪನಾಯಕ ಶಿಖರ್ ಧವನ್ ಬದಲಿಗೆ ತಂಡದ ನಾಯಕತ್ವವನ್ನು ಧೋನಿಗೆ ಬಿಟ್ಟುಕೊಟ್ಟಿದ್ದರು. ಇದು ಧೋನಿ ಪಾಲಿಗೆ 200ನೇ ಏಕದಿನ ಪಂದ್ಯವಾಗಿತ್ತು. ಇಲ್ಲಿ ಧೋನಿ ತೆಗೆದುಕೊಂಡ ನಿರ್ಧಾರದ ವಿರುದ್ಧ ಸಮಿತಿ ಬೇಸರ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam IndiaMS Dhoniಎಂಎಸ್ ಧೋನಿಆಯ್ಕೆ ಸಮಿತಿAsia Cup 2018ಏಷ್ಯಾ ಕಪ್ 2018India Selectors
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


