ಹಾಸ್ಯಾತ್ಮಕ ರನೌಟ್: ಜಡೇಜಾ ಸ್ವಲ್ಪ ಯಾಮಾರಿದ್ರು ಚಳ್ಳೆಹಣ್ಣು ಗ್ಯಾರಂಟಿ! ವಿಡಿಯೋ ವೈರಲ್
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ರವೀಂದ್ರ ಜಡೇಜಾ ಟಿಪಿಕಲ್ ರನೌಟ್ ಮಾಡಿದ್ದಾರೆ...

Published On :
ರಾಜಕೋಟ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ರವೀಂದ್ರ ಜಡೇಜಾ ಟಿಪಿಕಲ್ ರನೌಟ್ ಮಾಡಿದ್ದಾರೆ.
ಜಡೇಜಾ ಸ್ವಲ್ಪ ಯಾಮಾರಿದ್ರೂ ವೆಸ್ಟ್ ಇಂಡೀಸ್ ತಂಡದ ಬ್ಯಾಟ್ಸ್‌ಮನ್ ಶಿಮ್ರೊನ್ ಹೆಟ್ಮರ್ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು. ಹೌದು ರವಿಚಂದ್ರನ್ ಅಶ್ವಿನ್ ಬೌಲಿಂಗ್ ನಲ್ಲಿ ಹೆಟ್ಮರ್ ಎಡಬದಿಗೆ ಚೆಂಡನ್ನು ಬಾರಿಸಿ ಒಂದು ರನ್ ಪಡೆಯಲು ಮುಂದಾದರು. ನಾನ್ ಸ್ಟ್ರೈಕ್ ನಲ್ಲಿದ್ದ ಆ್ಯಂಬ್ರಿಸ್ ರನ್ ಗಾಗಿ ಓಡುತ್ತಿದ್ದರು. ಅಷ್ಟರಲ್ಲಿ ಚೆಂಡು ನೇರವಾಗಿ ಜಡೇಜಾರ ಕೈಸೇರಿತ್ತು. ಆಗ ನಾನ್ ಸ್ಟ್ರೈಕ್ ಹಾಗೂ ಸ್ಟ್ರೈಕ್ ಬ್ಯಾಟ್ಸ್ ಮನ್ ಗಳು ಕೀಪರ್ ಬದಿಗೆ ಓಡಿ ಕ್ರೀಸ್ ಮುಟ್ಟಿದ್ದರು.
ಅಲ್ಲಿಗೆ ಒಂದು ವಿಕೆಟ್ ಬೀಳುವುದು ಕಾಯಂ ಆಗಿತ್ತು. ಆದರೆ ರವೀಂದ್ರ ಜಡೇಜಾ ಕೈಯಲ್ಲಿದ್ದ ಚೆಂಡನ್ನು ಬೌಲರ್ ಗೆ ಎಸೆಯದೆ ತಾವೇ ಓಡಿ ಬರುತ್ತಿದ್ದರು. ಇದನ್ನು ಗಮನಿಸಿದ ಹೆಟ್ಮರ್ ಓಡಿ ಬಂದು ಕ್ರಿಸ್ ಮುಟ್ಟಬೇಕಿತ್ತು. ಅಷ್ಟರಲ್ಲಿ ಎಚ್ಚೇತ ಜಡೇಜಾ ಐದು ಹೆಜ್ಜೆ ದೂರದಿಂದಲೇ ವಿಕೆಟ್ ಗೆ ಚೆಂಡು ಎಸೆದರು. ಒಂದು ವೇಳೆ ಚೆಂಡು ವಿಕೆಟ್ ಗೆ ತಾಗದೆ ಹೋಗಿದ್ದರೇ ಸುಲಭವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತಿತ್ತು.
When sir Jadeja bats he want Century, when he was on field he want Run-out nd when he is bowling he wants wicket Wowww!!!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಟೀಂ ಇಂಡಿಯಾTeam IndiaVirat Kohliವಿರಾಟ್ ಕೊಹ್ಲಿRavindra Jadejaರವೀಂದ್ರ ಜಡೇಜಾWest indiesವೆಸ್ಟ್ ಇಂಡೀಸ್Cricket Offbeatಕ್ರಿಕೆಟ್ ಸ್ವಾರಸ್ಯrun outರನೌಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


