ಕ್ರಿಕೆಟ್

ಭಾರತ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್: ಆಸ್ಟ್ರೇಲಿಯಾಕ್ಕೆ ದಂಡ

ಬ್ರಿಸ್ಬೆನ್ ನಲ್ಲಿ ಬುಧವಾರ ನಡೆದ ಭಾರತ ವಿರುದ್ಧ ಮೊದಲ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್‌ಗಾಗಿ ಆಸ್ಟ್ರೇಲಿಯಾ ತಂಡಕ್ಕೆ ದಂಡ ವಿಧಿಸಲಾಗಿದೆ.

ಭಾರತ ವಿರುದ್ಧ ಮೊದಲ ಟಿ-20  ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್: ಆಸ್ಟ್ರೇಲಿಯಾಕ್ಕೆ ದಂಡ
ಆಸ್ಟ್ರೇಲಿಯಾ ತಂಡದ ಚಿತ್ರ
Published On :

ದುಬೈ: ಬ್ರಿಸ್ಬೆನ್ ನಲ್ಲಿ  ಬುಧವಾರ ನಡೆದ  ಭಾರತ ವಿರುದ್ಧ ಮೊದಲ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್‌ಗಾಗಿ ಆಸ್ಟ್ರೇಲಿಯಾ ತಂಡಕ್ಕೆ ದಂಡ ವಿಧಿಸಲಾಗಿದೆ.

ಸಮಯದ ವಿನಾಯಿತಿಯ ನಂತರವೂ ಆರನ್ ಫಿಂಚ್ ತಂಡವೂ ಒಂದು ಓವರ್ ಗಳಷ್ಟು ಹಿಂದುಳಿದಿದ್ದರಿಂದ ಮ್ಯಾಚ್ ರೆಫ್ರಿ ಜೆಪ್ ಕ್ರೊವಿ ಅವರು ಆಸ್ಟ್ರೇಲಿಯಾ ತಂಡದ ಮೇಲೆ ದಂಡ ವಿಧಿಸಿದ್ದಾರೆ.

ಬುಧವಾರ ನಡೆದಿದ್ದ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು, ಮೆಲ್ಬೂರ್ನ್ ನಲ್ಲಿ ನಿನ್ನೆ ನಡೆದ ಪಂದ್ಯ ಮಳೆಯ ಕಾರಣ ರದ್ದುಗೊಂಡಿತ್ತು.

ಓವರ್ ರೇಟ್ ದಂಡನೆಯ ಕುರಿತಾದ ಐಸಿಸಿ ನೀತಿ ಸಂಹಿತೆಗೆ ಅನುಗುಣವಾಗಿ, ನಿಗದಿತ ಅವಧಿಯಲ್ಲಿ ತಂಡ ಎಸೆಯಲು ವಿಫಲವಾಗುವ ಪ್ರತಿಯೊಂದು ಓವರ್‌ಗೆ ಆಟಗಾರರ ಪಂದ್ಯದ ಸಂಭಾವನೆಯ  ಶೇಕಡ 10 ರಷ್ಟು  ದಂಡವನ್ನು ವಿಧಿಸಲಾಗುತ್ತದೆ ಮತ್ತು ತಂಡದ ನಾಯಕ ಇದರ ಎರಡರಷ್ಟು ದಂಡವನ್ನು ತೆರಬೇಕಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.