ಕ್ರಿಕೆಟ್

ಮತ್ತೆ ನೆನಪಾದ ಫಿಲಿಪ್ ಹ್ಯೂಸ್, ವೇಗಿಯ ಬೌನ್ಸರ್ ಗೆ ಮೈದಾನದಲ್ಲೇ ನೆಲಕ್ಕುರುಳಿದ ಪಾಕ್ ಬ್ಯಾಟ್ಸಮನ್!

ಪಂದ್ಯದ ವೇಳೆ ವೇಗಿಯೋರ್ವ ಎಸೆದ ಬೌನ್ಸರ್ ನಿಂದಾಗಿ ಗಾಯಗೊಂಡು ಸಾವನ್ನಪ್ಪಿದ ಆಸಿಸ್ ಆಟಗಾರ ಫಿಲಿಪ್ ಹ್ಯೂಸ್ ಘಟನೆ ನೆನಪಿಸುವಂತಹ ಘಟನೆಯೊಂದು ಮತ್ತೆ ನಡೆದಿದೆ.

ಮತ್ತೆ ನೆನಪಾದ ಫಿಲಿಪ್ ಹ್ಯೂಸ್, ವೇಗಿಯ ಬೌನ್ಸರ್ ಗೆ ಮೈದಾನದಲ್ಲೇ ನೆಲಕ್ಕುರುಳಿದ ಪಾಕ್ ಬ್ಯಾಟ್ಸಮನ್!
ಬೌನ್ಸರ್ ನಿಂದ ಪೆಟ್ಟು ತಿಂದು ಮಲಗಿದ ಪಾಕ್ ಆಟಗಾರ
Published On :
ದುಬೈ: ಪಂದ್ಯದ ವೇಳೆ ವೇಗಿಯೋರ್ವ ಎಸೆದ ಬೌನ್ಸರ್ ನಿಂದಾಗಿ ಗಾಯಗೊಂಡು ಸಾವನ್ನಪ್ಪಿದ ಆಸಿಸ್ ಆಟಗಾರ ಫಿಲಿಪ್ ಹ್ಯೂಸ್ ಘಟನೆ ನೆನಪಿಸುವಂತಹ ಘಟನೆಯೊಂದು ಮತ್ತೆ ನಡೆದಿದೆ.
ಅಬುದಾಬಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಏಕದಿನ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್‌ವುಲ್ ಹಕ್ ತಲೆಗೆ ಬೌನ್ಸರ್‌ವೊಂದು ಅಪ್ಪಳಿಸಿದ ಪರಿಣಾಮ ಮೈದಾನದಲ್ಲೇ ನೆಲಕ್ಕುರುಳಿದ್ದರು. 
ಪಾಕಿಸ್ತಾನ 210 ರನ್ ಚೇಸಿಂಗ್ ಮಾಡುತ್ತಿದ್ದಾಗ ಕಿವೀಸ್‌ ನ ವೇಗದ ಬೌಲರ್ ಲಾಕಿ ಫರ್ಗ್ಯುಸನ್ ಎಸೆದ ಬೌನ್ಸರ್ ಹಕ್ ಧರಿಸಿದ್ದ ಹೆಲ್ಮೆಟ್ ಗ್ರಿಲ್‌ ಗೆ ಅಪ್ಪಳಿಸಿದ ರಭಸಕ್ಕೆ ಮೈದಾನದಲ್ಲಿ ಕುಸಿದುಬಿದ್ದರು. ಕೂಡಲೇ ಸಹ ಆಟಗಾರರು ಹಕ್ ರನ್ನು ಉಪಚರಿಸಿದ್ದಾರೆ. ಬಳಿಕ ಪಂದ್ಯ ಮುಕ್ತಾಯದ ಬಳಿಕ 22ರ ಹರೆಯದ ಹಕ್‌ ರನ್ನು ಸಿಟಿ ಸ್ಕಾನಿಂಗ್‌ಗೆ ಒಳಪಡಿಸಲಾಗಿದ್ದು ಮುಂದಿನ 48 ಗಂಟೆಗಳ ಕಾಲ ನಿಗಾವಹಿಸಲಾಗುತ್ತದೆ ಎಂದು ಟೀಮ್ ಮ್ಯಾನೇಜ್‌ಮೆಂಟ್ ಹೇಳಿದೆ.
ಪ್ರಸ್ತುತ ಇಮಾಮ್ ಉಲ್ ಹಕ್ ಅಪಾಯದಿಂದ ಪಾರಾಗಿದ್ದಾರೆ ಎಂದು ತಂಡದ ಫಿಸಿಯೋ ಹೇಳಿದ್ದಾರೆ. ಇನ್ನು ಈ ಪಂದ್ಯದಲ್ಲಿ ಪಾಕಿಸ್ತಾನ  ವಿಕೆಟ್ ಅಂತರದಲ್ಲಿ ಜಯ ಸಾಧಿಸಿ 3 ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.