ಕ್ರಿಕೆಟ್

ಕ್ರಿಕೆಟ್ ಇತಿಹಾಸದಲ್ಲೇ ನೋಡಿರದ ವಿಚಿತ್ರ ಬೌಲಿಂಗ್, 360 ಡಿಗ್ರಿ ತಿರುಗುವ ಬೌಲರ್, ವಿಡಿಯೋ ವೈರಲ್!

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಅವರು 360 ಡಿಗ್ರಿಯಲ್ಲೂ ಬ್ಯಾಟ್ ಬೀಸುವ ಚಾಣಾಕ್ಷ ಬ್ಯಾಟ್ಸ್ ಮನ್ ಆಗಿದ್ದರು. ಆದರೆ ಇಲ್ಲೊಬ್ಬ ಬೌಲರ್ 360 ಡಿಗ್ರಿ ತಿರುಗಿ ಬೌಲಿಂಗ್...

ಕ್ರಿಕೆಟ್ ಇತಿಹಾಸದಲ್ಲೇ ನೋಡಿರದ ವಿಚಿತ್ರ ಬೌಲಿಂಗ್, 360 ಡಿಗ್ರಿ ತಿರುಗುವ ಬೌಲರ್, ವಿಡಿಯೋ ವೈರಲ್!
ಸಂಗ್ರಹ ಚಿತ್ರ
Published On :
ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಅವರು 360 ಡಿಗ್ರಿಯಲ್ಲೂ ಬ್ಯಾಟ್ ಬೀಸುವ ಚಾಣಾಕ್ಷ ಬ್ಯಾಟ್ಸ್ ಮನ್ ಆಗಿದ್ದರು. ಆದರೆ ಇಲ್ಲೊಬ್ಬ ಬೌಲರ್ 360 ಡಿಗ್ರಿ ತಿರುಗಿ ಬೌಲಿಂಗ್ ಮಾಡಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. 
ಕ್ರಿಕೆಟ್ ನಲ್ಲಿ ತಮ್ಮ ವಿಚಿತ್ರ ಬೌಲಿಂಗ್ ಆಕ್ಷನ್ ಮೂಲಕ ಹಲವಾರು ಬೌಲರ್ ಗಳು ಗಮನ ಸೆಳೆದಿದ್ದಾರೆ. ಆದರೆ ಈ ಬೌಲರ್ ವಿಚಿತ್ರ ಬೌಲಿಂಗ್ ಆಕ್ಷನ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. 
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಮ್ಮ ಅಧಿಕೃತ ವೆಬ್ ಸೈಟ್ ನಲ್ಲಿ ದೇಶೀಯ ಕ್ರಿಕೆಟ್ ನ ವಿಡಿಯೋವೊಂದನ್ನು ಶೇರ್ ಮಾಡಿದೆ. ಆದರೆ ಪಂದ್ಯದ ಕುರಿತಂತೆ ಯಾವುದೇ ಮಾಹಿತಿ ಇಲ್ಲ. ಒಟ್ಟಾರೆ ವಿಡಿಯೋದಲ್ಲಿ ಬೌಲರ್ ನ ಬೌಲಿಂಗ್ ಆಕ್ಷನ್ ಸದ್ಯ ಸದ್ದು ಮಾಡುತ್ತಿದೆ. 
ಬೌಲಿಂಗ್ ಮಾಡುವ ಮುನ್ನ ಬೌಲರ್ 360 ಡಿಗ್ರಿ ತಿರುಗಿ ಚೆಂಡನ್ನು ಎಸೆಯುವುದು ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು ಎನ್ನಬಹುದು. ಬೌಲರ್ ನ ವಿಚಿತ್ರ ಬೌಲಿಂಗ್ ಕಂಡ ಮೈದಾನದ ಅಂಪೈರ್ ಡೆಡ್ ಬಾಲ್ ನೀಡಿದರು. ಈ ರೀತಿ ಬೌಲಿಂಗ್ ಆಕ್ಷನ್ ಮಾಡಬಾರದು ಎಂದು ಹೇಳಿದ್ದರು. ಈ ವೇಳೆ ಮೈದಾನದಲ್ಲಿದ್ದ ಹಲವು ಫೀಲ್ಡರ್ ಗಳು ಇದನ್ನು ಪ್ರಶ್ನಿಸಿದರು. ಕೊನೆಗೆ ಅಂಪೈರ್ ಈ ರೀತಿ ಬೌಲಿಂಗ್ ಆಕ್ಷನ್ ಸಲ್ಲದು ಎಂದು ಹೇಳಿ ಸುಮ್ಮನಾಗಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.