ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ ಎಂತಾ ಗತಿ? ರವಿಶಾಸ್ತ್ರಿಯನ್ನು ಕಿಚಾಯಿಸಿದ ಟ್ವೀಟರಿಗರು!
ಟೀಂ ಇಂಡಿಯಾದ ಪ್ರಧಾನ ಕೋಚ್ ರವಿಶಾಸ್ತ್ರಿ ಅವರ ವರ್ಷವೊಂದಕ್ಕೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದು ಅವರು ಲೋಕಲ್ ರೈಲಿನಲ್ಲಿ ಓಡಾಡುತ್ತಿದ್ದಾರೆ...

Published On :
ಟೀಂ ಇಂಡಿಯಾದ ಪ್ರಧಾನ ಕೋಚ್ ರವಿಶಾಸ್ತ್ರಿ ಅವರ ವರ್ಷವೊಂದಕ್ಕೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದು ಅವರು ಲೋಕಲ್ ರೈಲಿನಲ್ಲಿ ಓಡಾಡುತ್ತಿದ್ದಾರೆ. ರವಿಶಾಸ್ತ್ರಿಗೆ ಎಂತಾ ಗತಿ ಬಂತಪ್ಪ ಅಂದುಕೊಳ್ಳುತ್ತಿದ್ದೀರಾ? ಅಸಲಿಗೆ ಕಥೆ ಬೇರೆಯೆ ಇದೆ.
ಮುಂಬೈನ ಲೋಕಲ್ ರೈಲೊಂದರಲ್ಲಿ ಪ್ರಯಾಣಿಸುತ್ತಿದ್ದ ಜನರು ಕಿಟಿಕಿ ಬದಿಯಲ್ಲಿದ್ದ ವ್ಯಕ್ತಿಯನ್ನು ನೋಡಿ ಒಮ್ಮೆ ಅಚ್ಚರಿಗೊಂಡರು. ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ತದ್ರೂಪಿಯಂತಿರುವ ವ್ಯಕ್ತಿಯನ್ನು ಕಂಡು ರವಿಶಾಸ್ತ್ರಿಗೆ ಇದೆಂತಾ ಗತಿ ಬಂತಪ್ಪ ಎಂದು ಭಾವಿಸಿದ್ದರು. ಆದರೆ ಅದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅಲ್ಲ. ಬದಲಿಗೆ ರವಿಶಾಸ್ತ್ರಿ ಅವರನ್ನೇ ಹೋಲುವ ವ್ಯಕ್ತಿ.
ಸಹ ಪ್ರಯಾಣಿಕರೊಬ್ಬರು ಅವರ ಫೋಟೋವನ್ನು ತೆಗೆದು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು ಸಾಕಷ್ಟು ಟ್ರೋಲ್ ಆಗುತ್ತಿವೆ. ಕಿಟಿಕಿ ಬದಿ ಕುಳಿತಿರುವ ಇವರ ಮುಖದ ಭಾವಕ್ಕೆ ಹೋಲಿಸಿ ಅನೇಕರು ಕಮೆಂಟ್ ಮಾಡಿದ್ದಾರೆ.
Ravi Shastri before Worldcup2019
—
Ravi Shastri after Worldcup2019. pic.twitter.com/cq0K4pwf7W
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಟೀಂ ಇಂಡಿಯಾTeam Indiaಸಾಮಾಜಿಕ ಜಾಲತಾಣRavi shastriರವಿಶಾಸ್ತ್ರಿSocial MediaCricket Offbeatಕ್ರಿಕೆಟ್ ಸ್ವಾರಸ್ಯ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


