ಸೆಹ್ವಾಗ್ ಪಂಜಾಬ್ ಮೆಂಟರ್ ಸ್ಥಾನಕ್ಕೆ ಕುತ್ತು: ಪ್ರೀತಿ ಕೋಪಕ್ಕೆ ಬಲಿಯಾದ್ರಾ ಸೆಹ್ವಾಗ್? ಪ್ರೀತಿ ನಡೆಗೆ ಆಕ್ರೋಶ!
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಫ್ರಾಂಚೈಸಿ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೆಂಟರ್ ಸ್ಥಾನದಿಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ...

Published On :
ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಫ್ರಾಂಚೈಸಿ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೆಂಟರ್ ಸ್ಥಾನದಿಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಒಪ್ಪಂದವನ್ನು ರದ್ದು ಮಾಡಲಾಗಿದೆ.
ಸೆಹ್ವಾಗ್ ಸುಮಾರು 5 ವರ್ಷಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಜೊತೆಗೆ ಗುರುತಿಸಿಕೊಂಡಿದ್ದರು. ಇದೀಗ ಪಂಜಾಬ್ ಸೆಹ್ವಾಗ್ ಅವರನ್ನು ನಡೆಸಿಕೊಂಡ ರೀತಿ ಮಾತ್ರ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಸೆಹ್ವಾಗ್ ಗೆ ಕೇವಲ ಇ-ಮೇಲ್ ಮೂಲಕ ಒಪ್ಪಂದ ರದ್ದು ಮಾಡಿರುವ ವಿಚಾರವನ್ನು ತಿಳಿಸಲಾಗಿದೆ. ಇನ್ನು ತಮ್ಮ ಮೆಂಟರ್ ಒಪ್ಪಂದ ರದ್ದು ಮಾಡಿರುವುದನ್ನು ಸ್ವತಃ ಸೆಹ್ವಾಗ್ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ.
ಫ್ರಾಂಚೈಸಿ ಮಾಲೀಕರು, ಬಾಲಿವುಡ್ ನಟಿ ಪ್ರೀತಿ ಜಿಂಟಾಗೆ ಕನಿಷ್ಠ ಸೆಹ್ವಾಗ್ ಜತೆ ಫೋನ್ ಮೂಲಕ ಮಾತುಕತೆ ನಡೆಸಿ ನಿರ್ಧಾರ ಪ್ರಕಟಿಸಬಹುದಿತ್ತು. ಸೆಹ್ವಾಗ್ ಮೇಲಿನ ಕೋಪದಿಂದ ಪ್ರೀತಿ ಜಿಂಟಾ ಈ ರೀತಿ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
IPLಐಪಿಎಲ್Virender Sehwagವೀರೇಂದ್ರ ಸೆಹ್ವಾಗ್Preity Zintaಪ್ರೀತಿ ಜಿಂಟಾKings XI Punjabಕಿಂಗ್ಸ್ ಇಲೆವೆನ್ ಪಂಜಾಬ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


