ಕ್ರಿಕೆಟ್

'ಈ ಸಲ ಕಪ್ ನಮ್ದೇ': ಆರ್ ಸಿಬಿ ಪ್ಲೇ ಆಫ್ ಆಸೆ ಇನ್ನೂ ಜಿವಂತ

ಐಪಿಎಲ್ 2018 ಟೂರ್ನಿಯಲ್ಲಿ ಪ್ಲೇ ಆಫ್ ಆಸೆಯನ್ನೇ ಕೈ ಬಿಟ್ಟಿದ್ದ ಆರ್ ಸಿಬಿ ತಂಡದ ಅಭಿಮಾನಿಗಳಿಗೆ ನಿನ್ನೆಯ ಹೈದರಾಬಾದ್ ತಂಡದ ವಿರುದ್ಧದ ರೋಚಕ ಗೆಲುವು ಕೊಂಚ ಸಮಾಧಾನ ತಂದಿದೆ. ಅಲ್ಲದೆ ಆರ್ ಸಿಬಿ ತಂಡದ ಪ್ಲೇ ಆಫ್ ಆಸೆಯನ್ನು ಇನ್ನೂ ಜೀವಂತವಾಗಿರಿಸುವಂತೆ ಮಾಡಿದೆ.

'ಈ ಸಲ ಕಪ್ ನಮ್ದೇ': ಆರ್ ಸಿಬಿ ಪ್ಲೇ ಆಫ್ ಆಸೆ ಇನ್ನೂ ಜಿವಂತ
ಸಂಗ್ರಹ ಚಿತ್ರ
Published On :
ಬೆಂಗಳೂರು: ಐಪಿಎಲ್ 2018 ಟೂರ್ನಿಯಲ್ಲಿ ಪ್ಲೇ ಆಫ್ ಆಸೆಯನ್ನೇ ಕೈ ಬಿಟ್ಟಿದ್ದ ಆರ್ ಸಿಬಿ ತಂಡದ ಅಭಿಮಾನಿಗಳಿಗೆ ನಿನ್ನೆಯ ಹೈದರಾಬಾದ್ ತಂಡದ ವಿರುದ್ಧದ ರೋಚಕ ಗೆಲುವು ಕೊಂಚ ಸಮಾಧಾನ ತಂದಿದೆ. ಅಲ್ಲದೆ ಆರ್ ಸಿಬಿ ತಂಡದ ಪ್ಲೇ ಆಫ್ ಆಸೆಯನ್ನು ಇನ್ನೂ ಜೀವಂತವಾಗಿರಿಸುವಂತೆ ಮಾಡಿದೆ.
ನಿನ್ನೆ ತವರು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪ್ರಬಲ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಬೆಂಗಳೂರು ತಂಡ 14 ರನ್ ಗಳ ಅಂತರದಲ್ಲಿ ರೋಚಕವಾಗಿ ಮಣಿಸಿದೆ. ಆ ಮೂಲಕ ತನ್ನ ಪ್ಲೇ ಆಫ್ ಆಸೆಯನ್ನು ಕೊಹ್ಲಿ ಪಡೆ ಇನ್ನೂ ಜೀವಂತವಾಗಿರಿಸಿಕೊಂಡಿದೆ. ಆರ್ ಸಿಬಿ ನೀಡಿದ 219 ರನ್ ಗಳ ಗುರಿಯನ್ನು ಬೆನ್ನ ಹತ್ತಿದ ಹೈದರಾಬಾದ್ ತಂಡ ನಾಯಕ ವಿಲಿಯಮ್ಸನ್ (81 ರನ್) ಮತ್ತು ಕನ್ನಡಿಗ ಮನೀಷ್ ಪಾಂಡೆ (62 ರನ್ ಅಜೇಯ) ನೆರವಿನಿಂದ ಇನ್ನೇನು ಗೆದ್ದೇ ಬಿಟ್ಟಿತು ಎನ್ನುವಾಗಲೇ 14 ರನ್ ಗಳ ಅಂತರದಲ್ಲಿ ಸೋಲು ಕಂಡಿತು. ಗೆಲ್ಲಲು ಅಂತಿಮ ಓವರ್ ನಲ್ಲಿ 20 ರನ್ ಗಳ ಅಗತ್ಯವಿದ್ದಾಗ ಹೈದರಾಬಾದ್ ತಂಡ ಕೇವಲ 5 ರನ್ ಗಳಿಸಲು ಮಾತ್ರ ಶಕ್ತವಾಯಿತು. ಆಮೂಲಕ ಆರ್ ಸಿಬಿ 14 ರನ್ ಗಳ ಅಂತರದಲ್ಲಿ ರೋಚಕ ಗೆಲುವು ಸಾದಿಸಿತು.
ಇನ್ನು ಈ ಪಂದ್ಯ ಆರ್ ಸಿಬಿ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿತ್ತು. ಪ್ಲೇ ಆಫ್ ಸುತ್ತಿಗೇರಬೇಕು ಎಂದರೆ ಆರ್ ಸಿಬಿ ತನ್ನ ಪಾಲಿನ ಬಾಕಿ ಎಲ್ಲ ಪಂದ್ಯಗಳನ್ನು ಗೆಲ್ಲಲೇ ಬೇಕು. ಹೀಗಾಗಿ ನಿನ್ನೆಯ ಪಂದ್ಯದ ಗೆಲುವು ಆರ್ ಸಿಬಿಗೆ ಅನಿವಾರ್ಯವಾಗಿತ್ತು. ಇದೀಗ ಅದನ್ನು ಆರ್ ಸಿಬಿ ಮಾಡಿ ತೋರಿಸಿದೆ.
ಪ್ಲೇಆಫ್ ಪ್ರವೇಶದ ಆಸೆ ಇನ್ನೂ ಜೀವಂತ
‘ಈ ಸಲ ಕಪ್ ನಮ್ದೇ’ ಎಂಬ ಜೋಶ್​ನೊಂದಿಗೆ ಅಭಿಯಾನ ಆರಂಭಿಸಿದ್ದ ಆರ್​ಸಿಬಿ ಟೂರ್ನಿಯ ಅಂತಿಮ ಲೀಗ್ ಪಂದ್ಯದವರೆಗೆ ತನ್ನ ಆಸೆ ಜೀವಂತ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಭಾನುವಾರ ರಾಜಸ್ಥಾನ ವಿರುದ್ಧ ಜೈಪುರದಲ್ಲಿ ಅಂತಿಮ ಲೀಗ್ ಪಂದ್ಯ ಆಡಲಿರುವ ಆರ್​ಸಿಬಿ ಗೆಲ್ಲುವ ಜತೆಗೆ ಇತರ ಫಲಿತಾಂಶಗಳೂ ಪೂರಕವಾಗಿ ಬಂದರೆ ಪ್ಲೇಆಫ್​ಗೇರಲಿದೆ. ಮುಂಬೈ ಮತ್ತು ಕೆಕೆಆರ್ ತಂಡಗಳ ಪೈಕಿ ಒಂದು ತಂಡ ಅಂತಿಮ ಲೀಗ್ ಪಂದ್ಯದಲ್ಲಿ ಸೋತರೂ ಆರ್​ಸಿಬಿ ಉತ್ತಮ ರನ್ ರೇಟ್ ಆಧಾರದಲ್ಲಿ ಮೇಲೇರುವ ಅವಕಾಶ ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.