ಕ್ರಿಕೆಟ್

4 ಓವರ್​ನಲ್ಲಿ 70 ರನ್; ಐಪಿಎಲ್ ಇತಿಹಾಸದಲ್ಲೇ 'ಬಸಿಲ್ ಥಂಪಿ' ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ

ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಬೌಲಿಂಗ್ ಎಂಬ ಕುಖ್ಯಾತಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಬಸಿಲ್ ಥಂಪಿ ಒಳಗಾಗಿದ್ದಾರೆ.

4 ಓವರ್​ನಲ್ಲಿ 70 ರನ್; ಐಪಿಎಲ್ ಇತಿಹಾಸದಲ್ಲೇ 'ಬಸಿಲ್ ಥಂಪಿ' ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ
ಸಂಗ್ರಹ ಚಿತ್ರ
Published On :
ಬೆಂಗಳೂರು: ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಬೌಲಿಂಗ್ ಎಂಬ ಕುಖ್ಯಾತಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಬಸಿಲ್ ಥಂಪಿ ಒಳಗಾಗಿದ್ದಾರೆ.
ಟೂರ್ನಿಯುದ್ದಕ್ಕೂ ಉತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಖ್ಯಾತ ಪಡೆದಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಗಳು,  ನಿನ್ನೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಗ ಬೆಂಗಳೂರು ವಿರುದ್ದದ ಪಂದ್ಯದಲ್ಲಿ ಕೊಹ್ಲಿ ಪಡೆಯ ರನ್ ವೇಗಕ್ಕೆ ಕಡಿವಾಣ ಹಾಕಲು ಅಕ್ಷರಶಃ ಪರದಾಡಿದ್ದರು. ಪ್ರಮುಖವಾಗಿ ರನ್ ವೇಗಕ್ಕೆ ಕಡಿವಾಣ ಹಾಕಿ ವಿಕೆಟ್ ಪಡೆಯುತ್ತಿದ್ದ ಬಸಿಲ್​ ಥಂಪಿ, ಆರ್ ಸಿಬಿ ಆಟಗಾರರಿಂದ ನಿಜಕ್ಕೂ ಆಕ್ರಮಣಕ್ಕೊಳಗಾಗಿದ್ದರು. 
ಬಸಿಲ್ ಥಂಪಿ ಕೇವಲ 4 ಓವರ್ ನಲ್ಲಿ ಬರೊಬ್ಬರಿ 70 ರನ್ ನೀಡಿ ಅತ್ಯಂತ ದುಬಾರಿ ಬೌಲರ್ ಎನಿಸಿದರು. ಥಂಪಿ ಅವರ ಈ ಬೌಲಿಂಗ್ ಪ್ರದರ್ಶನ ಹಾಲಿ ಟೂರ್ನಿ ಮಾತ್ರವಲ್ಲ ಇಡೀ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ ಎನಿಸಿಕೊಂಡಿದೆ. 
ಆರ್​ಸಿಬಿ ಬ್ಯಾಟ್ಸ್​ಮನ್​ಗಳಾದ ಮೊಯಿನ್​​ ಅಲಿ, ಎಬಿ ಡಿವಿಲಿಯರ್ಸ್ ಹಾಗೂ ಕಾಲಿನ್​ ಗ್ರ್ಯಾಂಡ್​ಹೊಮ್​ ಅವರನ್ನ ಕಟ್ಟಿಹಾಕುವಲ್ಲಿ ವಿಫಲವಾದ ಬಸಿಲ್​ ಥಂಪಿ 4 ಓವರ್​ಗಳಲ್ಲಿ ಒಟ್ಟು 70 ರನ್​​ ನೀಡಿದ್ದಾರೆ. ಇದರಲ್ಲಿ 6 ಸಿಕ್ಸರ್​ ಹಾಗೂ 5 ಬೌಂಡರಿಗಳನ್ನು ಥಂಪಿ ನೀಡಿದ್ದಾರೆ.  ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನವಾಗಿದೆ.
ಇದಕ್ಕೂ ಮೊದಲು ಅಂದರೆ 2013ರಲ್ಲಿ ಸಿಎಸ್ ಕೆ ವಿರುದ್ಧದ ಪಂದ್ಯದಲ್ಲಿ ಇಶಾಂತ್ ಶರ್ಮಾ 66 ರನ್ ನೀಡಿದ್ದರು. ಅದೇ ಟೂರ್ನಿಯಲ್ಲೇ ಆರ್ ಸಿಬಿ ವಿರುದ್ದ ಉಮೇಶ್ ಯಾದವ್ 65 ರನ್ ಹಾಗೂ 2014ರಲ್ಲಿ ಹೈದರಾಬಾದ್ ವಿರುದ್ಧ ಸಂದೀಪ್ ಶರ್ಮಾ 65 ರನ್ ನೀಡಿದ್ದು ಈ ವರೆಗಿನ ಕಳಪೆ ಬೌಲಿಂಗ್ ಪ್ರದರ್ಶನವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.