ಎಂಎಸ್ ಧೋನಿ ತಮ್ಮ ಮೊದಲ ಕ್ರಶ್ ಬಗ್ಗೆ ಪತ್ನಿ ಸಾಕ್ಷಿಗೆ ಹೇಳಬೇಡಿ ಅಂದಿದ್ದು ಯಾಕೆ?
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಮೊದಲ ಕ್ರಶ್ ಹೆಸರು ಬಹಿರಂಗ ಪಡಿಸಿದ್ದಾರೆ...

Published On :
ಚೆನ್ನೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಮೊದಲ ಕ್ರಶ್ ಹೆಸರು ಬಹಿರಂಗ ಪಡಿಸಿದ್ದು ಆದರೆ ಈ ಕುರಿತು ತಮ್ಮ ಪತ್ನಿ ಸಾಕ್ಷಿಗೆ ತಿಳಿಸಬೇಡಿ ಎಂದು ಹೇಳಿದ್ದಾರೆ.
ಚೆನ್ನೈ ತಂಡದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಎಂಎಸ್ ಧೋನಿ ಅವರಿಗೆ ಆ್ಯಂಕರ್ ನಿಮ್ಮ ಮೊದಲ ಕ್ರಶ್ ಯಾರು ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ನನ್ನ ಜೀವನದಲ್ಲಿ ಮೊದಲು ಇಷ್ಟಪಟ್ಟಿದ್ದ ಹುಡುಗಿ ಹೆಸರು ಸ್ವಾತಿ ಎಂದು ಉತ್ತರಿಸಿದ್ದಾರೆ.
ನಾನು 1990ರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವೇಳೆ ಸ್ವಾತಿ ಮೇಲೆ ನನಗೆ ಮನಸ್ಸಾಗಿತ್ತು. ಆದರೆ ಪಿಯುಸಿ ನಂತರ ಆಕೆಯನ್ನು ನಾನು ನೋಡಿಲ್ಲ ಎಂದು ಧೋನಿ ತಿಳಿಸಿದ್ದಾರೆ. ರಾಂಚಿಯ ಶ್ಯಾಮಲಿಯಲ್ಲಿರುವ ಡಿಎವಿ ಜೆವಿಎಂನಲ್ಲಿ ಧೋನಿ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿದ್ದರು.
ಕೆಲ ವರ್ಷಗಳ ಹಿಂದೆ ಬಿಡುಗಡೆಯಾದ ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರದಲ್ಲಿ ಧೋನಿಯ ಈ ವಿಷಯದ ಪ್ರಸ್ತಾಪವೇ ಇರಲಿಲ್ಲ. ಆದರೆ ಇದಕ್ಕೆ ಸಂಬಂಧಿಸಿದಂತೆ ತಮ್ಮ ಪತ್ನಿಗೆ ತಿಳಿಸಬೇಡಿ ಎಂದು ಧೋನಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


