ತಂಡಕ್ಕೆ ಆಯ್ಕೆಯಾಗಿ ಮೊದಲ ದಿನ ಡೆಸ್ಸಿಂಗ್ ರೂಂಗೆ ಕಾಲಿಟ್ಟಾಗ ನಡೆದ ಘಟನೆ ಕುರಿತು ಕೊಹ್ಲಿ ಹೇಳಿದ್ದು!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಜಗತ್ತೇ ಕೊಂಡಾಡುವ ಕ್ರಿಕೆಟಿಗನಾಗಿರಬಹುದು, ಆದರೆ ಟೀಂ ಇಂಡಿಯಾಗೆ ಆಯ್ಕೆಯಾದ ಮೊದಲ ದಿನ ಅವರ ಪರಿಸ್ಥಿತಿ ಹೇಗಿತ್ತು ಎಂದು ಅವರೇ ಹೇಳಿದ್ದಾರೆ...

Published On :
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಜಗತ್ತೇ ಕೊಂಡಾಡುವ ಕ್ರಿಕೆಟಿಗನಾಗಿರಬಹುದು, ಆದರೆ ಟೀಂ ಇಂಡಿಯಾಗೆ ಆಯ್ಕೆಯಾದ ಮೊದಲ ದಿನ ಅವರ ಪರಿಸ್ಥಿತಿ ಹೇಗಿತ್ತು ಎಂದು ಅವರೇ ಹೇಳಿದ್ದಾರೆ.
2008ರಲ್ಲಿ ನಾನು ತಾಯಿ ಜತೆ ಟಿವಿ ನೋಡುತ್ತಿದ್ದೆ ಆಗ ನಾನು ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾಗಿ ತಿಳಿಯಿತು. ಶ್ರೀಲಂಕಾ ಸರಣಿಗೆ ಆಯ್ಕೆಯಾಗಿದ್ದೇನೆಂದು ನಾನು ನಂಬಿರಲಿಲ್ಲ. ಕೊನೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ನಿಂದ ಕರೆ ಬಂದ ಮೇಲೆ ನಂಬಿದೆ. ಆಗ ರೋಮಾಂಚಿತನಾಗಿದ್ದೆ ಎಂದು ವಿರಾಟ್ ಕೊಹ್ಲಿ ಸ್ಮರಿಸಿದ್ದಾರೆ.
ಟೀಂ ಇಂಡಿಯಾಗೆ ಆಯ್ಕೆಯಾದ ಖುಶಿಯಲ್ಲೇ ಮೊದಲ ದಿನ ತಂಡಕ್ಕೆ ಕಾಲಿಟ್ಟೆ. ತಂಡದಲ್ಲಿ ಘಟಾನುಘಟಿ ಆಟಗಾರರಿದ್ದರು. ಮೊದಲ ದಿನವೇ ನನ್ನಲ್ಲಿ ಮಾತನಾಡಲು ಹೇಳಿದರು. ಆಗ ನಾನು ತುಂಬಾ ನರ್ವಸ್ ಆದೆ ಎಂದು ಹೇಳಿದರು.
ಡ್ರೆಸ್ಸಿಂಗ್ ರೂಂಗೆ ನಾನು ಕಾಲಿಟ್ಟಾಗ ಖ್ಯಾತ ಆಟಗಾರರು ನನ್ನನ್ನೇ ದಿಟ್ಟಿಸುತ್ತಾ ನೋಡುತ್ತಿದ್ದರು. ಇದನ್ನು ಕಂಡು ನಾನು ಗಲಿಬಿಲಿಯಾದೆ. ಈಗಲೂ ನಾವು ಯುವ ಆಟಗಾರರು ತಂಡಕ್ಕೆ ಬಂದಾಗ ಇದೇ ರೀತಿ ಮಾಡಿ ಸ್ವಲ್ಪ ತಮಾಷೆ ನೋಡುತ್ತೇವೆ ಎಂದು ಕೊಹ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಟೀಂ ಇಂಡಿಯಾTeam IndiaVirat Kohliವಿರಾಟ್ ಕೊಹ್ಲಿdressing roomCricket Offbeatಕ್ರಿಕೆಟ್ ಸ್ವಾರಸ್ಯಡ್ರೆಸ್ಸಿಂಗ್ ರೂಂ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


