ಇಂಗ್ಲೆಂಡ್ ಪ್ರವಾಸಕ್ಕೆ ಬಲಿಷ್ಠ ಭಾರತ ತಂಡ: ಬಿಸಿಸಿಐ ಮೂಲಗಳು
ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಬಲಿಷ್ಠ ಭಾರತ ತಂಡವನ್ನು ಆಯ್ಕೆ ಮಾಡುವ ಕುರಿತು ಬಿಸಿಸಿಐ ಸುಳಿವು ನೀಡಿದೆ.

Published On :
ಮುಂಬೈ: ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಬಲಿಷ್ಠ ಭಾರತ ತಂಡವನ್ನು ಆಯ್ಕೆ ಮಾಡುವ ಕುರಿತು ಬಿಸಿಸಿಐ ಸುಳಿವು ನೀಡಿದೆ.
ಇದೇ ಮೇ 8ರಂದು ಬಿಸಿಸಿಐ ನ ಆಯ್ಕೆ ಸಮಿತಿ ಸಭೆ ಸೇರಲಿದ್ದು, ಅಂದು ಇಂಗ್ಲೆಂಡ್ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಅಂತೆಯೇ ಇಂಗ್ಲೆಂಡ್ ಪ್ರವಾಸಕ್ಕೂ ಮೊದಲು ನಡೆಯುವ ಆಫ್ಘಾನಿಸ್ತಾನದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ, ಐರ್ಲೆಂಡ್ ಪ್ರವಾಸಕ್ಕೂ ಅಂದೇ ತಂಡವನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಮುಖವಾಗಿ ಭಾರತದ ಇಂಗ್ಲೆಂಡ್ ಪ್ರವಾಸವನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಇದಕ್ಕಾಗಿ ಬಲಿಷ್ಠ ತಂಡವನ್ನೇ ಕಟ್ಟಲು ಮುಂದಾಗಿದೆ. ಇದಕ್ಕಾಗಿ ಆಫ್ಘಾನಿಸ್ತಾನ ಟೆಸ್ಟ್ ಪಂದ್ಯ ಹಾಗೂ ಐರ್ಲೆಂಡ್ ಪ್ರವಾಸದ ವೇಳೆ ತಂಡದ ಸದಸ್ಯರ ಪ್ರದರ್ಶನದ ಟೆಸ್ಟ್ ಮಾಡುವ ಸಾಧ್ಯತೆ ಇದೆ. ಈ ಎರಡೂ ಸರಣಿಗಳು ಇಂಗ್ಲೆಂಡ್ ಪ್ರವಾಸಕ್ಕು ಮುನ್ನ ನಡೆಯುವುದರಿಂದ ಭಾರತ ತಂಡಕ್ಕೆ ಉತ್ತಮ ತರಬೇತಿಗೆ ವೇದಿಕೆಯಾಗುವ ಸಾಧ್ಯತೆ ಗಳಿವೆ. ಅಲ್ಲದೇ ಐರ್ಲೆಂಡ್ ನಲ್ಲಿನ ವಾತವಾರಣವನ್ನೇ ಇಂಗ್ಲೆಂಡ್ ಸಹ ಹೋಲುವುದರಿಂದ ಐರ್ಲೆಂಡ್ ಪ್ರವಾಸ ಭಾರತ ತಂಡಕ್ಕೆ ಉತ್ತಮ ತರಬೇತಿಗೆ ವೇದಿಕೆಯಾಗಿ ಮಾರ್ಪಡಲಿದೆ.
ಇದೇ ಕಾರಣಕ್ಕೆ ಬಿಸಿಸಿಐ ಮೇ 8ರಂದು ಬಲಿಷ್ಟ ತಂಡವನ್ನು ಆಯ್ಕೆ ಮಾಡಲು ಸಜ್ಜಾಗಿದೆ.
ಇನ್ನು ಭಾರತ ತಂಡದಲ್ಲಿ ಆರಂಭಿಕರಿಗೆ ಭಾರಿ ಪೈಪೋಟಿ ನಡೆಯುತ್ತಿದ್ದು, ಶಿಖರ್ ಧವನ್, ರೋಹಿತ್ ಶರ್ಮಾಗೆ ಸಾಕಷ್ಚು ಉದಯೋನ್ಮುಖ ಆಟಗಾರರು ಭಾರಿ ಪೈಪೋಟಿ ನೀಡುತ್ತಿದ್ದಾರೆ. ಹಾಲಿ ಐಪಿಎಲ್ ಟೂರ್ನಿಯಲ್ಲಿ ರಿಷಪ್ ಪಂತ್. ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ತಂಡದ ಮಧ್ಯಮ ಕ್ರಮಾಂಕದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಾಯಕ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ದಿನೇಶ್ ಕಾರ್ತಿಕ್, ಅಜಿಂಕ್ಯಾ ರಹಾನೆ ರಂತಹ ಹಿರಿಯ ಆಟಗಾರರಿದ್ದು, ಕೆಳ ಕ್ರಮಾಂಕದಲ್ಲಿ, ಹಾರ್ದಿಕ್ ಪಾಂಡ್ಯಾ ರಂತಹ ಆಲ್ ರೌಂಡರ್ ಗಳು ಜವಾಬ್ದಾರಿ ಹೊತ್ತುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ.
ಟೀಂ ಇಂಡಿಯಾ ಇದೇ ಜೂನ್ 14ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಫ್ಘಾನಿಸ್ತಾನದ ವಿರುದ್ದ ಏಕೈಕ ಟೆಸ್ಟ್ ಪಂದ್ಯವನ್ನಾಡಲಿದೆ. ಬಳಿಕ ಐರ್ಲೆಂಡ್ ಗೆ ತೆರಳಿಲಿರುವ ಭಾರತ ತಂಡ ಅಲ್ಲಿ ಜೂನ್ 27 ಮತ್ತು 29ರಂದು ಡಬ್ಲಿನ್ ನಲ್ಲಿ 2 ಟಿ20 ಪಂದ್ಯಗಳನ್ನಾಡಲಿದೆ. ಜುಲೈ 3ರಿಂದ ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸ ಆರಂಭವಾಗಲಿದ್ದು, ಜುಲೈ 3 ರಿಂದ ಸೆಪ್ಟೆಂಬರ್ 7ರವರೆಗೂ 3 ಟಿ20, 3 ಏಕದಿನ ಮತ್ತು 5 ಟೆಸ್ಟ್ ಪಂದ್ಯಗಳನ್ನಾಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Mumbaiಮುಂಬೈಟೀಂ ಇಂಡಿಯಾTeam IndiaVirat Kohliವಿರಾಟ್ ಕೊಹ್ಲಿBCCIಬಿಸಿಸಿಐEngland tourಇಂಗ್ಲೆಂಡ್ ಪ್ರವಾಸ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


