ದೆಹಲಿ ಡೇರ್'ಡೆವಿಲ್ಸ್ ಸಿಇಒ ಭೇಟಿಯಾದ ಶಮಿ ಪತ್ನಿ: ಐಪಿಎಲ್'ನಿಂದ ಪತಿಯನ್ನು ದೂರವಿಡುವಂತೆ ಮನವಿ
ದೆಹಲಿ ಡೇರ್ ಡೆವಿಲ್ಸ್ ಸಿಇಒ ಅವರನ್ನು ಭೇಟಿಯಾಗಿರುವ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ಅವರು, ತಮ್ಮ ಪತಿಯನ್ನು ಐಪಿಎಲ್ ನಿಂದ ದೂರವಿಡುವಂತೆ ಮನವಿ ಮಾಡಿಕೊಂಡಿದ್ದಾರೆಂದು ಭಾನುವಾರ ತಿಳಿದುಬಂದಿದೆ...

Published On :
ಮುಂಬೈ: ದೆಹಲಿ ಡೇರ್ ಡೆವಿಲ್ಸ್ ಸಿಇಒ ಅವರನ್ನು ಭೇಟಿಯಾಗಿರುವ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ಅವರು, ತಮ್ಮ ಪತಿಯನ್ನು ಐಪಿಎಲ್ ನಿಂದ ದೂರವಿಡುವಂತೆ ಮನವಿ ಮಾಡಿಕೊಂಡಿದ್ದಾರೆಂದು ಭಾನುವಾರ ತಿಳಿದುಬಂದಿದೆ.
ದೆಹಲಿ ಡೇರ್'ಡೆವಿಲ್ಸ್ ಸಿಇಒ ಹೇಮಂತ್ ದುವಾ ಅವರನ್ನು ಭೇಟಿ ಮಾಡಿರುವ ಹಸೀನ್ ಜಹಾನ್ ಅವರು, ಮುಂದಿನ ಐಪಿಎಲ್ ನಲ್ಲಿ ಪತಿ ಮೊಹಮ್ಮದ್ ಶಮಿಯವರಿಗೆ ಅವಕಾಶ ಮಾಡಿಕೊಡದಂತೆ ಮನವಿ ಮಾಡಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ನಾನು ನನ್ನ ಅನಿಸಿಕೆಗಳನ್ನು ಹೇಮಂತ್ ಅವರ ಮುಂದಿಟ್ಟಿದ್ದೇನೆ. ಪ್ರಸ್ತುತ ಕುಟುಂಬದಲ್ಲಿ ಎದುರಾಗಿರುವ ಸಮಸ್ಯೆಗಳು ಪರಿಹಾರಗೊಳ್ಳುವವರೆಗೂ ಐಪಿಎಲ್ ನಲ್ಲಿ ಆಡಲು ಆವಕಾಶ ನೀಡದಂತೆ ಮನವಿ ಮಾಡಿಕೊಂಡಿದ್ದೇನೆಂದು ಹಸೀನ್ ಹಜಾನ್ ಅವರು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಪತಿ ಮೊಹಮ್ಮದ್ ಶಮಿ ಅವರು ಅನೈತಿಕ ಸಂಬಂಧವನ್ನು ಹೊಂದಿದ್ದು, ಕಿರುಕುಳ ನೀಡುತ್ತಿದ್ದಾರೆಂದು ಆರೋಪ ಮಾಡಿದ್ದರು. ಅಲ್ಲದೆ, ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್IPLಐಪಿಎಲ್ಮೊಹಮ್ಮದ್ ಶಮಿMohammad ShamiHasin jahanಹಸೀನ್ ಜಹಾನ್Delhi Daredevils CEOದೆಹಲಿ ಡೇರ್ ಡೆವಿಲ್ಸ್ ಸಿಇಒ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


