ಕ್ರಿಕೆಟ್

ಚೆಂಡು ವಿರೂಪಗೊಳಿಸಿದ ಪ್ರಕರಣ; ತಪ್ಪು ನನ್ನದೇ ಎಂದ ಡೇವಿಡ್ ವಾರ್ನರ್ ಪತ್ನಿ!

ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೆ ಗುರಿಯಾಗಿರುವ ಡೇವಿಡ್ ವಾರ್ನರ್ ಪರ ಅವರ ಪತ್ನಿ ಕ್ಯಾಂಡಿಸ್ ವಾರ್ನರ್ ನಿಂತಿದ್ದು, ತಪ್ಪೆಲ್ಲಾ ತಮ್ಮದೇ ಎಂದು ಹೇಳಿದ್ದಾರೆ.

ಚೆಂಡು ವಿರೂಪಗೊಳಿಸಿದ ಪ್ರಕರಣ; ತಪ್ಪು ನನ್ನದೇ ಎಂದ ಡೇವಿಡ್ ವಾರ್ನರ್ ಪತ್ನಿ!
ಸಂಗ್ರಹ ಚಿತ್ರ
Published On :
ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೆ ಗುರಿಯಾಗಿರುವ ಡೇವಿಡ್ ವಾರ್ನರ್ ಪರ ಅವರ ಪತ್ನಿ ಕ್ಯಾಂಡಿಸ್ ವಾರ್ನರ್ ನಿಂತಿದ್ದು, ತಪ್ಪೆಲ್ಲಾ ತಮ್ಮದೇ ಎಂದು ಹೇಳಿದ್ದಾರೆ.
ಶನಿವಾರ ಸಿಡ್ನಿಯಲ್ಲಿ ಮಾತನಾಡಿದ ಕ್ಯಾಂಡಿಸ್, ಇವೆಲ್ಲ ನನ್ನ ತಪ್ಪು, ನನ್ನ ಕೊಲ್ಲುತ್ತಿದೆ. ನಾನು ನನ್ನ ಗಂಡನ ತಪ್ಪನ್ನು ಸಮರ್ಥಿಸಲು ಬಯಸುತ್ತಿಲ್ಲ. ಆದರೆ ಅವರು ನನ್ನನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ ಅಷ್ಟೇ. ತೀವ್ರ ಮನನೊಂದಿರುವ ತಮ್ಮ ಪತಿಯ ಮೇಲೆ ಅನುಕಂಪವನ್ನು ತೋರಿಸಬೇಕು ಎಂದು ಆಸೀಸ್ ಅಭಿಮಾನಿಗಳಲ್ಲಿ ಕ್ಯಾಂಡಿಸ್ ಬೇಡಿಕೊಂಡರು. 
ಬಾಲ್ ಟ್ಯಾಂಪರಿಂಗ್‌ಗೂ ಮುನ್ನ ಮೊದಲ ಟೆಸ್ಟ್‌ನಲ್ಲಿ ತಮ್ಮ ಪತ್ನಿ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಿಸಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕ್ವಿಂಟನ್ ಡಿ ಕಾಕ್ ವಿರುದ್ಧ ವಾರ್ನರ್ ಜಗಳಕ್ಕಿಳಿದಿದ್ದರು. ಈ ಪಂದ್ಯದ ಬಳಿಕ ಮನೆಗೆ ವಾಪಸ್ ಆಗಿದ್ದ ವಾರ್ನರ್ ಕಣ್ಣೀರು ಹಾಕುತ್ತಿದ್ದ ತಮ್ಮ ಪತ್ನಿಯನ್ನು ನೋಡಿ ಭಾವುಕರಾಗಿದ್ದರು. ಕೇಪ್ ಟೌನ್ ಮತ್ತು ಪೋರ್ಟ್ ಎಲಿಜೆಬೆತ್ ಪಂದ್ಯಗಳ ವೇಳೆ ಆಫ್ರಿಕಾ ಅಭಿಮಾನಿಗಳು ಮಾಸ್ಕ್ ಗಳನ್ನು ಧರಿಸಿ ನನ್ನನ್ನು ಟ್ರೋಲ್ ಮಾಡುತ್ತಿದ್ದರು. ಇದು ನಿಜಕ್ಕೂ ತೀವ್ರ ದುಃಖ ತಂದಿತ್ತು.
ಅಲ್ಲದೆ ನನ್ನ ಕುರಿತು ವ್ಯಂಗ್ಯವಾದ ಹಾಡುಗಳನ್ನೂ ಕೂಡ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿತ್ತು. ಇದರಿಂದ ಡೇವಿಡ್ ಅಸಮಾಧಾನಗೊಂಡಿದ್ದರು. ಈ ಎಲ್ಲ ಘಟನೆಗಳು ಅವರಿಗೆ ನೋವು ತಂದಿತ್ತು ಎಂದು ಕ್ಯಾಂಡಿಸ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.