ಕ್ರಿಕೆಟ್

ಆಸೀಸ್ ಕಳ್ಳಾಟವನ್ನು ಬಯಲು ಮಾಡಿದ ಮಾಜಿ ಬೌಲರ್ ಯಾರು ಗೊತ್ತಾ!

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಕೆಮರಾಮ್ಯಾನ್ ಜೊಟಾನಿ ಆಸ್ಕರ್ ಚಿತ್ರೀಕರರಿಸಿದ್ದು ಆದರೆ ಆಸ್ಟ್ರೇಲಿಯಾ ಆಟಗಾರರ...

ಆಸೀಸ್ ಕಳ್ಳಾಟವನ್ನು ಬಯಲು ಮಾಡಿದ ಮಾಜಿ ಬೌಲರ್ ಯಾರು ಗೊತ್ತಾ!
ಕ್ಯಾಮರಾನ್ ಬೆನ್‌ಕ್ರಾಫ್ಟ್-ಸ್ಟೀವ್ ಸ್ಮಿತ್
Published On :
ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಕೆಮರಾಮ್ಯಾನ್ ಜೊಟಾನಿ ಆಸ್ಕರ್ ಚಿತ್ರೀಕರರಿಸಿದ್ದು ಆದರೆ ಆಸ್ಟ್ರೇಲಿಯಾ ಆಟಗಾರರ ಮೋಸದಾಟವನ್ನು ಬಯಲು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ವೀಕ್ಷಣಾ ವಿವರಣಾಗಾರರಾಗಿ ಕೆಲಸ ಮಾಡುತ್ತಿರುವ ಮಾಜಿ ದಕ್ಷಿಣ ಆಫ್ರಿಕಾ ವೇಗಿ ಫ್ಯಾನಿ ಡಿ ವಿಲಿಯರ್ಸ್. 
ಆಸ್ಟ್ರೇಲಿಯಾದ ಮೋಸದಾಟ ಸಾಧ್ಯತೆಯನ್ನು ಮೊದಲೇ ಅರಿತುಕೊಂಡ ಡಿ ವಿಲಿಯರ್ಸ್ ಟಿವಿ ಕ್ಯಾಮೆರಾ ನಿರ್ವಹಣಾಗಾರರಿಗೆ ಕ್ಯಾಮೆರಾ ಲೆನ್ಸ್ ಆಸ್ಟ್ರೇಲಿಯಾ ಆಟಗಾರರತ್ತ ಕೇಂದ್ರೀಕರಿಸುವಂತೆ ಸೂಚನೆ ನೀಡಿದ್ದರು. 
ಆಸ್ಟ್ರೇಲಿಯಾ ಆಟಗಾರರು ಮೋಸದಾಟ ಆಡುತ್ತಿದ್ದಾರೆ ಎಂಬ ಸಂಶಯ ಬೆನ್ನಲ್ಲೇ ಕೆಮರಾಮ್ಯಾನ್ ಗಳಿಗೆ ಸೂಚನೆ ನೀಡಿದ್ದೇ. ಒಂದೂವರೆ ಗಂಟೆಗಳಷ್ಟು ಕಾಲ ನಾನು ಕೂಡಾ ಶೋಧನೆ ಮಾಡಿದ್ದೆ ಕೊನೆಗೆ ಬೆನ್ ಕ್ರಾಫ್ಟ್ ಏನೋ ವಿಚಿತ್ರವಾಗಿರುವುದ್ನು ಮಾಡುವುದ ಕಂಡಬಂದಿತ್ತು ಎಂದು ವಿವರಿಸಿದರು. 
ಚೆಂಡು ರಿವರ್ಸ್ ಸ್ವಿಂಗ್ ಆಗಬೇಕಿದ್ದರೆ ಚೆಂಡಿನ ಆಕಾರವನ್ನು ಬದಲಾಯಿಸಬೇಕಿತ್ತು. ಆದರೆ 30ನೇ ಓವರ್ ಗಿಂತಲೂ ಮುಂಚಿತವಾಗಿ ರಿವರ್ಸ್ ಸ್ವಿಂಗ್ ಮಾಡಬೇಕಿದ್ದರೆ ಅವರೇನಾದರೂ ಮಾಡಬೇಕಿತ್ತು. ಹಾಗಾಗಿ ಚೆಂಡನ್ನು ಸ್ಕ್ರಾಚ್ ಮಾಡಿದರೆ ತಕ್ಷಣವೇ ರಿವರ್ಸ್ ಸ್ವಿಂಗ್ ಆಗಬಹುದು ಎಂದು ವಿಲಯರ್ಸ್ ಸೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.