ಚೆಂಡು ವಿರೂಪ ಪ್ರಕರಣ: ಸ್ಮಿತ್ ಬದಲಿಗೆ ರಹಾನೆ ರಾಜಸ್ತಾನ ರಾಯಲ್ಸ್ ಮುನ್ನಡೆಸುವ ಸಾಧ್ಯತೆ
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಬಾಲ್ ವಿರೂಪಗೊಳಿಸಿದ ಆರೋಪಕ್ಕೆ ತುತ್ತಾಗಿರುವ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಇಂಡಿಯನ್ ಪ್ರಿಮಿಯರ್...

Published On :
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಬಾಲ್ ವಿರೂಪಗೊಳಿಸಿದ ಆರೋಪಕ್ಕೆ ತುತ್ತಾಗಿರುವ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಆಡುವ ಕುರಿತು ಅನುಮಾನಗಳು ಶುರವಾಗಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಸ್ಟೀವ್ ಸ್ಮಿತ್ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದೆ. ಸ್ಮಿತ್ ಗೆ ಒಂದು ಪಂದ್ಯ ನಿಷೇಧ ಹೇರಿದ್ದು ಈ ಹಿನ್ನೆಲೆಯಲ್ಲಿ ಸ್ಟೀಟ್ ಸ್ಮಿತ್ ಆರೋಪ ಮುಕ್ತರಾದ ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹಾಗೂ ರಾಜಸ್ತಾನ ರಾಯಲ್ಸ್ ಕರಾರಿಗೆ ಮುಂದಾಗಲಿದೆ.
ಆದಾಗ್ಯೂ, ಬಿಸಿಸಿಐನ ಒಂದು ಚಿಂತಕರು ಸ್ಟೀವ್ ಸ್ಮಿತ್ ರಾಜಸ್ತಾನ ರಾಯಲ್ಸ್ ತಂಡದ ನಾಯಕ ಸ್ಥಾನವನ್ನು ಸ್ವತಃ ತೊರೆಯಬೇಕೆಂದು ನಿರ್ಧರಿಸಿದೆ. ಇನ್ನು ಇದಕ್ಕೆ ರಾಜಸ್ತಾನ ಸ್ಟೀವ್ ಸ್ಮಿತ್ ಬದಲಿಗೆ ರಹಾನೆಯನ್ನು ನಾಯಕನನ್ನಾಗಿ ಮಾಡಲು ಸಿದ್ಧವಿರುವುದಾಗಿ ಹೇಳಿದೆ.
ರಾಜಸ್ತಾನ ರಾಯಲ್ಸ್ ಗೆ ಸ್ಟೀವ್ ಸ್ಮಿತ್ ನಾಯಕತ್ವ ವಹಿಸಬೇಕಿತ್ತು. ಬಾಲ್ ಟ್ಯಾಂಪರಿಂಗ್ ವಿವಾದ ಇದೀಗ ಅವರ ಕ್ರಿಕೆಟ್ ಬದುಕಿಗೆ ಕೊಡಲಿ ಪೆಟ್ಟು ನೀಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Ajinkya RahaneSteve SmithRajasthan Royalsರಾಜಸ್ತಾನ ರಾಯಲ್ಸ್ಅಜಿಂಕ್ಯ ರಹಾನೆಸ್ಟೀವ್ ಸ್ಮಿತ್IPL 2018ಐಪಿಎಲ್ 2018Ball Tampering Rowಚೆಂಡು ವಿರೂಪಗೊಳಿಸಿದ ಪ್ರಕರಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


