ಬಾಂಗ್ಲಾ ವಿರುದ್ಧ ಗೆಲುವು; ವಾಷಿಂಗ್ಟನ್ ಸುಂದರ್ ಕೊಂಡಾಡಿದ ನಾಯಕ ರೋಹಿತ್ ಶರ್ಮಾ
ಭಾರತದ ಪಾಲಿಗೆ ಪ್ರಮುಖವಾಗಿದ್ದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಅಂತಿಮ ಹಂತದಲ್ಲಿ ವಿಕೆಟ್ ಉರುಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ವಾಷಿಂಗ್ಟನ್ ಸುಂದರ್ ಅವರನ್ನು ನಾಯಕ ರೋಹಿತ್ ಶರ್ಮಾ ಕೊಂಡಾಡಿದ್ದಾರೆ.

Published On :
ಕೊಲಂಬೋ: ಭಾರತದ ಪಾಲಿಗೆ ಪ್ರಮುಖವಾಗಿದ್ದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಅಂತಿಮ ಹಂತದಲ್ಲಿ ವಿಕೆಟ್ ಉರುಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ವಾಷಿಂಗ್ಟನ್ ಸುಂದರ್ ಅವರನ್ನು ನಾಯಕ ರೋಹಿತ್ ಶರ್ಮಾ ಕೊಂಡಾಡಿದ್ದಾರೆ.
ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ, ತಂಡದ ಸಹ ಆಟಗಾರ ಹಾಗೂ ಉದಯೋನ್ಮುಖ ಪ್ರತಿಭೆ ವಾಷಿಂಗ್ಟನ್ ಸುಂದರ್ ಅವರ ಪ್ರದರ್ಶನವನ್ನು ಕೊಂಡಾಡಿದರು. ನಿಜಕ್ಕೂ ಸುಂದರ್ ಅಂತಿಮ ಹಂತದಲ್ಲಿ ಮ್ಯಾಜಿಕ್ ಮಾಡಿದರು. ನಿರ್ಣಾಯಕ ಹಂತದಲ್ಲಿ ಬಾಂಗ್ಲಾ ತಂಡದ ಪ್ರಮುಖ ಆಟಗಾರರನ್ನು ಔಟ್ ಮಾಡುವ ಮೂಲಕ ತಂಡಕ್ಕ ಮೇಲುಗೈ ಒದಗಿಸಿದರು.
ಹೊಸ ಚೆಂಡಿನಲ್ಲಿ ಸ್ಪಿನ್ನರ್ ಗಳು ಬೌಲ್ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಸುಂದರ್ ಅದನ್ನು ಯಶಸ್ವಿಯಾಗಿ ಮೆಟ್ಟು ನಿಂತರು. ಅವರ ಪ್ರದರ್ಶನಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು. ಕಠಿಣ ಸಂದರ್ಭದಲ್ಲಿ ತಾನೇ ಮುಂದುಬಂದು ಬೌಲ್ ಮಾಡುವ ಧೈರ್ಯ ಸುಂದರ್ ಗಿದೆ. ಆ ಧೈರ್ಯವನ್ನು ಮೆಚ್ಚಿಯೇ ನಾನು ಆತನಿಗೆ ಚೆಂಡು ನೀಡಿದ್ದೆ, ಸುಂದರ್ ಗೆ ತನಗೇನು ಬೇಕು ಎಂಬುದರ ಕುರಿತು ಸ್ಪಷ್ಟತೆ ಇದೆ. ಇದೇ ಕಾರಣಕ್ಕೆ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ನಾನು ನೆಮ್ಮದಿಯಿಂದ ಉಸಿರಾಡಿದೆ.
ಬೌಲರ್ ಗೆ ಯಾವ ರೀತಿಯ ಫೀಲ್ಡಿಂಗ್ ಬದಲಾವಣೆ ಬೇಕು ಎಂದು ತಿಳಿದರೆ ಆಗ ನಾಯಕನ ಅರ್ಧ ಕೆಲಸ ಕಡಿಮೆಯಾಗುತ್ತದೆ. ಆ ಗುಣ ಸುಂದರ್ ಬಳಿ ಇದೆ. ಶ್ರೀಲಂಕಾ ವಿರುದ್ಧವೂ ಸುಂದರ್ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಅಂತೆಯೇ ತಂಡದ ಇತರೆ ಬೌಲರ್ ಗಳೂ ಕೂಡ ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿದರು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್indiaಭಾರತRohit Sharmaರೋಹಿತ್ ಶರ್ಮಾColomboಕೊಲಂಬೋವಾಷಿಂಗ್ಟನ್ ಸುಂದರ್Nidahas Trophyನಿಡಹಾಸ್ ಟ್ರೋಫಿWashington Sundar
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


