ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಸುಲಭವಾಗಿ ರನ್ ಗಳಿಸಿರಬಹುದು, ನಮ್ಮ ವಿರುದ್ಧ ಅಸಾಧ್ಯ: ಚಹಾಲ್
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಕ್ಲಿನ್ ಸ್ವೀಪ್ ಮಾಡಿರುವ ಇಂಗ್ಲೆಂಡ್ ಭರ್ಜರಿ ಫಾರ್ಮ್ ನಲ್ಲಿರಬಹುದು ಆದರೆ ಆಸ್ಟ್ರೇಲಿಯಾ ವಿರುದ್ಧ ರನ್ ಗಳಿಸಿದಷ್ಟು...

Published On :
ಡಬ್ಲಿನ್: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಕ್ಲಿನ್ ಸ್ವೀಪ್ ಮಾಡಿರುವ ಇಂಗ್ಲೆಂಡ್ ಭರ್ಜರಿ ಫಾರ್ಮ್ ನಲ್ಲಿರಬಹುದು ಆದರೆ ಆಸ್ಟ್ರೇಲಿಯಾ ವಿರುದ್ಧ ರನ್ ಗಳಿಸಿದಷ್ಟು ಸುಲಭವಾಗಿ ನಮ್ಮ ಬೌಲರ್ ಗಳ ವಿರುದ್ಧ ರನ್ ಬಾರಿಸುವುದು ಅಸಾಧ್ಯ ಎಂದು ಟೀಂ ಇಂಡಿಯಾದ ಸ್ಪಿನ್ ಬೌಲರ್ ಯಜುವೇಂದ್ರ ಚಹಾಲ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 481 ರನ್ ಬಾರಿಸುವ ಮೂಲಕ ಗರಿಷ್ಠ ರನ್ ಬಾರಿಸಿದ ತಂಡ ಎಂಬ ಖ್ಯಾತಿಗೆ ಭಾಜನವಾಗಿದೆ. ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕಠಿಣ ತರಬೇತಿಯಲ್ಲಿ ತೊಡಗಿದೆ.
ಈ ಸಂಬಂಧ ಮಾತನಾಡಿರುವ ಯಜುವೇಂದ್ರ ಚಹಾಲ್, ಇಂಗ್ಲೆಂಡ್ ಆಟಗಾರರು ಪ್ರಮುಖ ಬೌಲರ್ ಗಳ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡದ ಬೌಲಿಂಗ್ ದಾಳಿಯನ್ನು ಸುಲಭವಾಗಿ ಎದುರಿಸಿದ್ದರು. ಆದರೆ ಟೀಂ ಇಂಡಿಯಾದಲ್ಲಿ ನಾನು, ಕುಲದೀಪ್ ಹಾಗೂ ವಾಷಿಂಗ್ಟನ್ ಸುಂದರ್ ಕಳೆದ ಹಲವಾರು ಏಕದಿನ ಪಂದ್ಯಗಳಲ್ಲಿ ಹೆಚ್ಚು ವಿಕೆಟ್ ಪಡೆದಿದ್ದೇವೆ. ಅಲ್ಲದೆ ಇಂಗ್ಲೆಂಡ್ ಸ್ಪಿನ್ ಗಿಂತ ನಮ್ಮ ಸ್ಪಿನ್ ಬಲಿಷ್ಟವಾಗಿದೆ ಎಂದು ಹೇಳಿದರು.
ಕಳೆದ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯ ವೇಳೆ ಚಹಾಲ್-ಕುಲದೀಪ್ ಯಾದವ್ ಜೋಡಿ ಒಂದೇ ಸರಣಿಯಲ್ಲಿ 33 ವಿಕೆಟ್ ಪಡೆದು ವಿಶ್ವದಾಖಲೆ ನಿರ್ಮಿಸಿತ್ತು. ಇನ್ನು ವಾಷಿಂಗ್ಟನ್ ಸುಂದರ್ ಕೂಡ ಶ್ರೀಲಂಕಾ ಪ್ರವಾಸದಲ್ಲಿ 8 ವಿಕೆಟ್ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಆಸ್ಟ್ರೇಲಿಯಾಟೀಂ ಇಂಡಿಯಾAustraliaTeam Indiaಇಂಗ್ಲೆಂಡ್EnglandYuzvendra Chahalಯಜುವೇಂದ್ರ ಚಹಾಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


