ಕ್ರಿಕೆಟ್

ಕ್ರಿಕೆಟಿಗ ಶುಭ್‌ಮನ್ ಗಿಲ್‌ನ ಪ್ರೀತಿ ಪಾಶದಲ್ಲಿ ಶಾರುಖ್ ಪುತ್ರಿ ಸುಹಾನಾ?

ತಮ್ಮ ನೆಚ್ಚಿನ ಹೀರೋಗಳ ಮೇಲೆ ಕ್ರಶ್ ಆಗುವುದು ಸಾಮಾನ್ಯ. ಆದರೆ ಇಲ್ಲಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಗೆ ಓರ್ವ ಕ್ರಿಕೆಟಿಗನ ಮೇಲೆ ಕ್ರಷ್ ಆಗಿದೆ ಅಂತೆ...

ಕ್ರಿಕೆಟಿಗ ಶುಭ್‌ಮನ್ ಗಿಲ್‌ನ ಪ್ರೀತಿ ಪಾಶದಲ್ಲಿ ಶಾರುಖ್ ಪುತ್ರಿ ಸುಹಾನಾ?
ಶಾರುಖ್ ಖಾನ್, ಸುಹಾನಾ ಖಾನ್, ಶುಭ್‌ಮನ್ ಗಿಲ್‌
Published On :
ತಮ್ಮ ನೆಚ್ಚಿನ ಹೀರೋಗಳ ಮೇಲೆ ಕ್ರಶ್ ಆಗುವುದು ಸಾಮಾನ್ಯ. ಆದರೆ ಇಲ್ಲಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಗೆ ಓರ್ವ ಕ್ರಿಕೆಟಿಗನ ಮೇಲೆ ಕ್ರಷ್ ಆಗಿದೆ ಅಂತೆ.
ಹೌದು, ಐಪಿಎಲ್ ಫ್ರಾಂಚೈಸಿ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಗೆ ಕೆಕೆಆರ್ ತಂಡದ ಆಟಗಾರ, ಐಸಿಸಿ ಅಂಡರ್ 19 ವಿಶ್ವಕಪ್ ವಿಜೇತ ತಂಡದ ಆಟಗಾರ ಶುಭ್‌ಮನ್ ಗಿಲ್‌ ಮೇಲೆ ಕ್ರಶ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಕೆಕೆಆರ್ ಪಂದ್ಯಗಳ ವೇಳೆ ಶಾರುಖ್ ಖಾನ್ ಹಾಗೂ ಪುತ್ರಿ ಸುಹಾನಾ ಸಹ ಕ್ರೀಡಾಂಗಣಕ್ಕೆ ಆಗಮಿಸಿ ಆಟಗಾರರ ಉತ್ಸಾಹವನ್ನು ಹೆಚ್ಚಿಸುತ್ತಿದ್ದರು. ಇನ್ನು ಪಂದ್ಯಗಳ ವೇಳೆ ಶುಭ್‌ಮನ್ ಗಿಲ್‌ ಅವರ ಅಬ್ಬರದ ಬ್ಯಾಟಿಂಗ್ ಗೆ ಸುಹಾನಾ ಫಿದಾ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. 
ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿನ ಶುಭ್‌ಮನ್ ಗಿಲ್‌ ಅತ್ಯುತ್ತಮ ಆಟವನ್ನು ನೋಡಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಅವರನ್ನು 1.8 ಕೋಟಿಗೆ ಖರೀದಿ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.