ಇಂಗ್ಲೆಂಡ್ ತಂಡಕ್ಕೆ ನಿವೃತ್ತಿಯಾದ ಅದಿಲ್ ರಷೀದ್ ಆಯ್ಕೆ, 'ಹಾಸ್ಯಾಸ್ಪದ' ಎಂದ ಮಾಜಿ ನಾಯಕ ಮೈಕೆಲ್ ವಾನ್
ಭಾರತ ತಂಡದ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ ನಿವೃತ್ತಿಯಾಗಿದ್ದ ಆಟಗಾರನ ಆಯ್ಕೆ ಮಾಡಿರುವ ವಿಚಾರ ಇದೀಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Published On :
ಲಂಡನ್: ಭಾರತ ತಂಡದ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ ನಿವೃತ್ತಿಯಾಗಿದ್ದ ಆಟಗಾರನ ಆಯ್ಕೆ ಮಾಡಿರುವ ವಿಚಾರ ಇದೀಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಪ್ರಮುಖವಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ನಿರ್ಧಾರ ಇಂಗ್ಲೆಂಡ್ ತಂಡ ಆಟಗಾರರಿಂದಲೇ ಟೀಕಿಗೆ ಗುರಿಯಾಗಿದ್ದು, ಸ್ವತಃ ಇಂಗ್ಲೆಂಡ್ ತಂಡದ ಮಾಜಿನಾಯಕ ಮೈಕಲ್ ವಾನ್ ಇಸಿಬಿ ನಿರ್ಧಾರವನ್ನು ಹ್ಯಾಸ್ಯಾತ್ಮಕ ಎಂದು ಟೀಕಿಸಿದ್ದಾರೆ. ಅತ್ತ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟವಾಗುತ್ತಿದ್ದಂತೆಯೇ ಇತ್ತ ಟ್ವಿಟರ್ ನಲ್ಲಿ ಪ್ರತ್ಯಕ್ಷರಾದ ಮೈಕೆಲ್ ವಾನ್ ಆಯ್ಕೆ ಸಮಿತಿ ನಿರ್ಧಾರವನ್ನು ವ್ಯಂಗ್ಯ ಮಾಡಿದ್ದಾರೆ.
'ನಾಲ್ಕು ದಿನಗಳ ಪಂದ್ಯವನ್ನೇ ಆಡದ ಆಟಗಾರನೊಬ್ಬನನ್ನು ನಾಲು ಅಂತಾರಾಷ್ಟ್ರೀಯ 5 ದಿನಗಳ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಿದ್ದೇವೆ. ಆತ ಉತ್ತಮ ಆಟಗಾರನೋ ಅಥವಾ ಇಲ್ಲವೋ ಇದನ್ನು ಪಕ್ಕಕ್ಕಿಟ್ಟು ನೋಡಿದರೆ ಇಂಗ್ಲೆಂಡ್ ತಂಡದ ನಿರ್ಧಾರ ನಿಜಕ್ಕೂ ಹಾಸ್ಯಾಸ್ಪದ ಎಂದು ಮೈಕಲ್ ವಾನ್ ಟೀಕಿಸಿದ್ದಾರೆ.
ಭಾರತದ ವಿರುದ್ಧದ ಇತ್ತೀಚೆಗಿನ ಅತ್ಯುತ್ತಮ ಪ್ರದರ್ಶನದಿಂದಾಗಿ ರಷೀದ್ ವಾಪಸ್ ಗೆ ನಿರ್ಧಾರ
ಇನ್ನು ರಷೀದ್ ಆಯ್ಕೆಯನ್ನು ಸಮರ್ಥಿಸಿಕೊಂಡಿರುವ ಇಂಗ್ಲೆಂಡ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಇಡಿ ಸ್ಮಿತ್ ಅವರು, ವಿನಾಕಾರಣ ರಷೀದ್ ಆಯ್ಕೆಯನ್ನು ವಿವಾದ ಮಾಡಲಾಗುತ್ತಿದೆ. ಆದರೆ ಭಾರತ ತಂಡದ ವಿರುದ್ಧ ರಷೀದ್ ತೋರಿದ್ದ ಅದ್ಬುತ ಪ್ರದರ್ಶನವನ್ನು ಪರಿಗಣಿಸಿ ಅವರನ್ನು ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Londonಲಂಡನ್indiaಭಾರತಇಂಗ್ಲೆಂಡ್Englandಮೈಕಲ್ ವಾನ್Edgbaston TestAdil Rashidಎಡ್ಜ್ ಬ್ಯಾಸ್ಟನ್ ಟೆಸ್ಟ್ಅದಿಲ್ ರಷೀದ್Michael Vaughan
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


