ಧೋನಿ ಅಪಹಾಸ್ಯ ಮಾಡಿದ್ದ ಅಭಿಮಾನಿಗಳಿಗೆ ಖಡಕ್ ತಿರುಗೇಟು ನೀಡಿದ ನಾಯಕ ಕೊಹ್ಲಿ!
ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ಕಾರಣಕ್ಕಾಗಿ ಅಭಿಮಾನಿಗಳಿಂದ ಅಪಹಾಸ್ಯಕ್ಕೀಡಾದ ಮಹೇಂದ್ರ ಸಿಂಗ್ ಧೋನಿ ಬೆಂಬಲಕ್ಕೆ ನಾಯಕ ವಿರಾಟ್ ಕೊಹ್ಲಿ ನಿಂತಿದ್ದು, ಅಪಹಾಸ್ಯ ಮಾಡಿದ ಅಭಿಮಾನಿಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ.

Published On :
ಲಾರ್ಡ್ಸ್: ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ಕಾರಣಕ್ಕಾಗಿ ಅಭಿಮಾನಿಗಳಿಂದ ಅಪಹಾಸ್ಯಕ್ಕೀಡಾದ ಮಹೇಂದ್ರ ಸಿಂಗ್ ಧೋನಿ ಬೆಂಬಲಕ್ಕೆ ನಾಯಕ ವಿರಾಟ್ ಕೊಹ್ಲಿ ನಿಂತಿದ್ದು, ಅಪಹಾಸ್ಯ ಮಾಡಿದ ಅಭಿಮಾನಿಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ಲಾರ್ಡ್ಸ್ ನಲ್ಲಿ ಶನಿವಾರ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯದ ಎರಡನೇ ಇನ್ನಿಂಗ್ಸ್ ವೇಳೆ ಭಾರತದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಯನ್ನು ಅಭಿಮಾನಿಯೊಬ್ಬ ಅಪಹಾಸ್ಯ ಮಾಡಿದ ಘಟನೆ ನಡೆದಿತ್ತು.
ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ 322 ರನ್ ಗಳಿಗೆ ಉತ್ತರಿಸಿದ 236 ರನ್ ಗಳಿಸಿ 86 ರನ್‌ಗಳಿಂದ ಸೋಲನುಭವಿಸಿತ್ತು. ಪಂದ್ಯದದಲ್ಲಿ ನಿಧಾನ ಗತಿಯ ಬ್ಯಾಟಿಂಗ್ ನಡೆಸಿದ ಧೋನಿ 58 ಎಸೆತಗಳಲ್ಲಿ 37 ರನ್‌ಗಳಿಸಿದ್ದರು. ಧೋನಿಯ ಈ ನಿಧಾನ ಗತಿಯ ಬ್ಯಾಟಿಂಗ್ ಭಾರೀ ಟೀಕೆಗೆ ಒಳಗಾಗಿತ್ತು. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಧೋನಿ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಇದರಿಂದ ಕೊಂಚ ವಿಚಲಿತರಾದಂತೆ ಕಂಡು ಬಂದ ಧೋನಿ ಅದರ ನಡುವೆಯೇ ಏಕದಿನದಲ್ಲಿ 10 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು.
ಪಂದ್ಯದ ಬಳಿಕ ಪ್ರೆಸೆಂಟೇಶನ್ ಸೆರಮನಿ ವೇಳೆಯಲ್ಲೂ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೈನ್, ಈ ಬಗ್ಗೆ ಪ್ರಸ್ತಾಪಿಸಿದಾಗ ವಿರಾಟ್ ಕೋಹ್ಲಿ, ಹೌದು ಅವರು ಯಾವತ್ತು ಆಡಿದ ಹಾಗೆ ಆಟ ಆಡಲಿಲ್ಲ. ಆದರೆ ಜನ ಅವರ ಒಂದೇ ಆಟ ನೋಡಿ ಈ ತೀರ್ಮಾನಕ್ಕೆ ಬರಬಾರದು. ಅವರು ಒಳ್ಳೆಯದಾಗಿ ಆಟ ಆಡಿದಾಗ ಬೆಸ್ಟ್ ಫಿನಿಶರ್ ಎಂದು ಹೇಳುತ್ತಾರೆ. ಉತ್ತಮ ಆಟ ಪ್ರದರ್ಶಿಸದಿದ್ದರೆ ಟೀಕೆ ಮಾಡುತ್ತಾರೆ. ಅದು ಸರಿಯಲ್ಲ ಎಂದು ಮಾಜಿ ನಾಯಕನನ್ನು ವಿರಾಟ್ ಕೊಹ್ಲಿ ಸಮರ್ಥಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


