ಮತ್ತೊಂದು ದಾಖಲೆ ಬರೆದ ಧೋನಿ: 10 ಸಾವಿರ ರನ್ ಪೂರೈಸಿದ 2ನೇ ವಿಕೆಟ್ ಕೀಪರ್
ಟೀಂ ಇಂಡಿಯಾದ ಮಿ.ಕೂಲ್ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಮತ್ತೊಂದು ವಿಶ್ವದಾಖಲೆಯನ್ನು ನಿರ್ಮಿಸಿದ್ದು, ಏಕದಿನ ಕ್ರಿಕೆಟ್ ನಲ್ಲಿ 10 ಸಾವಿರ ಪೂರೈಸಿ ಹಲವು ದಾಖಲೆಗಳಿಕೆ ಕಾರಣರಾಗಿದ್ಜಾರೆ.

Published On :
ಲಾರ್ಡ್ಸ್: ಟೀಂ ಇಂಡಿಯಾದ ಮಿ.ಕೂಲ್ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಮತ್ತೊಂದು ವಿಶ್ವದಾಖಲೆಯನ್ನು ನಿರ್ಮಿಸಿದ್ದು, ಏಕದಿನ ಕ್ರಿಕೆಟ್ ನಲ್ಲಿ 10 ಸಾವಿರ ಪೂರೈಸಿ ಹಲವು ದಾಖಲೆಗಳಿಕೆ ಕಾರಣರಾಗಿದ್ಜಾರೆ.
ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಧೋನಿ 37 ರನ್ ಗಳಿಸಿದ್ದರು. ಆ ಮೂಲಕ ಧೋನಿ ಏಕದಿನ ಕ್ರಿಕೆಟ್ ನಲ್ಲಿ 10, 004 ರನ್ ಗಳಿಸಿದ್ದಾರೆ. ವಿಶ್ವಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ 2ನೇ ವಿಕೆಟ್ ಕೀಪರ್ ಬ್ಯಾಟ್ಸಮನ್ ಎಂಬ ಕೀರ್ತಿಗೆ ಧೋನಿ ಪಾತ್ರರಾಗಿದ್ದಾರೆ.
ಇದಕ್ಕೂ ಮೊದಲು ಈ ಹಿರಿಮೆ ಶ್ರೀಲಂಕಾದ ವಿಕೆಟ್ ಕೀಪರ್ ಬ್ಯಾಟ್ಸಮನ್ ಕುಮಾರ ಸಂಗಕ್ಕಾರ ಅವರ ಹೆಸರಿನಲ್ಲಿತ್ತು. ಸಂಗಕ್ಕಾರ 13,341 ರನ್ ಗಳಿಸಿದ್ದು, 2015ರಲ್ಲಿ ನಿವೃತ್ತಿ ಘೋಷಣೆ ಮಾಡಿದ್ದರು. ಆ ಬಳಿಕದ ಸ್ಥಾನದಲ್ಲಿ ಎಂಎಸ್ ಧೋನಿ ಇದ್ದು ಧೋನಿ ಒಟ್ಟು 320 ಪಂದ್ಯಗಳಿಂದ 10, 004 ರನ್ ಪೇರಿಸಿದ್ದಾರೆ. ಇನ್ನು ಇದಕ್ಕೂ ಮೊದಲು ಆಸ್ಚ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸಮನ್ ಕಿಲ್ ಕ್ರಿಸ್ಟ್ 9,410 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದರು. ಈ ಸ್ಥಾನವನ್ನು ಇದೀಗ ಧೋನಿ ಕಸಿದಿದ್ದಾರೆ.
ಇನ್ನು ಧೋನಿ 10 ಸಾವಿರ ರನ್ ಪೂರೈಸುವ ಮೂಲಕ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬ್ಯಾಟ್ಸಮನ್ ಆಗಿದ್ದಾರೆ. ಇದಕ್ಕೂ ಮೊದಲು ಭಾರತ ಕ್ರಿಕೆಟ್ ದಂತಕಥೆಗಳಾದ ಸಚಿನ್ ತೆಂಡೂಲ್ಕರ್ (18, 426 ರನ್ -463 ಪಂದ್ಯ), ಸೌರವ್ ಗಂಗೂಲಿ 11, 363 ರನ್, 311 ಪಂದ್ಯ) ಮತ್ತು ರಾಹುಲ್ ದ್ರಾವಿಡ್ (10, 889 ರನ್, 344 ಪಂದ್ಯ) ಈ ಸಾಧನೆ ಮಾಡಿದ್ದರು. ಇದೀಗ ಈ ಪಟ್ಟಿಗೆ ಎಂಎಸ್ ಧೋನಿ ಸೇರ್ಪಡೆಯಾಗಿದ್ದಾರೆ. ಅಂತೆಯೇ ಈ ಸಾಧನೆ ಮಾಡಿದ ವಿಶ್ವದ 12 ಆಟಗಾರ ಎಂಬ ಕೀರ್ತಿಗೂ ಧೋನಿ ಭಾಜನರಾಗಿದ್ದಾರೆ.
ಕ್ಯಾಚ್ ನಲ್ಲೂ ದಾಖಲೆ
ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಉಮೇಶ್ ಯಾದವ್ ಬೌಲಿಂಗ್ ನಲ್ಲಿ ಜಾಸ್ ಬಟ್ಲರ್ ಅವರ ಕ್ಯಾಚ್ ಪಡೆಯುವ ಮೂಲಕ ಧೋನಿ ತ್ರಿಶತಕ ಕ್ಯಾಚ್ ಸಾಧನೆ ಮಾಡಿದ್ದಾರೆ. ಇದು ಅವರ ಏಕದಿನ ಕ್ರಿಕೆಟ್ ನಲ್ಲಿ 300ನೇ ಕ್ಯಾಚ್ ಆಗಿದೆ. 300ಕ್ಕೂ ಅಧಿಕ ಕ್ಯಾಚ್ ಪಡೆದ ಆಟಗಾರರಲ್ಲಿ ಧೋನಿ ನಾಲ್ಕನೇಯವರಾಗಿದ್ದು, ಇದಕ್ಕೂ ಮೊದಲು ಆಸ್ಟ್ರೇಲಿಯಾ ಆ್ಯಡಂ ಗಿಲ್ ಕ್ರಿಸ್ಟ್ (417 ಕ್ಯಾಚ್) ಮೊದಲ ಸ್ಥಾನದಲ್ಲಿದ್ದಾರೆ. ಆ ಬಳಿಕಜದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಮಾರ್ಕ್ ಬೌಚರ್ (403 ಕ್ಯಾಚ್), ಮೂರನೇ ಸ್ಥಾನದಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕಾರ (402)ಇದ್ದಾರೆ. ಧೋನಿ ನಾಲ್ಕನೇ ಸ್ಥಾನದಲ್ಲಿದ್ದು, ಧೋನಿ ಬಳಿಕದ ಸ್ಥಾನದಲ್ಲಿ ನ್ಯೂಜಿಲೆಂಡ್ ನ ಬ್ರೆಂಡನ್ ಮೆಕ್ಕಲಮ್ (262) ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತಟೀಂ ಇಂಡಿಯಾTeam IndiaMS DhoniRecordದಾಖಲೆಎಂಎಸ್ ಧೋನಿಇಂಗ್ಲೆಂಡ್Englandಲಾರ್ಡ್ಸ್Cricket Offbeatಕ್ರಿಕೆಟ್ ಸ್ವಾರಸ್ಯLords
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


