1ನೇ ಏಕದಿನ ಪಂದ್ಯ: ಫೀಲ್ಡಿಂಗ್ ವೈಫಲ್ಯ, ಟೀಂ ಇಂಡಿಯಾಗೆ ಗೆಲ್ಲಲು 270 ರನ್‌ಗಳ ಗುರಿ
ಟೀಂ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ 269 ರನ್ ಗಳನ್ನು ಪೇರಿಸಿದೆ.

Published On :
ಡರ್ಬನ್: ಟೀಂ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ 269 ರನ್ ಗಳನ್ನು ಪೇರಿಸಿದೆ.
ಕಿಂಗ್ಸ್ ಮೇಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಫ್ರಿಕಾ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 269 ರನ್ ಪೇರಿಸಿದ್ದು ಭಾರತಕ್ಕೆ ಗೆಲ್ಲಲು 270 ರನ್ ಗಳ ಗುರಿ ನೀಡಿದೆ.
ಆಫ್ರಿಕಾ ತಂಡದ ನಾಯಕ ಡುಪ್ಲೇಸಿಸ್ ಭರ್ಜರಿ ಶತಕ ಸಿಡಿಸಿದ್ದು ತಂಡದ ಸ್ಪರ್ಧಾತ್ಮಕ ರನ್ ಪೇರಿಸಲು ಸಾಧ್ಯವಾಯಿತು. ಡುಪ್ಲೇಸಿಸ್ 112 ಎಸೆತಗಳಲ್ಲಿ 120 ರನ್ ಸಿಡಿಸಿದ್ದಾರೆ.
ಆಫ್ರಿಕಾ ಪರ ಹಾಶೀಂ ಆಮ್ಲಾ 16, ಡಿ ಕಾಕ್ 34, ಮಾರ್ಕ್ರಮ್ 9, ಜೆಪಿ ಡುಮಿನಿ 12, ಮಿಲ್ಲರ್ 7, ಮೋರಿಸ್ 37, ಫೆಹ್ಲುಕ್ವೇವೊ 24, ರಬಾಡ ಸಿಡಿಸಿದ್ದಾರೆ.
ಭಾರತ ಪರ ಕುಲದೀಪ್ ಯಾದವ್ 3, ಯಜುಂವೇಂದ್ರ ಚಹಾಲ್ 2, ಭುವನೇಶ್ವರ್ ಕುಮಾರ್ ಮತ್ತು ಬೂಮ್ರಾ ತಲಾ 1 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


