ಐಪಿಎಲ್ ಹರಾಜು ಪ್ರತಿ ವರ್ಷ ನಡೆಯುತ್ತೆ, ಆದ್ರೆ ವಿಶ್ವಕಪ್ ಪ್ರತಿ ವರ್ಷ ನಡೆಯಲ್ಲ: ರಾಹುಲ್ ದ್ರಾವಿಡ್
ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಅಂಡರ್ 19 ಐಸಿಸಿ ವಿಶ್ವಕಪ್ ಬಗ್ಗೆ ಸಂಪೂರ್ಣ ಗಮನ ಹರಿಸಿ, ಐಪಿಎಲ್ ಹರಾಜು ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ....

Published On :
ಕ್ವೀನ್ಸ್ ಟೌನ್: ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಅಂಡರ್ 19 ಐಸಿಸಿ ವಿಶ್ವಕಪ್ ಬಗ್ಗೆ ಸಂಪೂರ್ಣ ಗಮನ ಹರಿಸಿ, ಐಪಿಎಲ್ ಹರಾಜು ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಭಾರತದ ಕಿರಿಯರ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ತಮ್ಮ ಹುಡುಗರಿಗೆ ಸೂಚಿಸಿದ್ದಾರೆ.
ಮೂರು ಬಾರಿ ಚ್ಯಾಂಪಿಯನ್ ಆಗಿರುವ ಭಾರತದ ಕಿರಿಯರ ತಂಡ ಈ ಬಾರಿ ಮತ್ತೆ ಕ್ವಾಟರ್ ಫೈನಲ್ ತಲುಪಿದ್ದು, ನಾಳೆ ಬಾಂಗ್ಲಾದೇಶವನ್ನು ಎದರಿಸಲಿದೆ.
ಐಪಿಎಲ್ ಹರಾಜು ಪ್ರತಿ ವರ್ಷ ನಡೆಯುತ್ತದೆ. ಆದರೆ ಪ್ರತಿ ವರ್ಷ ವಿಶ್ವಕಪ್ ನಲ್ಲಿ ಆಡುವ ಅವಕಾಶ ಸಿಗುವುದಿಲ್ಲ. ದೀರ್ಘಾವಧಿಯ ಭವಿಷ್ಯದ ಬಗ್ಗೆ ಗಮನ ಕೊಡಿ. ಅಲ್ಪಾವಧಿ ಭವಿಷ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಡಿ ಎಂದು ರಾಹುಲ್ ಕಿರಿಯ ಆಟಗಾರರಿಗೆ ಸೂಚಿಸಿರುವುದಾಗಿ ಇಎಸ್ ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ.
ಐಪಿಎಲ್ ಹರಾಜು ಪ್ರಕ್ರಿಯೆ ಇದೇ ಶನಿವಾರ ಮತ್ತು ಭಾನುವಾರ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಕಿರಿಯರ ತಂಡದ ನಾಯಕ ಪೃಥ್ವಿ ಶಾ, ಶುಬ್ಮಾನ್ ಗಿಲ್, ಹಿಮಾಂಶು ರಾಣಾ, ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ಕಮಲೇಶ್ ನಾಗರಕೋಟಿ, ಶಿವಂ ಮವಿ, ಹರ್ಷದೀಪ್ ದೀಪ್ ಸಿಂಗ್ ಮತ್ತು ಹಾರ್ವಿಕ್ ದೇಶಾಯಿ ಹರಾಜು ಪಟ್ಟಿಯಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ವಿಶ್ವಕಪ್Rahul Dravidರಾಹುಲ್ ದ್ರಾವಿಡ್IPL auctionಐಪಿಎಲ್ ಹರಾಜು2018 under 19 Cricket World Cupಭಾರತ 2018ರ ಅಂಡರ್ 19 ಕ್ರಿಕೆಟ್ ವಿಶ್ವಕಪ್ ಚಾಂಪಿಯನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


