ಚಹಾಲ್-ಕುಲ್ದೀಪ್ ಯಶಸ್ಸಿನ ಹಿಂದೆ ಎಂಎಸ್ ಧೋನಿ ಪರಿಶ್ರಮ!
ಆತಿಥೇಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಯಜುವೇಂದ್ರ ಚಹಾಲ್ ಮತ್ತು ಕುಲ್ ದೀಪ್ ಯಾದವ್ ಸಾಧನೆ ಹಿಂದೆ ಮಾಜಿ ನಾಯಕ...

Published On :
ಹೈದರಾಬಾದ್: ಆತಿಥೇಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಯಜುವೇಂದ್ರ ಚಹಾಲ್ ಮತ್ತು ಕುಲ್ ದೀಪ್ ಯಾದವ್ ಸಾಧನೆ ಹಿಂದೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪರಿಶ್ರಮ ಅಡಗಿದೆ ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅತುಲ್ ವಾಸ್ಸನ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ನೆಲದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದೆ. ಈ ಸರಣಿ ಗೆಲುವಿಗಾಗಿ ಸ್ಪಿನ್ ಬೌಲರ್ ಗಳಾದ ಚಹಾಲ್ ಮತ್ತು ಕುಲ್ ದೀಪ್ ಪ್ರಮುಖ ಪಾತ್ರವಹಿಸಿದ್ದಾರೆ. ಐದು ಏಕದಿನ ಪಂದ್ಯದಳಲ್ಲಿ ಈ ಜೋಡಿ ಒಟ್ಟು 30 ವಿಕೆಟ್ ಗಳನ್ನು ಪಡೆದಿದೆ. ಇವರ ಯಶಸ್ಸಿನ ಹಿಂದೆ ಮಾಜಿ ನಾಯಕ ಧೋನಿ ಪರಿಶ್ರಮ ಅಡಗಿದೆ ಎಂದು ಅತುಲ್ ವಾಸ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯದ ವೇಳೆ ಎಂಎಸ್ ಧೋನಿ ಬೌಲರ್ ಗಳಿಗೆ ಸಲಹೆ, ಸೂಚನೆಗಳನ್ನು ನೀಡುತ್ತಾರೆ. ಹೇ ಅಬ್ ಇದರ್ ನಿಕ್ಲೇಗಾ(ಹೇ ಈ ಕಡೆ ಸರಿಯುತ್ತಾನೆ), ಹೇ ಅಬ್ ಇದರ್ ಮಾರೇಗಾ(ಹೇ ಈ ಕಡೆ ಹೊಡಿಯುತ್ತಾನೆ) ಎಂಬುದು ಸ್ಟಂಪ್ ಮೈಕ್ ನಿಂದ ನಾನು ಕೇಳಿದ್ದೇನೆ. ಅವರ ಸೂಚನೆಯ ಮೇರೆಗೆ ಇಬ್ಬರೂ ಬೌಲಿಂಗ್ ಮಾಡಿ ಯಶಸ್ಸು ಕಂಡುಕೊಂಡಿದ್ದಾರೆ ಎಂದು ಅತುಲ್ ಹೇಳಿದ್ದಾರೆ.
ಸರಣಿ ಗೆಲುವಿನ ಐದನೇ ಏಕದಿನ ಪಂದ್ಯದಲ್ಲಿ ಕುಲ್ ದೀಪ್ ಯಾದವ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ ಚಹಾಲ್ ಎರಡು ವಿಕೆಟ್ ಗಳನ್ನು ಪಡೆದು ತಂಡಕ್ಕೆ ಆಸರೆಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam IndiaMS Dhoniಎಂಎಸ್ ಧೋನಿYuzvendra Chahalಯಜುವೇಂದ್ರ ಚಹಾಲ್Kuldeep Yadavಕುಲ್ದೀಪ್ ಯಾದವ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


