ಕ್ರಿಕೆಟ್

ಗಾಯದ ಸಮಸ್ಯೆ: ದಕ್ಷಿಣ ಆಫ್ರಿಕಾ ವಿರುದ್ಧ ಟಿ 20 ಸರಣಿಯಿಂದ ಹೊರಗುಳಿದ ಝುಲನ್ ಗೋಸ್ವಾಮಿ

ಗಾಯದ ಸಮಸ್ಯೆಯ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ 20 ಮಹಿಳಾ ಕ್ರಿಕೆಟ್ ಸರಣಿಯಿಂದ ಭಾರತ ತಂಡದ ಹಿರಿಯ ಆಟಗಾರ್ತಿ ಝುಲನ್ ಗೋಸ್ವಾಮಿ ಹೊರಗುಳಿಯಲಿದ್ದಾರೆ.

ಗಾಯದ ಸಮಸ್ಯೆ: ದಕ್ಷಿಣ ಆಫ್ರಿಕಾ ವಿರುದ್ಧ ಟಿ 20 ಸರಣಿಯಿಂದ ಹೊರಗುಳಿದ ಝುಲನ್ ಗೋಸ್ವಾಮಿ
ಝುಲನ್ ಗೋಸ್ವಾಮಿ
Published On :
ಪೊಟ್ಚೆಸ್ಟ್ರೋಮ್ (ದಕ್ಷಿಣ ಆಫ್ರಿಕಾ): ಗಾಯದ ಸಮಸ್ಯೆಯ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ 20 ಮಹಿಳಾ ಕ್ರಿಕೆಟ್ ಸರಣಿಯಿಂದ ಭಾರತ ತಂಡದ ಹಿರಿಯ ಆಟಗಾರ್ತಿ ಝುಲನ್ ಗೋಸ್ವಾಮಿ ಹೊರಗುಳಿಯಲಿದ್ದಾರೆ.
ಗೋಸ್ವಾಮಿಯವರಿಗೆ ಕಾಲಿನ  ಭಾಗದಲ್ಲಿ ಗಾಯವಾಗಿದ್ದು ಸೋಮವಾರ ಅವರು ಎಂಆರ್ ಐ ಸ್ಕಾನ್ ಗೆ ಒಳಗಾಗಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿದೆ. ಮೂಳೆಗಳ ಮೇಲಿನ ಯಾವ ಹೆಚ್ಚಿನ ಒತ್ತಡ ತಪ್ಪಿಸುವ ಸಲುವಾಗಿ ಅವರಿಗೆ ಕಲ ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಅಗತ್ಯವಿದೆ  ಎಂದು ಬಿಸಿಸಿಐ ವೈದ್ಯಕೀಯ ತಂಡದೊಡನೆ ಮಾತನಾಡಿದ ಸ್ಥಳೀಯ ವೈದ್ಯರು ಹೇಳಿದ್ದಾರೆ.
ಆಫ್ರಿಕಾದಿಂದ ಹಿಂದಿರುಗಿದ ನಂತರ, ಗೋಸ್ವಾಮಿ ಕಾಲುಗಳ ತಜ್ಞರನ್ನು ಭೇಟಿಯಾಗಲಿದ್ದು ಬೆಂಗಳೂರಿನ ಎನ್ ಸಿಎ ನಲ್ಲಿ ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಹಿಂದೆ ನಡೆದ ಮೂರು ಪಂದ್ಯಗಳ ಮಹಿಳಾ ಏಕದಿನ ಸರಣಿಯಲ್ಲಿ ಗೋಸ್ವಾಮಿ ಐದು ವಿಕೆಟ್ ಗಳನ್ನು ಗಳಿಸಿದ್ದರು, ಸರಣಿಯಲ್ಲಿ ಭಾರತ 2-1 ಅಂತರದ ಜಯ ದಾಖಲಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.