ಭಾರತದ ತ್ರಿವರ್ಣ ಧ್ವಜಕ್ಕೆ ಗೌರವ: ಕೋಟ್ಯಾಂತರ ಭಾರತೀಯರ ಹೃದಯ ಗೆದ್ದ ಅಫ್ರಿದಿ
ಭಾರತದ ತಿರಂಗ ಧ್ವಜಕ್ಕೆ ಗೌರವ ನೀಡುವ ಮೂಲಕ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮತ್ತೊಮ್ಮೆ ಸಾವಿರಾರು ಭಾರತೀಯ ಹೃದಯ ಗೆದ್ದಿದ್ದಾರೆ...

Published On :
ಸೇಂಟ್ ಮೊರಿಟ್ಜ್: ಭಾರತದ ತಿರಂಗ ಧ್ವಜಕ್ಕೆ ಗೌರವ ನೀಡುವ ಮೂಲಕ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮತ್ತೊಮ್ಮೆ ಸಾವಿರಾರು ಭಾರತೀಯ ಹೃದಯ ಗೆದ್ದಿದ್ದಾರೆ.
ಸ್ವಿಟ್ಜರ್'ಲ್ಯಾಂಡ್'ನ ಸೈಂಟ್ ಮೊರಿಟ್ಜ್ ನಗರದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿ ಬಳಿಕ ಅಭಿಮಾನಿಯೊಬ್ಬರ ಜೊತೆ ಫೋಟೋಗೆ ಪೋಸ್ ನೀಡುವ ವೇಳೆ ಅಫ್ರಿದಿ ಭಾರತದ ಧ್ವಜಕ್ಕೆ ಗೌರವ ಸೂಚಿಸಿದ್ದಾರೆ. ಅಫ್ರಿದಿಯವರ ಈ ನಡವಳಿಕೆಗೆ ಇದೀಗ ಭಾರೀ ಪ್ರಶಂಸೆಗಳು ವ್ಯಕ್ತವಾಗತೊಡಗಿವೆ.
ಫೆ.8 ರಂದು ಸೈಂಟ್ ಮೊರಿಟ್ಜ್ ನಗರದ ಸ್ಕಿ ರಿಸಾರ್ಟ್ ನಲ್ಲಿ ಕ್ರಿಕೆಟ್ ಕ್ಷೇತ್ರದ ದಿಗ್ಗಜರಾದ ವಿರೇಂದ್ರ ಸೆಹ್ವಾಸ್, ಆಸ್ಟ್ರೇಲಿಯಾಗ ಮೈಕ್ ಹಸ್ಸಿ, ಪಾಕಿಸ್ತಾನಾದ ಶೊಯೆಬ್ ಅಖ್ತರ್ ಹಾಗೂ ಶ್ರೀಲಂಕಾದ ಮಹೇಲಾ ಜಯವರ್ಧನೆ ಸೇರಿದಂತೆ ಹಲವು ಕ್ರಿಕೆಟಿಗರು ಟಿ.20 ಪಂದ್ಯವೊಂದರಲ್ಲಿ ಭಾಗವಹಿಸಿದ್ದರು.
ಪ್ಯಾಲೇಸ್ ಡೈಮಂಡ್ಸ್ ಹಾಗೂ ರಾಯಲ್ಸ್ ತಂಡಗಳ ನಡುವೆ ಪಂದ್ಯಾದಾಟ ನಡೆದಿದ್ದು, ವಿರೇಂದ್ರ ಸೆಹ್ವಾಹ್ ಹಾಗೂ ಪಾಕಿಸ್ತಾನದ ಶಾಹಿದ್ ಅಫ್ರಿದಿ ತಂಡಗಳ ನಾಯಕರಾಗಿದ್ದರು.
ಪಂದ್ಯದ ಬಳಿಕ ಅಭಿಮಾನಿಗಳತ್ತ ಧಾವಿಸಿದ ಅಫ್ರಿದಿ ಫೋಟೋಗಳಿಗೆ ಪೋಸ್ ನೀಡಲು ಆರಂಭಿಸಿದ್ದರು. ಹೀಗೆಯೇ ಭಾರತೀಯ ಅಭಿಮಾನಿಯತ್ತ ಸಾಗಿದ ಅಫ್ರಿದಿ ಫೋಟೋಗೆ ಪೋಸ್ ನೀಡಲು ಆರಂಭಿಸಿದ್ದರು. ಈ ವೇಳೆ ಅಭಿಮಾನಿ ಭಾರತದ ತಿರಂಗ ಧ್ವಜವನ್ನು ಸರಿಯಾಗಿ ಹಿಡಿದುಕೊಳ್ಳದೇ ಇರುವುದನ್ನು ಗಮನಿಸಿದ ಅಫ್ರಿದಿ, ನಿಮ್ಮ ಧ್ವಜನ್ನು ಸರಿಯಾಗಿ ಹಿಡಿದುಕೊಳ್ಳಿ ಎಂದು ಹೇಳಿದರು. ಬಳಿಕ ಅಭಿಮಾನಿ ಧ್ವಜನ್ನು ಸರಿಯಾಗಿ ಹಿಡಿದುಕೊಂಡ ಬಳಿಕ ಅಫ್ರಿದಿ ಸೆಲ್ಫೀ ಕ್ಲಿಕ್ಕಿಸಿಕೊಂಡರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪಾಕಿಸ್ತಾನ ಕ್ರಿಕೆಟಿಗನಿಗೆ ಸಾವಿರಾರು ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವ್ಯಕ್ತಿಗಳ ನಡುವಿನ ಸಂಬಂಧಗಳು ದೇಶಗಳ ನಡುವೆ ಹೇಗೆ ಸಂಬಂಧವನ್ನು ಬೆಸೆಯಬಹುದು ಎಂಬುದನ್ನು ಕ್ರಿಕೆಟಿಗರು ತೋರಿಸಬಹುದು ಹಾಗೂ ಉದಾಹರಣೆಯಾಗಿಯೂ ನಿಲ್ಲಬಹುದು ಎಂದು ನಾನು ನಂಬಿದ್ದೇನೆ. ಪಾಕಿಸ್ತಾನದ ಬಳಿಕ ಭಾರತ ಮತ್ತು ಆಸ್ಟ್ರೇಲಿಯಾ ಎರಡು ದೇಶಗಳಲ್ಲಿ ನನಗೆ ಅತ್ಯಂತ ಹೆಚ್ಚು ಪ್ರೀತಿ ಹಾಗೂ ಗೌರವ ಸಿಕ್ಕಿದೆ ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pakistanಪಾಕಿಸ್ತಾನಭಾರತೀಯರುShahid Afridiಶಾಹಿದ್ ಅಫ್ರಿದಿIndiansತ್ರಿವರ್ಣ ಧ್ವಜIndian flagCricket Offbeatಕ್ರಿಕೆಟ್ ಸ್ವಾರಸ್ಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


