ಪ್ರಥಮ ದರ್ಜೆ ಕ್ರಿಕೆಟ್ ಅದ್ಬುತ, ಹೀಗಾಗಿ ಗೆದ್ದಿದ್ದೇವೆ: ಓಕೀಫೆಗೆ ಕೊಹ್ಲಿ ತೀಕ್ಷ್ಣ ಪ್ರತಿಕ್ರಿಯೆ
ಮಯಾಂಕ್ ಅಗರ್ ವಾಲ್ ಸೇರಿ ಹಲವು ಆಟಗಾರರ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಟೀಕೆ ಮಾಡಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರರಾದ ಕೇರಿ ಓಕೀಫೆ ಹಾಗೂ ಮಾರ್ಕ್ ವ್ಹಾ ಮುಟ್ಟಿ ನೋಡಿಕೊಳ್ಳುವಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ

ಮೆಲ್ಬರ್ನ್ : ಕರ್ನಾಟಕದ ಮಯಾಂಕ್ ಅಗರ್ ವಾಲ್ ಸೇರಿ ಹಲವು ಆಟಗಾರರ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಟೀಕೆ ಮಾಡಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರರಾದ ಕೇರಿ ಓಕೀಫೆ ಹಾಗೂ ಮಾರ್ಕ್ ವ್ಹಾ ಮುಟ್ಟಿ ನೋಡಿಕೊಳ್ಳುವಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ
ಆಸ್ಟ್ರೇಲಿಯಾ ವಿರುದ್ಧ ಭಾರತ 137ರನ್ ಗಳಿಂದ ಮೂರನೇ ಟೆಸ್ಟ್ ಪಂದ್ಯ ಗೆದ್ದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ನಮ್ಮ ಪ್ರಥಮ ದರ್ಜೆ ಕ್ರಿಕೆಟ್ ಅದ್ಬುತ ರೀತಿಯದಾಗಿದೆ. ಆದ್ದರಿಂದಲೇ ಮೂರನೇ ಟೆಸ್ಟ್ ಪಂದ್ಯದಲ್ಲೂ ಗೆಲುವು ಸಾಧಿಸಿದ್ದು, ಈ ಗೆಲುವಿನ ಕ್ರೆಡಿಟ್ ಪ್ರಥಮ ದರ್ಜೆ ಕ್ರಿಕೆಟ್ ಗೆ ಸಲ್ಲಿಬೇಕು, ಉತ್ತಮ ವೇಗಿಗಳಿಂದಾಗಿ ವಿದೇಶದಲ್ಲೂ ಟೀಂ ಇಂಡಿಯಾ ಗೆಲಲ್ಲು ನೆರವಾಗಿದೆ ಎಂದು ಯಾರ ಹೆಸರನ್ನೂ ಹೇಳದೆ ಪ್ರತಿಕ್ರಿಯೆ ನೀಡಿದ ವಿರಾಟ್ ಕೊಹ್ಲಿ, ಪರೋಕ್ಷವಾಗಿ ಆಸ್ಟ್ರೇಲಿಯಾದ ವೇಗಿ ಓಕೀಫೆಗೆ ತಿರುಗೇಟು ನೀಡಿದರು.
86 ರನ್ ಗಳಿಗೆ 9 ವಿಕೆಟ್ ಪಡೆದುಕೊಂಡು ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡಿರುವ ಬೂಮ್ರಾ ಕೂಡಾ ಟೆಸ್ಟ್ ಕ್ರಿಕೆಟ್ ಯಶಸ್ವಿ ಹೊರತಾಗಿಯೂ ರಣಜಿ ಟ್ರೋಫಿಯಲ್ಲೂ ಮಹತ್ವದ ಕೊಡುಗೆ ನೀಡಿದ್ದಾರೆ.
ರಣಜಿ ಕ್ರಿಕೆಟ್ ವೇಳೆಯಲ್ಲಿ ಬೌಲಿಂಗ್ ನಲ್ಲಿ ಉತ್ತಮ ತರಬೇತಿ ಪಡೆದುಕೊಂಡಿದ್ದರಿಂದ ಇಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ಬೂಮ್ರಾ ಕೂಡಾ ಪ್ರತಿಕ್ರಿಯಿಸಿದರು.
ಪ್ರಥಮ ದರ್ಜೆ ಪಂದ್ಯದಲ್ಲಿ ಮೊದಲ ಬಾರಿಗೆ ತ್ರಿಶತಕ ದಾಖಲಿಸಿದ್ದ ಮಯಾಂಕ್ ಅಗರ್ ವಾಲ್, ರೈಲ್ವೆ ಕ್ಯಾಂಟೀನ್ ಸಿಬ್ಬಂದಿ ಮೇಲೆ ತ್ರಿಶತಕ ದಾಖಲಿಸಿದ್ದಾರೆ ಎಂದು ಓಕೀಫೆ ಅವಹೇಳನಕಾರಿಯಾಗಿ ಟೀಕೆ ಮಾಡಿದ್ದರು.ಈ ಟೀಕೆ ತೀವ್ರ ಚರ್ಚೆಯಾಗುತ್ತಿದ್ದಂತೆ ನಂತರ ಓಕೀಫೆ ಕ್ಷಮೆಯಾಚಿಸಿದ್ದರು.
ಆದಾಗ್ಯೂ, ನಾಲ್ಕನೇ ದಿನದ ವೇಳೆ ಚೇತೇಶ್ವರ್ ಪೂಜಾರ ಹಾಗೂ ರವೀಂದ್ರ ಜಡೇಜಾ ವಿರುದ್ಧ ಓಕೀಫೆ ಟೀಕಿ ಮಾಡಿದ್ದ. ಈ ರೀತಿಯ ಟೀಕೆಗಳು ಭಾರತೀಯ ಆಟಗಾರರಲ್ಲಿ ಅಸಮಾಧಾನ ಮೂಡಿಸಿವೆ. ಆದರೆ, ಅವುಗಳಿಗೆಲ್ಲಾ ಮೈದಾನದಲ್ಲೇ ಅವರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಟೀಂ ಇಂಡಿಯಾ ಬೌಲಿಂಗ್ ಕೋಚ್ ಭರತ್ ಅರುಣ್ ನಿನ್ನೆ ಹೇಳಿಕೆ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


