3ನೇ ಟೆಸ್ಟ್ ಪಂದ್ಯ: ಒಂದೇ ಪಂದ್ಯದಿಂದ ಹಲವು ದಾಖಲೆಗಳ ಮುರಿದ ಜಸ್ ಪ್ರೀತ್ ಬುಮ್ರಾ
ಜಸ್ ಪ್ರೀತ್ ಬುಮ್ರಾ ಹೊಸ ವರ್ಷಕ್ಕೆ ಇನ್ನೂ 2 ದಿನ ಬಾಕಿ ಇರುವಂತೆಯೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದು, ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಹಲವು ದಾಖಲೆಗಳ ನಿರ್ಮಾಣ ಮಾಡಿದ್ದಾರೆ.

Published On :
ಮೆಲ್ಬೋರ್ನ್: ಜಸ್ ಪ್ರೀತ್ ಬುಮ್ರಾ ಹೊಸ ವರ್ಷಕ್ಕೆ ಇನ್ನೂ 2 ದಿನ ಬಾಕಿ ಇರುವಂತೆಯೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದು, ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಹಲವು ದಾಖಲೆಗಳ ನಿರ್ಮಾಣ ಮಾಡಿದ್ದಾರೆ.
ಹೌದು... ನಿನ್ನೆಯಷ್ಟೇ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಪಡೆದು 39 ವರ್ಷಗಳ ಹಳೆಯ ದಾಖಲೆಯನ್ನು ಮುರಿದ್ದ ಬುಮ್ರಾ ಇದೀಗ ಮತ್ತೆ ಎರಡನೇ ಇನ್ನಿಂಗ್ಸ್ ನಲ್ಲೂ 2 ವಿಕೆಟ್ ಪಡೆಯುವ ಮೂಲಕ ಕೋಚ್ ರವಿಶಾಸ್ತ್ರಿ ಅವರ ಹೆಸರಲ್ಲಿದ್ದ ಹಳೆಯ ದಾಖಲೆಯೊಂದನ್ನು ಕೂಡ ಹಿಂದಿಕ್ಕಿದ್ದಾರೆ. 1985ರಲ್ಲಿ ರವಿಶಾಸ್ತ್ರಿ ಇದೇ ಎಂಸಿಜಿ ಕ್ರೀಡಾಂಗಣದಲ್ಲಿ ಎರಡೂ ಇನ್ನಿಂಗ್ಸ್ ಗಳಿಂದ 179 ರನ್ ನೀಡಿ ವಿಕೆಟ್ ಗಳಿಸಿದ್ದರು, ಇದೀಗ ಈ ದಾಖಲೆಯನ್ನು ಬುಮ್ರಾ ಹಿಂದಿಕ್ಕಿದ್ದು, ಕೇವಲ 51 ರನ್ ನೀಡಿ ಬುಮ್ರಾ 8 ವಿಕೆಟ್ ಕಬಳಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಮತ್ತೋರ್ವ ಭಾರತೀಯ ಬೌಲಿಂಗ್ ಲೆಜೆಂಡ್ ಬಿಎಸ್ ಚಂದ್ರಶೇಖರ್ ಅವರ ಹೆಸರಿದ್ದು, 1977ರಲ್ಲಿ ಚಂದ್ರಶೇಖರ್ ಅವರು104 ರನ್ ಗಳಿಗೆ 12 ವಿಕೆಟ್ ಕಬಳಿಸಿದ್ದರು. (6/52 ಮೊದಲ ಇನ್ನಿಂಗ್ಸ್ ಮತ್ತು 6/52 ಎರಡನೇ ಇನ್ನಿಂಗ್ಸ್) ಇದು ಎಂಸಿಜಿ ಕ್ರೀಡಾಂಗಣದಲ್ಲಿ ಭಾರತೀಯ ಬೌಲರ್ ವೊಬ್ಬರ ಶ್ರೇಷ್ಠ ನಿರ್ವಹಣೆಯಾಗಿದೆ.
39 ವರ್ಷಗಳ ದಾಖಲೆ ಪತನ
ಇನ್ನು ನಿನ್ನೆಯ ಪಂದ್ಯದಲ್ಲಿ 6 ವಿಕೆಟ್ ಗಳಿಸಿದ ಬುಮ್ರಾ ವೃತ್ತಿ ಜೀವನದ ಉತ್ತಮ ಪ್ರದರ್ಶನ ನೀಡಿದ್ದರು. ಈ ಮೂಲಕ ಆಸೀಸ್, ಇಂಗ್ಲೆಂಡ್ ಮತ್ತು ಸೌತ್ ಆಫ್ರಿಕಾ ವಿರುದ್ಧ ಕ್ಯಾಲೆಂಡರ್ ವರ್ಷ ಒಂದರಲ್ಲಿ 5 ವಿಕೆಟ್ ಪಡೆದ ಮೊದಲ ಏಷ್ಯಾ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಅಲ್ಲದೇ 2018 ರಲ್ಲಿ ಟೀಂ ಇಂಡಿಯಾ ಪರ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಶಮಿ ಅವರೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್‍ಗೆ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ವರ್ಷದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಬುಮ್ರಾ ಮಾಡಿದ್ದಾರೆ. 2018 ವರ್ಷದಲ್ಲಿ ಬುಮ್ರಾ 45 ವಿಕೆಟ್ ಪಡೆದಿದ್ದಾರೆ. 1979 ರಲ್ಲಿ ದಿಲೀಪ್ ದೋಷಿ ಪಾದಾರ್ಪಣೆ ಮಾಡಿದ ವರ್ಷದಲ್ಲಿ 40 ವಿಕೆಟ್ ಪಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕ್ರಿಕೆಟ್indiaಆಸ್ಟ್ರೇಲಿಯಾಟೀಂ ಇಂಡಿಯಾAustraliaMelbourneಮೆಲ್ಬೋರ್ನ್Cricket Offbeatಜಸ್ ಪ್ರೀತ್ ಬುಮ್ರಾJuspreet Bumrah
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


