ಕ್ರಿಕೆಟ್

ಬುಮ್ರಾ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ, 39 ವರ್ಷಗಳ ಹಳೆಯ ದಾಖಲೆ ಉಡೀಸ್!

ಆಸ್ಟ್ರೇಲಿಯಾ ತಂಡದ ಕುಸಿತಕ್ಕೆ ಕಾರಣವಾಗಿ ಭಾರತಕ್ಕೆ 292 ರನ್ ಗಳ ಮುನ್ನಡೆ ತಂದುಕೊಟ್ಟ ಭಾರತೀಯ ವೇಗಿ ಜಸ್ ಪ್ರೀತ್ ಬುಮ್ರಾ 39 ವರ್ಷಗಳ ಹಳೆಯ ಅಪರೂಪದ ದಾಖಲೆಯನ್ನು ಮುರಿದಿದ್ದಾರೆ.

ಬುಮ್ರಾ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ, 39 ವರ್ಷಗಳ ಹಳೆಯ ದಾಖಲೆ ಉಡೀಸ್!
ಬುಮ್ರಾ ಮಾರಕ ಬೌಲಿಂಗ್
Published On :
ಮೆಲ್ಬೋರ್ನ್​​: ಆಸ್ಟ್ರೇಲಿಯಾ ತಂಡದ ಕುಸಿತಕ್ಕೆ ಕಾರಣವಾಗಿ ಭಾರತಕ್ಕೆ 292 ರನ್ ಗಳ ಮುನ್ನಡೆ ತಂದುಕೊಟ್ಟ ಭಾರತೀಯ ವೇಗಿ ಜಸ್ ಪ್ರೀತ್ ಬುಮ್ರಾ 39 ವರ್ಷಗಳ ಹಳೆಯ ಅಪರೂಪದ ದಾಖಲೆಯನ್ನು ಮುರಿದಿದ್ದಾರೆ.
ಹೌದು.. ಇಂದು ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ದಿನದಾಟದಲ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ಜೀವನ ಅತ್ತುತ್ತಮ ನಿರ್ವಹಣೆ ತೋರಿದ ಜಸ್ ಪ್ರೀತ್ ಬುಮ್ರಾ ಟಿಮ್ ಪೈನೆ ಪಡೆಯ ಪ್ರಮುಖ 6 ವಿಕೆಟ್ ಪಡೆದರು.. ಬುಮ್ರಾ ಅವರ ಈ ದಾಖಲೆ ಇದೀಗ 39 ವರ್ಷಗಳಷ್ಟು ಹಳೆಯ ಅಪರೂಪದ ದಾಖಲೆಯನ್ನು ಹಿಂದಿಕ್ಕಿದ್ದು, ಪದಾರ್ಪಣೆ ಮಾಡಿದ ವರ್ಷದಲ್ಲೇ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ಆಟಗಾರ ಎಂಬ ಕೀರ್ತಿಗೆ ಬುಮ್ರಾ ಪಾತ್ರರಾಗಿದ್ದಾರೆ.
ಜಸ್ ಪ್ರೀತ್ ಬುಮ್ರಾ ಇದೇ 2018ರ ಜನವರಿ 5 ರಂದು ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಬುಮ್ರಾ ಒಟ್ಟು 8 ಪಂದ್ಯಗಳನ್ನಾಡಿದ್ದು, ಇಂದಿನ ಪಂದ್ಯವೂ ಸೇರಿದಂತೆ ಒಟ್ಟು 41 ವಿಕೆಟ್  ಪಡೆದಿದ್ದಾರೆ. ಆ ಮೂಲಕ ಬುಮ್ರಾ ಪದಾರ್ಪಣೆ ಮಾಡಿದ ವರ್ಷದಲ್ಲೇ ಅತೀ ಹೆಚ್ಚು ವಿಕೆಟ್ ಪಡೆದ ಭಾರತದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಬುಮ್ರಾ ಇಂದು ಆಸಿಸ್ ನ ಪ್ರಮುಖ ಬ್ಯಾಟ್ಸ​ಮನ್ ಗಳಾದ ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಟಿಮ್ ಪೈನೆ, ನಾಥನ್ ಲ್ಯಾನ್ ಹಾಗೂ ಜೋಶ್ ಹೇಜಲ್ ವುಡ್ ಅವರನ್ನು ಔಟ್ ಮಾಡಿದ್ದರು. 15.5 ಓವರ್ ಬೌಲಿಂಗ್ ಮಾಡಿದ ಬುಮ್ರಾ ಕೇವಲ 33 ರನ್​ ನೀಡಿದ 6 ವಿಕೆಟ್ ಪಡೆದಿದ್ದರು.
ಇದಕ್ಕೂ ಮೊದಲು ಭಾರತ ಪರ 1979ರಲ್ಲಿ ದಿಲೀಪ್ ದೋಶಿ ಅವರ 40 ವಿಕೆಟ್ ಪಡೆದಿದ್ದರು. ಈಗ ಬುಮ್ರಾ 2018ರಲ್ಲಿ 41 ವಿಕೆಟ್ ಪಡೆಯುವ ಮೂಲಕ 39 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಅಂತೆಯೇ ಬುಮ್ರಾ ತಮ್ಮ ಅಪರೂಪದ ಸಾಧನೆ ಮೂಲಕ ಭಾರತದ ಕ್ರಿಕೆಟ್ ದಂತಕಥೆ ವೆಂಕಟೇಶ್ ಪ್ರಸಾದ್ (37 ವಿಕೆಟ್, 1996), ನರೇಂದ್ರ ಹಿರ್ವಾನಿ (36 ವಿಕೆಟ್, 1988) ಮತ್ತು ಶ್ರೀಶಾಂತ್ (35 ವಿಕೆಟ್, 2006) ರನ್ನು ಹಿಂದಿಕ್ಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.