ವಿಡಿಯೋ: ಮತ್ತೆ ಮರುಕಳಿಸಿದ ಹಳೆಯ ತಪ್ಪು, ಶತಕ ವಂಚಿತರಾದ ಕ್ಯಾಪ್ಟನ್ ಕೊಹ್ಲಿ
ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಹಳೆಯ ತಪ್ಪು ಮತ್ತೆ ಮರುಕಳಿಸಿದ್ದು, ತಮ್ಮ ತಪ್ಪಿನಿಂದಾಗಿಯೇ ಕೊಹ್ಲಿ ಶತಕ ವಂಚಿತರಾಗಿದ್ದಾರೆ.

Published On :
ಮೆಲ್ಬೋರ್ನ್ಛ್: ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಹಳೆಯ ತಪ್ಪು ಮತ್ತೆ ಮರುಕಳಿಸಿದ್ದು, ತಮ್ಮ ತಪ್ಪಿನಿಂದಾಗಿಯೇ ಕೊಹ್ಲಿ ಶತಕ ವಂಚಿತರಾಗಿದ್ದಾರೆ.
ಹೌದು..ಮೆಲ್ಬೋರ್ನ್ ಕ್ರೀಡಾಂಗದಣಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಪೂಜಾರ ಜೊತೆ ಅದ್ಬುತ ಇನ್ನಿಂಗ್ಸ್ ಆಡಿದ್ದ ಕೊಹ್ಲಿ 204 ಎಸೆತಗಳಲ್ಲಿ 82 ರನ್ ಸಿಡಿಸಿ ಶತಕ ಅಂಚಿನಲ್ಲಿದ್ದರು. ಆದರೆ ಮಿಚೆಲ್ ಸ್ಟಾರ್ಕ್ ಅವರ ಓವರ್ ನಲ್ಲಿ ಸುಖಾ ಸುಮ್ಮನೆ ಹೋಗುತ್ತಿದ್ದ ಚೆಂಡನ್ನು ಅಪ್ಪರ್ ಕಟ್ ಮಾಡಲು ಹೋಗಿ ತಮ್ಮ ವಿಕೆಟ್ ಕೈ ಚೆಲ್ಲಿದ್ದಾರೆ.
ಪರ್ತ್ ಟೆಸ್ಟ್ ಪಂದ್ಯದಲ್ಲಿ ಶತಕವನ್ನು ಬಾರಿಸಿರುವ ಕೊಹ್ಲಿ, ಮೆಲ್ಬೋರ್ನ್‌ನಲ್ಲಿ 20ನೇ ಅರ್ಧಶತಕ ಸಾಧನೆ ಮಾಡಿದ್ದರು. ಭೋಜನ ವಿರಾಮದ ಬಳಿಕ ವಿರಾಟ್ ಅಲ್ಪ ಮಟ್ಟದ ಫಿಟ್ನೆಸ್ ಸಮಸ್ಯೆಯನ್ನು ಎದುರಿಸಿದರು. ಇದು ಏಕಾಗ್ರತೆಯನ್ನು ಭಂಗವನ್ನುಂಟು ಮಾಡಿ ಆಕ್ರಮಣಕಾರಿ ಹೊಡೆತಕ್ಕೆ ಮುಂದಾಗಿದ್ದರು. ಇದರಂತೆ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ಕೊಹ್ಲಿ ವಿಕೆಟ್ ಕೈ ಚೆಲ್ಲಿದ ಪರಿಯನ್ನು ನೋಡಿದರೆ ಎಂತಹವರಿಗೂ ಅಚ್ಚರಿಯಾಗುತ್ತದೆ. ಶತಕದ ಅಂಚಿನಲ್ಲಿರುವ ಆಟಗಾರ ಇಂತಹ ಅಪಾಯಕಾರಿ ಹೊಡೆತಕ್ಕೆ ಮುಂದಾಗಿದ್ದು ಏಕೆ ಎಂಬ ಪ್ರಶ್ನೆ ಮೂಡುತ್ತದೆ. ಇದೇ ಶಾಟ್ ನಿಂದಾಗಿ ಈ ಹಿಂದೆ ಕೊಹ್ಲಿ ತಮ್ಮ ಫಾರ್ಮ್ ಕಳೆದುಕೊಂಡಿದ್ದರು. ಇದೀಗ ಮತ್ತದೇ ಶಾಟ್ ಕೊಹ್ಲಿ ಅವರ 26ನೇ ಶತಕಕ್ಕೆ ಮುಳವಾಗಿದ್ದು ವಿಪರ್ಯಾಸ. ಸುಮ್ಮನೇ ಹೋಗುತ್ತಿದ್ದ ಚೆಂಡನ್ನು ಕೆಣಕಿದೆ ಕೊಹ್ಲಿ ತಮ್ಮ ಕೈಯಿಂದ ತಾವೇ ವಿಕೆಟ್ ಒಪ್ಪಿಸಿದರು. ಕೊಹ್ಲಿ ವಿಕೆಟ್ ಒಪ್ಪಿಸಿದ ಪರಿಗೆ ಬೌಲರ್ ಸ್ಚಾರ್ಕ್ ಕೂಡ ಮುಸಿ ಮುಸಿ ನಕ್ಕ ವಿಡಿಯೋ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


