ಕ್ರಿಕೆಟ್

ಕೊಹ್ಲಿ ಜಗತ್ತಿನ ಅತೀ ಕೆಟ್ಟ ವರ್ತನೆಯ ಆಟಗಾರ: ಕೊಹ್ಲಿ ವಿರುದ್ಧ ನಟ ನಾಸಿರುದ್ದಿನ್ ಶಾ ಕಿಡಿ!

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕೆಲವೊಮ್ಮೆ ಮೈದಾನದಲ್ಲಿ ಅತಿರೇಕದ ವರ್ತನೆ ತೋರುವುದು ಸಾಮಾನ್ಯ. ಆದರೆ ಬಾಲಿವುಡ್ ನಟ ನಾಸಿರುದ್ದೀನ್ ಶಾ ಕೊಹ್ಲಿ ಜಗತ್ತಿನ ಅತೀ ಕೆಟ್ಟ ವರ್ತನೆಯ...

ಕೊಹ್ಲಿ ಜಗತ್ತಿನ ಅತೀ ಕೆಟ್ಟ ವರ್ತನೆಯ ಆಟಗಾರ: ಕೊಹ್ಲಿ ವಿರುದ್ಧ ನಟ ನಾಸಿರುದ್ದಿನ್ ಶಾ ಕಿಡಿ!
ನಾಸಿರುದ್ದೀನ್ ಶಾ-ವಿರಾಟ್ ಕೊಹ್ಲಿ
Published On :
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕೆಲವೊಮ್ಮೆ ಮೈದಾನದಲ್ಲಿ ಅತಿರೇಕದ ವರ್ತನೆ ತೋರುವುದು ಸಾಮಾನ್ಯ. ಆದರೆ ಬಾಲಿವುಡ್ ನಟ ನಾಸಿರುದ್ದೀನ್ ಶಾ ಕೊಹ್ಲಿ ಜಗತ್ತಿನ ಅತೀ ಕೆಟ್ಟ ವರ್ತನೆಯ ಆಟಗಾರ ಎಂದು ಕಿಡಿಕಾರಿದ್ದಾರೆ. 
ಈ ಹಿಂದೆ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬನಿಗೆ ದೇಶ ಬಿಟ್ಟು ಹೋಗು ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು. ಈ ಘಟನೆ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ, ಕೊಹ್ಲಿ ಜಗತ್ತಿನ ಅತ್ಯುತ್ತಮ ಬ್ಯಾಟ್ಸ್ ಮನ್ ಅಷ್ಟೇ ಅಲ್ಲ. ಜಗತ್ತಿನ ಅತೀ ಕೆಟ್ಟ ವರ್ತನೆಯ ಆಟಗಾರ. ಅವರ ಕ್ರಿಕೆಟ್ ಪ್ರವೃತ್ತಿಯು ತನ್ನ ಸೊಕ್ಕಿನ ಮತ್ತು ಕೆಟ್ಟ ನಡವಳಿಕೆ ತೋರುತ್ತಾ ಬಂದಿದ್ದಾರೆ. ಇಷ್ಟಾದರೂ ನನಗೆ ಈ ದೇಶ ಬಿಡುವ ಉದ್ದೇಶವಿಲ್ಲ ಎಂದು ಬರೆದುಕೊಂಡಿದ್ದಾರೆ. 
ಸದ್ಯ ನಾಸಿರುದ್ದೀನ್ ಶಾ ಪೋಸ್ಟ್ ಗೆ ಪರ ವಿರೋಧ ವ್ಯಕ್ತವಾಗುತ್ತಿದೆ. ಖ್ಯಾತ ಆಟಗಾರನ ಕುರಿತು ಈ ರೀತಿ ಮಾತನಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.