ಕ್ರಿಕೆಟ್

2012ರ ಆಸೀಸ್ ಪ್ರವಾಸದ ವೇಳೆ ಧೋನಿ ನಿರ್ಧಾರದಿಂದ ಶಾಕ್ ಆಗಿತ್ತು: ಗೌತಮ್ ಗಂಭೀರ್

ಕಳೆದ ವಾರವಷ್ಟೇ ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಟೀಂ ಇಂಡಿಯಾ ಹಿರಿಯ ಆಟಗಾರ ಗೌತಮ್ ಗಂಭೀರ್ ಮಾಜಿ ನಾಯಕ ಎಂಎಸ್ ಧೋನಿ ನಾಯಕತ್ವದ ವಿರುದ್ಧ ಕಿಡಿಕಾರಿದ್ದಾರೆ.

2012ರ ಆಸೀಸ್ ಪ್ರವಾಸದ ವೇಳೆ ಧೋನಿ ನಿರ್ಧಾರದಿಂದ ಶಾಕ್ ಆಗಿತ್ತು: ಗೌತಮ್ ಗಂಭೀರ್
ಸಂಗ್ರಹ ಚಿತ್ರ
Published On :
ನವದೆಹಲಿ: ಕಳೆದ ವಾರವಷ್ಟೇ ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಟೀಂ ಇಂಡಿಯಾ ಹಿರಿಯ ಆಟಗಾರ ಗೌತಮ್ ಗಂಭೀರ್ ಮಾಜಿ ನಾಯಕ ಎಂಎಸ್ ಧೋನಿ ನಾಯಕತ್ವದ ವಿರುದ್ಧ ಕಿಡಿಕಾರಿದ್ದಾರೆ.
ಪ್ರಮುಖವಾಗಿ 2012ರಲ್ಲಿ ಆಸ್ಚ್ರೇಲಿಯಾದಲ್ಲಿ ನಡೆ ಸಿಬಿ ಸರೀಸ್ ನಲ್ಲಿ ಧೋನಿ ಕೈಗೊಂಡ ನಿರ್ಣಯಗಳನ್ನು ಗಂಭೀರ್ ಟೀಕಿಸಿದ್ದು, ಆ ಸರಣಿಯಲ್ಲಿ ಧೋನಿ ನಾಯಕತ್ವ ವಿಫಲವಾಗಿತ್ತು ಎಂದು ಹೇಳಿದ್ದಾರೆ. ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಗಂಭೀರ್, 2012ರ ಆಸ್ಟ್ರೇಲಿಯಾದಲ್ಲಿ ಕಾಮನ್‍ವೆಲ್ತ್ ಬ್ಯಾಂಕ್(ಸಿಬಿ) ಸರಣಿಯ ಆಟಗಾರರ ಆಯ್ಕೆ ವೇಳೆ ಧೋನಿ ಅನುಸರಿಸಿದ ನೀತಿಯ ಕುರಿತು ಟೀಕೆ ಮಾಡಿದ್ದಾರೆ.
'ಸರಣಿಯಲ್ಲಿ ಸೆಹ್ವಾಗ್ ಹಾಗೂ ಸಚಿನ್ ರೊಂದಿಗೆ ನನ್ನನ್ನು ಆಡಿಸಲು ಆಗುವುದಿಲ್ಲ ಎಂದು ಅಂದು ತಂಡದ ನಾಯಕತ್ವ ವಹಿಸಿದ್ದ ಎಂಎಸ್ ಧೋನಿ ಹೇಳಿದ್ದರು. 2015ರ ವಿಶ್ವಕಪ್ ಗೆ ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಧೋನಿ ಈ ನಿರ್ಧಾರ ಕೈಗೊಂಡಿದ್ದರು ಎಂದು ತಿಳಿಸಿದ್ದಾರೆ. ಆದರೆ ಸರಣಿಯಲ್ಲಿ ಗೆಲುವು ಪಡೆಯಲು ತಂಡ ಹೆಣಗಾಡಿದ ಬಳಿಕ ಧೋನಿ ಈ ತೀರ್ಮಾನದಿಂದ ಹಿಂದೆ ಸರಿದರು. ಈ ವೇಳೆ ನನಗೆ ಒನ್ ಡೌನ್ ಬ್ಯಾಟ್ಸ್ ಮನ್ ಆಗಿ ಆಡಲು ಅವಕಾಶ ನೀಡಿದ್ದರು ಎಂದು ಧೋನಿಯ ನಾಯಕತ್ವದ ನಿರ್ಧಾರದ ಬಗ್ಗೆ ಟೀಕೆ ಮಾಡಿದ್ದಾರೆ.
ಧೋನಿ ತಮ್ಮ ತಪ್ಪಿನ ಅರಿವಾದ ಬಳಿಕ ತೀರ್ಮಾನ ಬದಲಿಸಿದ್ದರು. ಆದರೆ ಯಾವುದೇ ಒಂದು ವಿಷಯದಲ್ಲಿ ನಿರ್ಧಾರ ಕೈಗೊಂಡ ಬಳಿಕ ಆ ನಿರ್ಧಾರದಿಂದ ಹಿಂದೆ ಸರಿಯಬಾರದು. ಆದರೆ ಅಂದು ಧೋನಿ ಕೈಗೊಂಡ ನಿರ್ಧಾರ ನನಗೆ ದೊಡ್ಡ ಶಾಕ್ ಆಗಿತ್ತು. ಏಕೆಂದರೆ 2012ರಲ್ಲೇ 2015 ವಿಶ್ವಕಪ್ ಕಾರಣ ಹೇಳಿ ನನಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದಿದ್ದರು. ಯಾವುದೇ ಒಬ್ಬ ಆಟಗಾರನಿಗೆ ಮೈದಾನದಲ್ಲಿ ರನ್ ಗಳಿಸುವ ಕೌಶಲ್ಯವಿದ್ದರೆ ಆತ ಬಯಸಿದಂತೆ ಆಟವನ್ನು ಮುಂದುವರಿಸಬಹುದು. ಇದನ್ನೇ ನಾವು ಆಸ್ಟ್ರೇಲಿಯಾ ಸರಣಿಯಲ್ಲಿ ತಿಳಿಸಿಕೊಂಡೆವು. ನಾನು ಸೇರಿದಂತೆ ಮೂವರು ಆಟಗಾರರು ಒಟ್ಟಿಗೆ ಆಡಬೇಕಿತ್ತು. ಅಂದು ಧೋನಿ ರೊಟೇಷನ್ ಕಾರಣ ನೀಡಿ ನನಗೆ ಅವಕಾಶ ನೀಡಲಿಲ್ಲ. ಆ ಬಳಿಕ ನಡೆದ ಪಂದ್ಯದಲ್ಲಿ ಸಚಿನ್ ಹಾಗೂ ಸೆಹ್ವಾಗ್ ಆರಂಭಿಕರಾಗಿ ಕಣಕ್ಕೆ ಇಳಿದರೆ, ನಾನು 3 ಹಾಗೂ ಕೊಹ್ಲಿ 4ನೇ ಕ್ರಮಾಂಕದಲ್ಲಿ ಅಡಿದೆವು. ಈ ಪಂದ್ಯದಲ್ಲಿ ಟೀಂ ಇಂಡಿಯಾ 37 ಓವರ್ ಗಳಲ್ಲೇ ಜಯ ಪಡೆದಿತ್ತು ಎಂದು ಗಂಭೀರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.