ಎಂಎಸ್ ಧೋನಿ ದೇಶದ ಹೀರೋ, ನನ್ನ ಸಾಧನೆ ಅವರಿಗೆ ಅರ್ಪಣೆ: ರಿಷಬ್
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ದೇಶದ ಹೀರೋ. ನನ್ನ ಸಾಧನೆ ಅವರಿಗೆ ಅರ್ಪಣೆ ಎಂದು ಯುವ ಕ್ರಿಕೆಟಿಗ ರಿಷಬ್ ಪಂತ್ ಹೇಳಿದ್ದಾರೆ...

Published On :
ಸಿಡ್ನಿ: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ದೇಶದ ಹೀರೋ. ನನ್ನ ಸಾಧನೆ ಅವರಿಗೆ ಅರ್ಪಣೆ ಎಂದು ಯುವ ಕ್ರಿಕೆಟಿಗ ರಿಷಬ್ ಪಂತ್ ಹೇಳಿದ್ದಾರೆ.
ನನ್ನ ಸಾಧನೆಯ ಹಿಂದೆ ಅವರ ಸಲಹೆಗಳು ಪ್ರಮುಖ ಪಾತ್ರವಹಿಸಿವೆ. ಅವರಿಂದ ನಾನು ಹೆಚ್ಚು ಸ್ಪೂರ್ತಿ ಪಡೆದಿದ್ದೇನೆ ಎಂದು ರಿಷಬ್ ಪಂತ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 11 ಕ್ಯಾಚ್ ಪಡೆದಿರುವ ರಿಷಬ್ ಪಂತ್ ದಾಖಲೆ ಬರೆದಿದ್ದಾರೆ. ಇನ್ನು ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಪಂತ್, ಧೋನಿ ನನಗೆ ಹಲವು ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದ್ದರು. ಅವರು ನನ್ನ ಬಳಿ ಇದ್ದರೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚುತ್ತದೆ. ಒಬ್ಬ ವಿಕೆಟ್ ಕೀಪರ್ ಆಗಿ ಮಾತ್ರವಲ್ಲದೇ ವ್ಯಕ್ತಿಗತವಾಗಿಯೂ ಧೋನಿ ಅವರಿಂದ ನಾನು ಹೆಚ್ಚು ಕಲಿತ್ತಿದ್ದೇನೆ ಎಂದರು.
ಎಂಎಸ್ ಧೋನಿ ಒತ್ತಡದ ಸನ್ನಿವೇಶಗಳನ್ನು ಎದುರಿಸುವುದು ಹೇಗೆ ಎನ್ನುವುದರ ಬಗ್ಗೆ ಸಲಹೆ ನೀಡಿದ್ದಾರೆ ಎಂದರು. ಇನ್ನು ಅಡಿಲೇಡ್ ಪಂದ್ಯದಲ್ಲಿ 11 ಕ್ಯಾಚ್ ಪಡೆದ ಪಂತ್ ಜಾಕ್ ರುಲೆಸ್, ಎಬಿಡಿ ವಿಲಿಯರ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದು ಟೀಂ ಇಂಡಿಯಾದ ವೃದ್ಧಿಮಾನ್ ಸಹ ಅವರ 10 ಕ್ಯಾಚ್ ಗಳ ದಾಖಲೆಯನ್ನು ಮುರಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


