ಟೀಂ ಇಂಡಿಯಾದ ಗ್ರೇಟ್ ನಾಯಕ ದಾದಾನೂ ಅಲ್ಲ, ಧೋನಿಯೂ ಅಲ್ಲ, ಆತ ಒಬ್ಬ ಕನ್ನಡಿಗ: ಗಂಭೀರ್
ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ವಿರುದ್ಧ ಹರಿಹಾಯ್ದಿರುವ ಗಂಭೀರ್ ಇದೀಗ ಅತ್ಯುತ್ತಮ ನಾಯಕ ಯಾರು ಅನ್ನುವುದನ್ನು ಬಹಿರಂಗ ಪಡಿಸಿದ್ದಾರೆ.

Published On :
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಗೌತಮ್ ಗಂಭೀರ್ ಇದೀಗ ಟೀಂ ಇಂಡಿಯಾದ ಒಂದೊಂದೆ ಸ್ಫೋಟಕ ಮಾಹಿತಿ ಬಹಿರಂಗ ಮಾಡುತ್ತಿದ್ದಾರೆ.
ಇನ್ನು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ವಿರುದ್ಧ ಹರಿಹಾಯ್ದಿರುವ ಗಂಭೀರ್ ಇದೀಗ ಅತ್ಯುತ್ತಮ ನಾಯಕ ಯಾರು ಅನ್ನುವುದನ್ನು ಬಹಿರಂಗ ಪಡಿಸಿದ್ದಾರೆ.
ಗಂಭೀರ್ ಪ್ರಕಾರ ಟೀಂ ಇಂಡಿಯಾ ಕಂಡ ಅತ್ಯುತ್ತಮ ನಾಯಕ ಸೌರವ್ ಗಂಗೂಲಿಯೂ ಅಲ್ಲ, ಎಂಎಸ್ ಧೋನಿಯೂ ಅಲ್ಲ. ಅದು ನಮ್ಮ ಕನ್ನಡಿಗ ಅನಿಲ್ ಕುಂಬ್ಳೆ ಎಂದು ಗಂಭೀರ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಅನಿಲ್ ಕುಂಬ್ಳೆ ಒಂದು ವರ್ಷ ಟೀಂ ಇಂಡಿಯಾದ ಸಾರಥ್ಯ ವಹಿಸಿದ್ದರು. ಕುಂಬ್ಳೆ ನಾಯಕತ್ವದಲ್ಲಿ 5 ಟೆಸ್ಟ್ ಪಂದ್ಯವನ್ನು ಆಡಿದ್ದೇನೆ. ಕುಂಬ್ಳೆಯಿಂದ ಸಾಕಷ್ಟು ಕಲಿತಿದ್ದೇನೆ. ನಾನು ನೋಡಿದ ನಾಯಕರಲ್ಲಿ ಕುಂಬ್ಳೆ ಗ್ರೇಟ್ ಕ್ಯಾಪ್ಟನ್ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್MS DhoniGautam Gambhirಗೌತಮ್ ಗಂಭೀರ್ಅನಿಲ್ ಕುಂಬ್ಳೆSourav Gangulyಸೌರವ್ ಗಂಗೂಲಿಎಂಎಸ್ ಧೋನಿAnil Kumble
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


