ಐಪಿಎಲ್: ಡೆಲ್ಲಿ ಡೇರ್ ಡೆವಿಲ್ಸ್ ಈಗ 'ಡೆಲ್ಲಿ ಕ್ಯಾಪಿಟಲ್ಸ್'
ಮುಂಬರುವ ಐಪಿಎಲ್ ಟೂರ್ನಿಗಾಗಿ ಸಜ್ಜಾಗುತ್ತಿರುವ ದೆಹಲಿ ಡೇರ್ ಡೆವಿಲ್ಸ್ ತಂಡ ತನ್ನ ಹೆಸರನ್ನು ಬದಲಿಸಿಕೊಂಡಿದ್ದು, ಡೆಲ್ಲಿ ಡೇರ್ ಡೆವಿಲ್ಸ್ ನಿಂದ ಡೆಲ್ಲಿ ಕ್ಯಾಪಿಟಲ್ಸ್ ಎಂದು ಮರು ನಾಮಕರಣ ಮಾಡಿಕೊಂಡಿದೆ.

Published On :
ನವದೆಹಲಿ: ಮುಂಬರುವ ಐಪಿಎಲ್ ಟೂರ್ನಿಗಾಗಿ ಸಜ್ಜಾಗುತ್ತಿರುವ ದೆಹಲಿ ಡೇರ್ ಡೆವಿಲ್ಸ್ ತಂಡ ತನ್ನ ಹೆಸರನ್ನು ಬದಲಿಸಿಕೊಂಡಿದ್ದು, ಡೆಲ್ಲಿ ಡೇರ್ ಡೆವಿಲ್ಸ್ ನಿಂದ ಡೆಲ್ಲಿ ಕ್ಯಾಪಿಟಲ್ಸ್ ಎಂದು ಮರು ನಾಮಕರಣ ಮಾಡಿಕೊಂಡಿದೆ.
ಕೇವಲ ಹೆಸರನ್ನು ಮಾತ್ರವಲ್ಲದೇ ತಂಡ ತನ್ನ ಸಂಪೂರ್ಣ ವೇಷಭೂಷಣವನ್ನೂ ಕೂಡ ಬದಲಿಸಿಕೊಂಡಿದ್ದು, ತಂಡದ ಲೋಗೋ ಕೂಡ ಬದಲಾಗಿದೆ. ಅಂತೆಯೇ ತಂಡದ ಜೆರ್ಸಿ ಕೂಡ ಬದಲಾಯಿಸುವ ಮುನ್ಸೂಚನೆ ನೀಡಿದೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ತಂಡದ ಸಹ ಮಾಲೀಕ ಪಾರ್ಥ್ ಜಿಂದಾಲ್ ಅವರು, ಜೆಎಸ್ ಡಬಲ್ಯೂ ಸ್ಪೋರ್ಟ್ಸ್ ದೇಶದ ಅತ್ಯಂತ ಜನಪ್ರಿಯ ಟೂರ್ನಿಯ ಭಾಗವಾಗುತ್ತಿರುವುದಕ್ಕೆ ಅತೀವ ಅನಂದವಿದೆ. ಹೊಸ ಹೆಸರು, ಹೊಸ ಲೋಗೋ, ಹೊಸ ಜೆರ್ಸಿಯೊಂದಿಗೆ ದೆಹಲಿ ತಂಡ ತನ್ನ ಅಭಿಮಾನಿಗಳಿಗೆ ಬರಪೂರ ಮನರಂಜನೆ ನೀಡಲಿದೆ. ಹೊಸ ಹುರುಪಿನೊಂದಿಗೆ ತಂಡ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಎದುರಾಳಿಗಳನ್ನು ಸಮರ್ಥವಾಗಿ ಎದುರಿಸಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.
ಇನ್ನು ಇತ್ತೀಚೆಗೆ ನಡೆದ ಐಪಿಎಲ್ 12ರ ಟೂರ್ನಿಯ ಹರಾಜು ಪ್ರಕ್ರಿಯೆಯಲ್ಲಿ ಶಿಖರ್ ಧವನ್ ರನ್ನು ಖರೀದಿ ಮಾಡಿದ್ದ ದೆಹಲಿ ತಂಡ ಉಳಿದ ತನ್ನ ಎಲ್ಲ 14 ಆಟಗಾರರನ್ನೂ ಹಾಗೆಯೇ ಉಳಿಸಿಕೊಂಡಿತ್ತು.
ದೆಹಲಿ ತಂಡದ ಆಟಗಾರರ ಪಟ್ಟಿ ಇಂತಿದೆ.
ಶ್ರೇಯಸ್ ಅಯ್ಯರ್ (ನಾಯಕ), ಶಿಖರ್ ಧವನ್, ರಿಷಬ್ ಪಂತ್, ಪೃಥ್ವಿ ಶಾ, ಅಮಿತ್ ಮಿಶ್ರಾ, ಆವೆಶ್ ಖಾನ್, ಹರ್ಷಲ್ ಪಟೇಲ್, ರಾಹುಲ್ ತೆವಾಟಿಯ, ಜಯಂತ್ ಯಾದವ್, ಮಂಜೋತ್ ಕಲ್ರಾ, ಕೊಲಿನ್ ಮುನ್ರೋ, ಕ್ರಿಸ್ ಮೋರಿಸ್, ಕಾಗಿಸೊ ರಾಬಾಡಾ, ಸಂದೀಪ್ ಲಮಿಖಾನೆ, ಟ್ರೆಂಟ್ ಬೌಲ್ಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ನವದೆಹಲಿNew DelhiDelhi Daredevilsದೆಹಲಿ ಡೇರ್ ಡೆವಿಲ್ಸ್IPL 12Delhi Capitalsಐಪಿಎಲ್ 12ದೆಹಲಿ ಕ್ಯಾಪಿಟಲ್ಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


