ಕ್ರಿಕೆಟ್

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನಿಗೆ ಬುಕ್ಕಿ ಜೊತೆ ಸಂಪರ್ಕ, ಬಿರುಗಾಳಿ ಎಬ್ಬಿಸಿದೆ ತನಿಖಾಧಿಕಾರಿ ಹೇಳಿಕೆ!

2011ರ ಏಕದಿನ ವಿಶ್ವಕಪ್ ವಿಜೇತ ಟೀಂ ಇಂಡಿಯಾದ ಅಗ್ರಗ ಆಟಗಾರನೊಬ್ಬ 2008-09ರಲ್ಲಿ ಬುಕ್ಕಿ ಜತೆ ಸಂಪರ್ಕ ಹೊಂದಿದ್ದರು ಎಂದು ಮಿಶ್ರಾ ಹೇಳಿದ್ದಾರೆ...

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನಿಗೆ ಬುಕ್ಕಿ ಜೊತೆ ಸಂಪರ್ಕ, ಬಿರುಗಾಳಿ ಎಬ್ಬಿಸಿದೆ ತನಿಖಾಧಿಕಾರಿ ಹೇಳಿಕೆ!
ಟೀಂ ಇಂಡಿಯಾ ಆಟಗಾರ
Published On :
ನವದೆಹಲಿ: 2013ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖಾಧಿಕಾರಿ ಬಿಬಿ ಮಿಶ್ರಾ ಸ್ಫೋಟಕ ಮಾಹಿತಿ ಬಹಿರಂಗಗೊಳಿಸಿದ್ದು ಇದೀಗ ಕ್ರಿಕೆಟ್ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. 
2011ರ ಏಕದಿನ ವಿಶ್ವಕಪ್ ವಿಜೇತ ಟೀಂ ಇಂಡಿಯಾದ ಅಗ್ರಗ ಆಟಗಾರನೊಬ್ಬ 2008-09ರಲ್ಲಿ ಬುಕ್ಕಿ ಜತೆ ಸಂಪರ್ಕ ಹೊಂದಿದ್ದರು ಎಂದು ಮಿಶ್ರಾ ಹೇಳಿದ್ದಾರೆ. ಆದರೆ ಆಟಗಾರನ ಹೆಸರನ್ನು ಅವರು ಬಹಿರಂಗಪಡಿಸಿಲ್ಲ. 
ಬುಕ್ಕಿ ತಾನು ಆಟಗಾರನೊಂದಿಗೆ ಸಂಪರ್ಕ ಹೊಂದಿದ್ದಾಗಿ ಒಪ್ಪಿಕೊಂಡಿದ್ದ. ಅವರಿಬ್ಬರ ನಡುವಿನ ದೂರವಾಣಿ ಸಂಭಾಷಣೆಯ ಕ್ಲಿಪ್ ನೀಡುವುದಾಗಿ ಹೇಳಿದ್ದ. ಆದರೆ ಸಮಯದ ಅಭಾವದಿಂದ ತನಿಖೆ ನಡೆಸಲು ಸಾಧ್ಯವಾಗಲಿಲ್ಲ. 
ಜೊತೆಗೆ ಕೇವಲ ಐಪಿಎಲ್ ಪ್ರಕರಣದ ತನಿಖೆಯಷ್ಟೇ ನಡೆಸಲು ಆದೇಶ ಇದ್ದಿದ್ದರಿಂದ 2008-09ರ ಪಂದ್ಯದ ವೇಳೆ ನಡೆದಿದೆ ಎನ್ನಲಾದ ಪ್ರಕರಣದ ತನಿಖೆ ನಡೆಸಲು ನನಗೆ ಅವಕಾಶ ಸಿಗಲಿಲ್ಲ ಎಂದು ಮಿಶ್ರಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.