ಕ್ರಿಕೆಟ್

ಕಪಿಲ್ ದೇವ್ ಗೆ ನಾನು ಸರಿಸಮನಲ್ಲ, ನನ್ನನ್ನು ಅವರಿಗೆ ಹೋಲಿಸಬೇಡಿ: ಹಾರ್ದಿಕ್ ಪಾಂಡ್ಯಾ

ಕಪಿಲ್ ದೇವ್ ಲೆಜೆಂಡ್ ಆಟಗಾರರು, ಅವರಿಗೆ ನಾನು ಸರಿಸಮಾನಲ್ಲ. ಅವರೊಂದಿಗೆ ನನ್ನ ಹೋಲಿಕೆ ಮಾಡಬೇಡಿ ಎಂದು ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಹೇಳಿದ್ದಾರೆ.

ಕಪಿಲ್ ದೇವ್ ಗೆ ನಾನು ಸರಿಸಮನಲ್ಲ, ನನ್ನನ್ನು ಅವರಿಗೆ ಹೋಲಿಸಬೇಡಿ: ಹಾರ್ದಿಕ್ ಪಾಂಡ್ಯಾ
ಸಂಗ್ರಹ ಚಿತ್ರ
Published On :
ನಾಟಿಂಗ್ ​ಹ್ಯಾಮ್: ಕಪಿಲ್ ದೇವ್ ಲೆಜೆಂಡ್ ಆಟಗಾರರು, ಅವರಿಗೆ ನಾನು ಸರಿಸಮಾನಲ್ಲ. ಅವರೊಂದಿಗೆ ನನ್ನ ಹೋಲಿಕೆ ಮಾಡಬೇಡಿ ಎಂದು ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಹೇಳಿದ್ದಾರೆ.
ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ಅಂತ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹಾರ್ದಿಕ್ ಪಾಂಡ್ಯಾ, ನನ್ನನ್ನು ಕಪಿಲ್​ ದೇವ್​ ಅವರೊಂದಿಗೆ ಹೋಲಿಸಬೇಡಿ. ನಾನು ಎಂದಿಗೂ ಕಪಿಲ್​ ದೇವ್​ ಆಗಬೇಕು ಎಂದು ಬಯಸಿರಲಿಲ್ಲ. ನಾನು ಹಾರ್ದಿಕ್​ ಪಾಂಡ್ಯ ಆಗಿಯೇ ಇರುತ್ತೇನೆ. ನಾನು ಹಾರ್ದಿಕ್​ ಪಾಂಡ್ಯ ಆಗಿಯೇ ಈ ಹಂತದವರೆಗೆ ಬೆಳೆದಿದ್ದೇನೆ. ಕಪಿಲ್​ ದೇವ್​ ಓರ್ವ ಶ್ರೇಷ್ಠ ಕ್ರಿಕೆಟಿಗ. ಅವರೊಂದಿಗೆ ನನ್ನನ್ನು ಹೋಲಿಸಬೇಡಿ. ನೀವು ನನ್ನನ್ನು ಕಪಿಲ್​ ದೇವ್​ ಅವರೊಂದಿಗೆ ಹೋಲಿಸದಿದ್ದರೆ ನನಗೆ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.
ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಇಂಗ್ಲೆಂಡ್​ ಪ್ರವಾಸದಲ್ಲಿ ಸರಿಯಾದ ನಿರ್ವಹಣೆ ತೋರುತ್ತಿಲ್ಲ ಎಂದು ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇದರ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ನಾನು ಟೀಕಾಕಾರರಿಗಾಗಿ ಆಡುವುದಿಲ್ಲ, ನಾನು ದೇಶಕ್ಕಾಗಿ ಮಾತ್ರ ಆಡುತ್ತೇನೆ. ನನ್ನ ಪ್ರದರ್ಶನಕ್ಕೆ ತಂಡ ಸಂತೃಪ್ತಿ ವ್ಯಕ್ತ ಪಡಿಸಿದೆ. ನನಗೆ ಅಷ್ಟೇ ಸಾಕು ಎಂದು ಟೀಕಾಕಾರಿಗೆ ತಿರುಗೇಟು ನೀಡಿದ್ದಾರೆ.
ನಿನ್ನೆ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನ ಶ್ರೇಷ್ಟ ಪ್ರದರ್ಶನ ತೋರಿದ ಹಾರ್ದಿಕ್ ಪಾಂಡ್ಯಾ, ಕೇವಲ 28 ರನ್ ನೀಡಿ 5 ಪ್ರಮುಖ ವಿಕೆಟ್ ಪಡೆದು, ಭಾರತ ತಂಡ ಮೇಲುಗೈ ಸಾಧಿಸುವಂತೆ ನೋಡಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.