ಕ್ರಿಕೆಟ್

ಲಂಡನ್ : ನಾಳೆಯಿಂದ ಎರಡನೇ ಟೆಸ್ಟ್ : ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ತಾಲೀಮು

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಗೆಲುವಿನ ಅಂಚಿನಲ್ಲಿ ಸೋತು ನಿರಾಸೆ ಅನುಭವಿಸಿರುವ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಅತಿಥೇಯರ ವಿರುದ್ಧ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಟೀಂ ಇಂಡಿಯಾ ಭಾರೀ ಕಸರತ್ತು ನಡೆಸುತ್ತಿದೆ.

ಲಂಡನ್ : ನಾಳೆಯಿಂದ ಎರಡನೇ ಟೆಸ್ಟ್  :  ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ತಾಲೀಮು
ವಿರಾಟ್ ಕೊಹ್ಲಿ
Published On :

ಲಂಡನ್  : ಇಂಗ್ಲೆಂಡ್  ವಿರುದ್ಧದ ಮೊದಲ ಟೆಸ್ಟ್  ಕ್ರಿಕೆಟ್ ಪಂದ್ಯದಲ್ಲಿ  ಗೆಲುವಿನ ಅಂಚಿನಲ್ಲಿ ಸೋತು ನಿರಾಸೆ ಅನುಭವಿಸಿರುವ ಟೀಂ ಇಂಡಿಯಾ ಆಟಗಾರರು ಎರಡನೇ ನಾಳೆಯಿಂದ ಆರಂಭವಾಗಲಿರುವ ದ್ವಿತೀಯ ಟೆಸ್ಟ್   ಪಂದ್ಯದಲ್ಲಿ ಅತಿಥೇಯರ ವಿರುದ್ಧ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ  ಭಾರೀ ತಾಲೀಮು ನಡೆಸಿದ್ದಾರೆ.

ಲಾರ್ಡ್ ಮೈದಾನದಲ್ಲಿ ನಾಳೆಯಿಂದ  ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು,  ಟೀ ಇಂಡಿಯಾ ಆಟಗಾರರು  ಭರ್ಜರಿ ತಾಲೀಮು ನಡೆಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರು ತಾಲೀಮಿ ನಡೆಸಿದ್ದು, ಇಂಗ್ಲೆಂಡ್ ಮಣಿಸುವ ತಂತ್ರ ರೂಪಿಸಿದ್ದಾರೆ.

ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಬ್ಬರು ಸ್ಪಿನ್ನರ್ ಗಳು ಪೀಲ್ಡ್ ನಲ್ಲಿರುವುದು ನಿಶ್ಟಿತ ಆದರೆ, ಇದು ತಂಡದ ಸಮತೋಲನದ ಮೇಲೆ ಅವಲಂಬಿಸಿರುತ್ತದೆ ಎಂದು ಹೇಳಿದ್ದಾರೆ.  ಸ್ಪಿನ್ನರ್ ಗಳಿಂದ ಉತ್ತಮ ಆಟವನ್ನು ನಿರೀಕ್ಷಿಸುವುದಾಗಿ ಅವರು ತಿಳಿಸಿದ್ದಾರೆ.
ಟೀಂ ಇಂಡಿಯಾ ಆಟಗಾರರ ತಾಲೀಮು ವೇಳೆಯಲ್ಲಿ ಮಾಸ್ಟರ್  ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್  ಪುತ್ರ ಅರ್ಜುನ್ ತೆಂಡೊಲ್ಕರ್ ಕೂಡಾ ಪಾಲ್ಗೊಂಡು  ಭಾರತೀಯ ಆಟಗಾರರಿಗೆ ನೆರವು ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.