ಕ್ರಿಕೆಟ್

ವಿಡಿಯೋ: ಬ್ಯಾಟ್ ಬಿಟ್ಟ ಜೋ ರೂಟ್ ಗೆ ಮೈಕ್ ಬಿಟ್ಟು ಸೇಡು ತೀರಿಸಿಕೊಂಡ ವಿರಾಟ್ ಕೊಹ್ಲಿ!

ಈ ಹಿಂದೆ ಏಕದಿನ ಕ್ರಿಕೆಟ್ ಸರಣಿ ವೇಳೆ ಶತಕ ಸಿಡಿಸಿದ ಸಂಭ್ರಮದಲ್ಲಿ ಬ್ಯಾಟ್ ಬಿಟ್ಟು ಕೊಹ್ಲಿ ಕೆಣಕಿದ್ದ ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟ್ಸಮನ್ ಜೋ ರೂಟ್ ಇದೀಗ ತಮ್ಮದೇ ಶೈಲಿಯಲ್ಲಿ ಟೀಂ ಇಂಡಿಯಾ ನಾಯಕನಿಂದ ತಿರುಗೇಟು ಪಡೆದಿದ್ದಾರೆ.

ವಿಡಿಯೋ: ಬ್ಯಾಟ್ ಬಿಟ್ಟ ಜೋ ರೂಟ್ ಗೆ ಮೈಕ್ ಬಿಟ್ಟು ಸೇಡು ತೀರಿಸಿಕೊಂಡ ವಿರಾಟ್ ಕೊಹ್ಲಿ!
ಜೋ ರೂಟ್-ಕೊಹ್ಲಿ ಶೀತಲ ಸಮರ
Published On :
ಲಂಡನ್: ಈ ಹಿಂದೆ ಏಕದಿನ ಕ್ರಿಕೆಟ್ ಸರಣಿ ವೇಳೆ ಶತಕ ಸಿಡಿಸಿದ ಸಂಭ್ರಮದಲ್ಲಿ ಬ್ಯಾಟ್ ಬಿಟ್ಟು ಕೊಹ್ಲಿ ಕೆಣಕಿದ್ದ ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟ್ಸಮನ್ ಜೋ ರೂಟ್ ಇದೀಗ ತಮ್ಮದೇ ಶೈಲಿಯಲ್ಲಿ ಟೀಂ ಇಂಡಿಯಾ ನಾಯಕನಿಂದ ತಿರುಗೇಟು ಪಡೆದಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಆಕ್ರಮಣಕಾರಿ ಮನೋಭಾವದಿಂದಲೇ ಖ್ಯಾತಿ, ಕುಖ್ಯಾತಿ ಪಡೆದ ಕ್ರಿಕೆಟಿಗ. ಸಾಮಾನ್ಯವಾಗಿ ಕೊಹ್ಲಿ ಇತರೆ ಆಟಗಾರರನ್ನು ಕೆಣಕುವುದು ಹೆಚ್ಚು. ಅಂತಹುದರಲ್ಲಿ ಕೊಹ್ಲಿಯನ್ನು ಕೆಣಕಿ ಬದುಕುವುದುಂಟೇ.. ಕೊಹ್ಲಿ ಅವರಿಗೆ ತಿರುಗೇಟು ನೀಡುವವರೆಗೂ ಬಿಡುವುದಿಲ್ಲ. ಬಹುಶಃ ಇಂಗ್ಲೆಂಡ್ ತಂಡದ ಜೋರೂಟ್ ಗೆ ಈ ವಿಚಾರ ನಿನ್ನೆ ಅರ್ಥವಾಗಿರಬೇಕು.
ಈ ಹಿಂದೆ ಏಕದಿನ ಕ್ರಿಕೆಟ್ ಸರಣಿಯಲ್ಲಿ ಜೋ ರೂಟ್ ಶತಕ ಸಿಡಿಸಿದಾಗ ಕೊಹ್ಲಿಯನ್ನು ಕೆಣಕುವಂತೆ ಕೈಯಲ್ಲಿದ್ಜ ಬ್ಯಾಟ್ ಅನ್ನು ಕೆಳಗೆ ಬಿಟ್ಟು ಶತಕ ಸಂಭ್ರಮ ಮಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಮತ್ತು ಟ್ರಾಲ್ ಗಳಿಗೆ ಕಾರಣವಾಗಿತ್ತು. ಆದರೆ ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಕೊಹ್ಲಿ, ಅವಕಾಶಕ್ಕಾಗಿ ಕಾಯುತ್ತಿದ್ದರು.
Story image
ನಿನ್ನೆ ಅವರಿಗೆ ಈ ಅವಕಾಶ ಸಿಕ್ಕಿದ್ದು, ಬ್ಯಾಟಿಂಗ್ ಮಾಡುತ್ತಿದ್ದ ಜೋ ರೂಟ್ 2 ರನ್ ಕದಿಯಲು ಹೋಗಿ ರನೌಟ್ ಆದರು. ಕೂಡಲೇ ಕೊಹ್ಲಿ ಜೋರೂಟ್ ವಿಕೆಟ್ ಉರುಳಿಸಿದ ಸಂಭ್ರಮದ ನಿಮಿತ್ತ ಮೈಕ್ ಅನ್ನು ಡ್ರಾಪ್ ಮಾಡುವ ರೀತಿಯಲ್ಲಿ ಅವರನ್ನು ಕಿಚಾಯಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಇದೀಗ ರೂಟ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ಟ್ರಾಲ್ ತುತ್ತಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.